ದೆಹಲಿ ಮೇ 29: ಮೂರು ದಿನಗಳ ಧ್ಯಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕನ್ಯಾಕುಮಾರಿಗೆ ಹೊರಡುವ ಮೊದಲು, ಕಾಂಗ್ರೆಸ್ ಬುಧವಾರ ಚುನಾವಣಾ ಆಯೋಗವನ್ನು (Election Commission) ಸಂಪರ್ಕಿಸಿದ್ದು, ಪ್ರಧಾನಿಯವರ ಈ ಕ್ರಮವು ಮಾದರಿ ನೀತಿ ಸಂಹಿತೆಯ (MCC) “ಉಲ್ಲಂಘನೆ” ಎಂದು ಹೇಳಿದೆ. 48 ಗಂಟೆಗಳ ಮೌನಾಚರಣೆ ಅವಧಿಯಲ್ಲಿ ಯಾರಿಗೂ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಚಾರ ಮಾಡಲು ಅವಕಾಶ ನೀಡಬಾರದು ಎಂದು ನಾವು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ದೆಹಲಿಯ ಚುನಾವಣಾ ಆಯೋಗದ ಕಚೇರಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಆದಾಗ್ಯೂ, “ಯಾವುದೇ ನಾಯಕರು ಏನು ಮಾಡಿದರೂ” ನಮ್ಮ ವಿರೋಧಿಸುವುದಿಲ್ಲ ಎಂದು ಸಿಂಘ್ವಿ ಸ್ಪಷ್ಟಪಡಿಸಿದ್ದಾರೆ. “ಮತ್ತೊಂದೆಡೆ, ಪ್ರಧಾನಿಯವರ ಧ್ಯಾನವು ಮಾದರಿ ಸಂಹಿತೆಯ ಉಲ್ಲಂಘನೆಯಾಗಿದೆ, ಏಕೆಂದರೆ ಮೋದಿಯವರ ಧ್ಯಾನ ಮೇ 30 ರಂದು ಬೆಳಿಗ್ಗೆ 7 ರಿಂದ ಜೂನ್ 1 ರವರೆಗೆ ಇರುತ್ತದೆ. ಪ್ರಚಾರವನ್ನು ಮುಂದುವರಿಸಲು ಅಥವಾ “ಸದಾ ಸುದ್ದಿಯಲ್ಲಿರಲು ಪ್ರಧಾನ ಮಂತ್ರಿಯ “ತಂತ್ರ” ಇದು ಎಂದು ಸಿಂಘ್ವಿ ಟೀಕಿಸಿದ್ದಾರೆ.
#WATCH | Delhi: On Congress delegation meeting the ECI, Senior advocate Abhishek Manu Singhvi says, “We told the Election Commission, that during the silence period of 48 hours, no one should be allowed to campaign, directly or indirectly. We have no objection to whatever any… pic.twitter.com/yzLsr7av89
— ANI (@ANI) May 29, 2024
“ಪ್ರಧಾನಿ ಅವರು ತಮ್ಮ ಮೌನ ವ್ರತವನ್ನು 24-48 ಗಂಟೆಗಳ ಕಾಲ ಜೂನ್ 1 ರ ಸಂಜೆಗೆ ಮುಂದೂಡಬೇಕೆಂದು ನಾವು ಚುನಾವಣಾ ಆಯೋಗವನ್ನು ಕೇಳಿದ್ದೇವೆ. ಆದರೆ ಅವರು ನಾಳೆಯೇ ಪ್ರಾರಂಭಿಸಲು ಪಟ್ಟು ಹಿಡಿದರೆ ಅದನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಸಿಂಘ್ವಿ ಹೇಳಿದ್ದಾರೆ.
2019 ರಲ್ಲಿ, ಪ್ರಧಾನಿ ಮೋದಿ ಅವರು ಸತತ ಎರಡನೇ ಅವಧಿಗೆ ಆಯ್ಕೆಯಾದಾಗ ಆ ವರ್ಷದ ಲೋಕಸಭೆ ಚುನಾವಣೆಯ ಫಲಿತಾಂಶಗಳ ಘೋಷಣೆಗೆ ಮುಂಚಿತವಾಗಿ ಬದರಿನಾಥ್ ಮತ್ತು ಕೇದಾರನಾಥ ದೇಗುಲಗಳಿಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಸಿನಿಮಾದಿಂದಲೇ ಜನರಿಗೆ ಮಹಾತ್ಮಾ ಗಾಂಧಿ ಗೊತ್ತಾಗಿದ್ದು; ಮೋದಿ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ
ಬಿಜೆಪಿಯ ಹಿರಿಯ ನಾಯಕ ಮತ್ತು ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಾರಣಾಸಿಯಿಂದ ಹ್ಯಾಟ್ರಿಕ್ ಗೆಲುವನ್ನು ಬಯಸುತ್ತಿದ್ದಾರೆ, ಅಲ್ಲಿಂದ ಅವರು 2014 ರಲ್ಲಿ ತಮ್ಮ ಚೊಚ್ಚಲ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಉತ್ತರ ಪ್ರದೇಶದ ಏಳನೇ ಮತ್ತು ಅಂತಿಮ ಹಂತದಲ್ಲಿ ಶನಿವಾರ ಮತದಾನ ನಡೆಯಲಿದೆ. ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಬರಲಿದೆ.
ಏಳನೇ ಹಂತದ ಪ್ರಚಾರ ಗುರುವಾರ ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ