ಪ್ರತಿಪಕ್ಷಗಳು ನಿಮ್ಮ ಜನ್ ಧನ್ ಬ್ಯಾಂಕ್ ಖಾತೆಗಳನ್ನು ಮುಚ್ಚಿ, ಹಣವನ್ನು ಕಸಿದುಕೊಳ್ಳುತ್ತವೆ: ಮೋದಿ
ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೋದಿ ಪ್ರತಿ ಹಳ್ಳಿಗೆ ವಿದ್ಯುತ್ ತಂದರು, ಈ ಜನರು ಮತ್ತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕತ್ತಲೆ ಸೃಷ್ಟಿಸುತ್ತಾರೆ. ಮೋದಿ ಪ್ರತಿ ಮನೆಗೆ ನೀರು ಕೊಡುತ್ತಿದ್ದಾರೆ, ಎಸ್‌ಪಿ-ಕಾಂಗ್ರೆಸ್ ಜನರು ನಿಮ್ಮ ಮನೆಯ ನೀರಿನ ನಲ್ಲಿಯನ್ನು ಸಹ ತೆಗೆದುಕೊಂಡು ಹೋಗುತ್ತಾರೆ. ಅವರು ಇದರಲ್ಲಿ ಪರಿಣತರು ಎಂದಿದ್ದಾರೆ.
ಶ್ರಾವಸ್ತಿ (ಉತ್ತರ ಪ್ರದೇಶ) ಮೇ 22: ತಮ್ಮ ಅಧಿಕಾರಾವಧಿಯಲ್ಲಿ ತೆರೆಯಲಾದ 50 ಕೋಟಿಗೂ ಹೆಚ್ಚು ಜನ್ ಧನ್ ಬ್ಯಾಂಕ್ ಖಾತೆಗಳನ್ನು (Jan Dhan bank accounts) ಮುಚ್ಚಿ ಪ್ರತಿಪಕ್ಷಗಳು ಆ ಹಣವನ್ನು ಕಸಿದುಕೊಳ್ಳುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಹೇಳಿದ್ದಾರೆ. ಉತ್ತರ ಪ್ರದೇಶದ (Uttar Pradesh)ಶ್ರಾವಸ್ತಿಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ನಾವು 50 ಕೋಟಿಗೂ ಹೆಚ್ಚು ಬಡವರಿಗೆ ಜನ್ ಧನ್ ಖಾತೆಗಳನ್ನು ತೆರೆದಿದ್ದೇವೆ. ಅವರು (ಪ್ರತಿಪಕ್ಷಗಳು) ನಿಮ್ಮ ಬ್ಯಾಂಕ್ ಖಾತೆಯನ್ನು ಮುಚ್ಚಿ ನಿಮ್ಮ ಹಣವನ್ನು ಕಸಿದುಕೊಳ್ಳುತ್ತಾರೆ ಎಂದಿದ್ದಾರೆ.
“ಮೋದಿ ಪ್ರತಿ ಹಳ್ಳಿಗೆ ವಿದ್ಯುತ್ ತಂದರು, ಈ ಜನರು ಮತ್ತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕತ್ತಲೆ ಸೃಷ್ಟಿಸುತ್ತಾರೆ. ಮೋದಿ ಪ್ರತಿ ಮನೆಗೆ ನೀರು ಕೊಡುತ್ತಿದ್ದಾರೆ, ಎಸ್‌ಪಿ-ಕಾಂಗ್ರೆಸ್ ಜನರು ನಿಮ್ಮ ಮನೆಯ ನೀರಿನ ನಲ್ಲಿಯನ್ನು ಸಹ ತೆಗೆದುಕೊಂಡು ಹೋಗುತ್ತಾರೆ. ಅವರು ಇದರಲ್ಲಿ ಪರಿಣತರು. ಎಸ್‌ಪಿ-ಕಾಂಗ್ರೆಸ್ ಒಕ್ಕೂಟವು ಬಡವರಿಗೆ ಮಂಜೂರು ಮಾಡಿದ 4 ಕೋಟಿ ಮನೆಗಳ ಕೀಗಳನ್ನು ತೆಗೆದುಕೊಂಡು ಅವರ “ವೋಟ್ ಬ್ಯಾಂಕ್” ಗೆ ನೀಡುತ್ತದೆ ಎಂದಿದ್ದಾರೆ ಮೋದಿ.
ಪ್ರಧಾನಿ ಮೋದಿ ಭಾಷಣ
#WATCH | Addressing a public meeting in Shravasti, Uttar Pradesh, Prime Minister Narendra Modi says, “Yesterday I saw a video in which people were running and going on the stage. I asked about it then I came to know that SP-Congress gives money to bring people to their rallies.… pic.twitter.com/Xw4MEIeMOP
— ANI (@ANI) May 22, 2024
“ಮೋದಿ ಬಡವರಿಗೆ 4 ಕೋಟಿ ಮನೆಗಳನ್ನು ಕೊಟ್ಟರು, ಈಗ ಎಸ್ಪಿ ಕಾಂಗ್ರೆಸ್ ಜನರು ಇದೆಲ್ಲದರ ಉಲ್ಟಾ ಕಾರ್ಯಗಳನ್ನು ಮಾಡಲು ನಿರ್ಧರಿಸಿದ್ದಾರೆ . ಅವರು ನಿಮ್ಮಿಂದ ಈ 4 ಕೋಟಿ ಮನೆಗಳ ಕೀಗಳನ್ನು ತೆಗೆದುಕೊಂಡು ಮನೆಗಳನ್ನು ಕಿತ್ತುಕೊಂಡು ಅವರ ಮತ ಬ್ಯಾಂಕ್ ಗೆ ನೀಡುತ್ತಾರೆ”.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಇಂದು ಜೈಲಿನಲ್ಲಿರುವ ಭಯೋತ್ಪಾದಕರನ್ನು ಪ್ರಧಾನಿ ಮನೆಗೆ ಕರೆಸಿ ಬಿರಿಯಾನಿ ತಿನ್ನಿಸುತ್ತಾರೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ಯುಪಿಯಲ್ಲಿ ಮತ್ತೆ ಇಬ್ಬರು ಹುಡುಗರ ಜೋಡಿ ಆರಂಭ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಉತ್ತರ ಪ್ರದೇಶ ಲೋಕಸಭೆ ಚುನಾವಣೆಯಲ್ಲಿ “ಇಬ್ಬರು ಹುಡುಗರ ಜೋಡಿ” ಮತ್ತೆ ಶುರು ಮಾಡಿದೆ ಎಂದು ಹೇಳಿದರು. 60 ವರ್ಷಗಳಿಂದ ಏನೂ ಮಾಡದ ಜನರು ಮೋದಿಯನ್ನು ತಡೆಯಲು ಒಟ್ಟಾಗಿದ್ದಾರೆ. ಯುಪಿಯಲ್ಲಿ ಮತ್ತೆ ಇಬ್ಬರು ಹುಡುಗರ ಜೋಡಿ ಲಾಂಚ್ ಆಗಿದೆ. ಅದೇ ಹಳೆಯ ಫ್ಲಾಪ್ ಚಿತ್ರ, ಅದೇ ಹಳೆಯ ಪಾತ್ರಗಳು, ಅದೇ ಹಳೆಯ ಡೈಲಾಗ್‌ಗಳು. ಇಡೀ ಚುನಾವಣೆ ಮುಗಿಯಲಿದೆ ಆದರೆ ನೀವು ಈ ಜನರಿಂದ ಒಂದೇ ಒಂದು ಹೊಸ ವಿಷಯವನ್ನು ಕೇಳಿದ್ದೀರಾ?… ಶೆಹಜಾದೆಗಳಿಇಬ್ಬರೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನನ್ನೂ ಹೇಳಲಿಲ್ಲ, ಅವರು ಏಕೆ ಮತ ಕೇಳುತ್ತಿದ್ದಾರೆ?
ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ಜಂಟಿ ರ‍್ಯಾಲಿಯಲ್ಲಿ ಭಾರೀ ಜನಸಮೂಹದ ವೈರಲ್ ವಿಡಿಯೊಗಳಿಗೆ ಪ್ರತಿಕ್ರಿಯಿಸಿದ ಮೋದಿ, “ಜನರು ವೇದಿಕೆಯತ್ತ ಧಾವಿಸುತ್ತಿರುವ ಕೆಲವು ವಿಡಿಯೊಗಳನ್ನು ನಾನು ನೋಡಿದೆ. ಹಾಗಾದರೆ, ಇದು ಏನು ಎಂದು ನಾನು ಕೇಳಿದೆ. ಕಾಂಗ್ರೆಸ್ ಮತ್ತು ಎಸ್‌ಪಿ ತಮ್ಮ ರ್ಯಾಲಿಗಳಲ್ಲಿ ಪಾಲ್ಗೊಳ್ಳಲು ಜನರಿಗೆ ಹಣ ನೀಡುತ್ತವೆ ಎಂದು ನನಗೆ ಹೇಳಲಾಗಿದೆ. ಅವರು ಅವರಿಗೆ ಹಣ ನೀಡಲಿಲ್ಲ, ಆದ್ದರಿಂದ ಜನರು ವೇದಿಕೆಯತ್ತ ಧಾವಿಸಿದರು ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
ಇದನ್ನೂ ಓದಿ: Amit Shah: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 30 ಸ್ಥಾನ ಪಡೆದರೆ ಟಿಎಂಸಿ ಛಿದ್ರವಾಗಲಿದೆ; ಅಮಿತ್ ಶಾ
“ಅವರ ಪರಿಸ್ಥಿತಿ ಹೀಗಿದ್ದರೆ, ಅವರು ನಿಮಗಾಗಿ ಹೇಗೆ ಕೆಲಸ ಮಾಡುತ್ತಾರೆ?” ಎಂದು ಮೋದಿ ಪ್ರಶ್ನಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ