ವಾರಾಂತ್ಯದಲ್ಲಿ ಬಿಹಾರಕ್ಕೆ ಮತ್ತೆ ಪ್ರಧಾನಿ ಮೋದಿ ಭೇಟಿ; 3 ಚುನಾವಣಾ ರ್ಯಾಲಿಗಳಲ್ಲಿ ಭಾಷಣ

|

Updated on: May 22, 2024 | 7:24 PM

ಲೋಕಸಭಾ ಚುನಾವಣೆಯ ಕೊನೆಯ ಕೆಲವು ಹಂತಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಗೆಲುವಿಗಾಗಿ ರಾಜಕೀಯ ಪಕ್ಷಗಳು ಅಂತಿಮ ಕಸರತ್ತು ನಡೆಸುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ 25ರಂದು ಮತ್ತೆ ಬಿಹಾರದಲ್ಲಿ ಮೂರು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವಾರಾಂತ್ಯದಲ್ಲಿ ಬಿಹಾರಕ್ಕೆ ಮತ್ತೆ ಪ್ರಧಾನಿ ಮೋದಿ ಭೇಟಿ; 3 ಚುನಾವಣಾ ರ್ಯಾಲಿಗಳಲ್ಲಿ ಭಾಷಣ
ಪ್ರಧಾನಿ ಮೋದಿ
Follow us on

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೇ 25ರಂದು ಬಿಹಾರದಲ್ಲಿ ಮತ್ತೆ ಮೂರು ಚುನಾವಣಾ ರ್ಯಾಲಿಗಳನ್ನು (Lok Sabha Election Rally) ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಈ ಮೂಲಕ ಬಿಹಾರದಲ್ಲಿ ಮೋದಿಯವರ ರ್ಯಾಲಿಗಳ ಒಟ್ಟು ಸಂಖ್ಯೆ 15ಕ್ಕೆ ಏರಿಕೆಯಾಗಲಿದೆ.

ಮಂಗಳವಾರ ಮಹಾರಾಜ್‌ಗಂಜ್ ಮತ್ತು ಸಿವಾನ್‌ನಲ್ಲಿ ನಡೆದ 2 ಚುನಾವಣಾ ಸಭೆಗಳಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಇಂಡಿಯಾ ಬ್ಲಾಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ವಾರಾಂತ್ಯದಲ್ಲಿ ಮತ್ತೆ 3 ರ್ಯಾಲಿಗಳನ್ನು ಉದ್ದೇಶಿಸಿ ಬಿಹಾರದಲ್ಲಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಇದನ್ನೂ ಓದಿ: Lok Sabha Elections: 2024ರಲ್ಲಿ ಮಾತ್ರವಲ್ಲ 2029ರಲ್ಲೂ ಮೋದಿಯೇ ಭಾರತದ ಪ್ರಧಾನಿ: ರಾಜನಾಥ್​ ಸಿಂಗ್

ಜೂನ್ 1ರಂದು ಕೊನೆಯ ಹಂತದಲ್ಲಿ ಪಾಟಲಿಪುತ್ರ ಚುನಾವಣೆ ನಡೆಯಲಿದೆ. ಪಾಟಲಿಪುತ್ರ, ಬಕ್ಸರ್ ಮತ್ತು ಕರಕತ್‌ನಲ್ಲಿ ಪ್ರಧಾನಿ ಮೋದಿ ಮೂರು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಿಎಂ ಮೋದಿ ಅವರು ಬಿಜೆಪಿ ಮತ್ತು ಅದರ ಮೈತ್ರಿ ಪಾಲುದಾರರ ಪರವಾಗಿ ಪಟ್ಟುಬಿಡದೆ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:22 pm, Wed, 22 May 24