ಲೋಕಸಭಾ ಅಭ್ಯರ್ಥಿಗಳ ಪೈಕಿ ಧನಿಕರು ಇವರೇ; ಟಿಡಿಪಿ ಗುಂಟೂರು ಅಭ್ಯರ್ಥಿಯ ಆಸ್ತಿ ₹ 5,705 ಕೋಟಿ: ಎಡಿಆರ್
ಹರ್ಯಾಣದ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ₹ 1,241 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಮಧ್ಯಪ್ರದೇಶದ ಚಿಂದ್ವಾರಾ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ನಕುಲ್ ನಾಥ್ ₹ 716 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹೇಳಿದೆ
ದೆಹಲಿ ಮೇ 22: ಆಂಧ್ರಪ್ರದೇಶದ (Andhra Pradesh) ಗುಂಟೂರು ಲೋಕಸಭಾ ಕ್ಷೇತ್ರದಿಂದ ಟಿಡಿಪಿಯ (TDP) ಅಭ್ಯರ್ಥಿ ಚಂದ್ರಶೇಖರ್ ಪೆಮ್ಮಸಾನಿ ₹ 5,705 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association of Democratic Reforms) ವಿಶ್ಲೇಷಿಸಿದ ಚುನಾವಣಾ ಅಫಿಡವಿಟ್‌ಗಳ ಪ್ರಕಾರ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ 8,360 ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ ಪೆಮ್ಮಸಾನಿ. ನೆರೆಯ ತೆಲಂಗಾಣದ ಚೆವೆಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಕೊಂಡ ವಿಶ್ವೇಶ್ವರ್ ರೆಡ್ಡಿ ₹ 4,568 ಕೋಟಿ ಆಸ್ತಿ ಘೋಷಿಸಿದ್ದರೆ, ದಕ್ಷಿಣ ಗೋವಾದ ಬಿಜೆಪಿ ಅಭ್ಯರ್ಥಿ ಪಲ್ಲವಿ ಶ್ರೀನಿವಾಸ್ ಡೆಂಪೊ ₹ 1,361 ಕೋಟಿ ಆಸ್ತಿ ಹೊಂದಿದ್ದಾರೆ.
ಹರ್ಯಾಣದ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ₹ 1,241 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಮಧ್ಯಪ್ರದೇಶದ ಚಿಂದ್ವಾರಾ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ನಕುಲ್ ನಾಥ್ ₹ 716 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹೇಳಿದೆ.
ಆಂಧ್ರಪ್ರದೇಶದ ನೆಲ್ಲೂರಿನ ಟಿಡಿಪಿ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ವೇಮಿರೆಡ್ಡಿ ಕೂಡ ₹ 716 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.
ಹೆಚ್ಚಿನ ಮೌಲ್ಯದ ಘೋಷಣೆಗಳನ್ನು ಹೊಂದಿರುವವರಲ್ಲಿ ತಮಿಳುನಾಡಿನ ಈರೋಡ್ ಲೋಕಸಭಾ ಕ್ಷೇತ್ರದಿಂದ ಎಐಎಡಿಎಂಕೆಯ ಅಶೋಕ್ ಕುಮಾರ್ ಮತ್ತು ಕರ್ನಾಟಕದ ಮಂಡ್ಯದಿಂದ ಕಾಂಗ್ರೆಸ್‌ನ ವೆಂಕಟರಮಣೇಗೌಡ ಅಕಾ ‘ಸ್ಟಾರ್ ಚಂದ್ರು’ ಮತ್ತು ಕರ್ನಾಟಕದ ಬೆಂಗಳೂರು ಗ್ರಾಮಾಂತರದಿಂದ ಡಿ ಕೆ ಸುರೇಶ್ ಇದ್ದಾರೆ.
ಕೇಂದ್ರ ಸಚಿವ ಮತ್ತು ಮಧ್ಯಪ್ರದೇಶದ ಗುಣದಿಂದ ಬಿಜೆಪಿ ಅಭ್ಯರ್ಥಿ ಜ್ಯೋತಿರಾದಿತ್ಯ ಎಂ ಸಿಂಧಿಯಾ ₹ 424 ಕೋಟಿ, ಒಡಿಶಾದ ಕಟಕ್‌ನಿಂದ ಬಿಜೆಡಿಯ ಸಂತೃಪ್ತ್ ಮಿಶ್ರಾ ₹ 482 ಕೋಟಿ ಮತ್ತು ಮಹಾರಾಷ್ಟ್ರದ ಕೊಲ್ಹಾಪುರದ ಕಾಂಗ್ರೆಸ್‌ನ ಛತ್ರಪತಿ ಶಾಹು ಶಾಹಜಿ ₹ 342 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.
ಇದನ್ನೂ ಓದಿ: Swati Maliwal case: ಸ್ವಾತಿ ಮಲಿವಾಲ್ ಪ್ರಕರಣ ಬಗ್ಗೆ ಮೌನ ಮುರಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿರುವ ಇತರ ಅಭ್ಯರ್ಥಿಗಳೆಂದರೆ ನಟ-ರಾಜಕಾರಣಿ ಮತ್ತು ಬಿಜೆಪಿಯ ಮಥುರಾ ಅಭ್ಯರ್ಥಿ ಹೇಮಾ ಮಾಲಿನಿ ಮತ್ತು ಪಕ್ಷದ ಝಾನ್ಸಿ ಅಭ್ಯರ್ಥಿ ಅನುರಾಗ್ ಶರ್ಮಾ. ಮಥುರಾ ಮತ್ತು ಝಾನ್ಸಿ ಲೋಕಸಭಾ ಕ್ಷೇತ್ರಗಳು ಉತ್ತರ ಪ್ರದೇಶದಲ್ಲಿವೆ.
ಏಪ್ರಿಲ್ 19 ರಿಂದ ಜೂನ್ 1 ರ ನಡುವೆ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಐದು ಸುತ್ತಿನ ಮತದಾನ ಪೂರ್ಣಗೊಂಡಿದೆ. ಆರನೇ ಮತ್ತು ಏಳು ಹಂತಗಳು ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ