ಸಿನಿಮಾದಿಂದಲೇ ಜನರಿಗೆ ಮಹಾತ್ಮಾ ಗಾಂಧಿ ಗೊತ್ತಾಗಿದ್ದು; ಮೋದಿ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

1982ರಲ್ಲಿ ರಿಚರ್ಡ್ ಅಟೆನ್‌ಬರೋ ಅವರ ‘ಗಾಂಧಿ’ ಸಿನಿಮಾ ನಿರ್ಮಾಣವಾಗುವವರೆಗೂ ಮಹಾತ್ಮಾ ಗಾಂಧಿ ಬಗ್ಗೆ ಜಗತ್ತಿಗೆ ಗೊತ್ತಿರಲಿಲ್ಲ ಎಂಬ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್‌ ತೀವ್ರ ಟೀಕೆ ಮಾಡಿದೆ. ಮಹಾತ್ಮಾ ಗಾಂಧಿ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದರೂ ಜಗತ್ತಿಗೆ ಅವರ ಬಗ್ಗೆ ತಿಳಿದಿರಲಿಲ್ಲ. ಕಳೆದ 75 ವರ್ಷಗಳಲ್ಲಿ ಗಾಂಧಿಯವರಿಗೆ ಜಾಗತಿಕ ಮನ್ನಣೆ ಸಿಗುವಂತೆ ಮಾಡುವುದು ರಾಷ್ಟ್ರದ ಜವಾಬ್ದಾರಿಯಲ್ಲವೇ ಎಂದು ಕೇಳಿದ್ದರು.

ಸಿನಿಮಾದಿಂದಲೇ ಜನರಿಗೆ ಮಹಾತ್ಮಾ ಗಾಂಧಿ ಗೊತ್ತಾಗಿದ್ದು; ಮೋದಿ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ
ಪಿಎಂ ನರೇಂದ್ರ ಮೋದಿ
Follow us
ಸುಷ್ಮಾ ಚಕ್ರೆ
|

Updated on: May 29, 2024 | 6:58 PM

ನವದೆಹಲಿ: 1982ರಲ್ಲಿ ತೆರೆಕಂಡ ರಿಚರ್ಡ್ ಅಟೆನ್‌ಬರೋ (Richard Attenborough) ಅವರ ಸಿನಿಮಾ ಗಾಂಧಿಗೂ (Gandhi Movie) ಮೊದಲು ಜಗತ್ತಿಗೆ ಮಹಾತ್ಮಾ ಗಾಂಧಿ ಬಗ್ಗೆ ತಿಳಿದಿರಲಿಲ್ಲ ಎಂದು ಟಿವಿ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಬಗ್ಗೆ ಎಕ್ಸ್​ನಲ್ಲಿ ವ್ಯಂಗ್ಯವಾಡಿರುವ ರಾಹುಲ್ ಗಾಂಧಿ, ಎಂಟೈರ್ ಪೊಲಿಟಿಕಲ್ ಸೈನ್ಸ್ ವಿದ್ಯಾರ್ಥಿ ಮಾತ್ರ ಮಹಾತ್ಮ ಗಾಂಧಿಯವರ ಬಗ್ಗೆ ತಿಳಿದುಕೊಳ್ಳಲು ಚಲನಚಿತ್ರವನ್ನು ನೋಡಬೇಕಾಗುತ್ತದೆ ಎಂದು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಎಂಟೈರ್ ಪೊಲಿಟಿಕಲ್ ಸೈನ್ಸ್​ ವಿಷಯದ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪ್ರಮಾಣಪತ್ರವನ್ನು ಈ ಹಿಂದೆ ಬಿಜೆಪಿ ತನ್ನ ಎಕ್ಸ್​ ಪೇಜಿನಲ್ಲಿ ಪೋಸ್ಟ್ ಮಾಡಿತ್ತು. ಅದನ್ನು ಪ್ರಸ್ತಾಪಿಸಿರುವ ರಾಹುಲ್ ಗಾಂಧಿ ‘ಕೇವಲ ಸಂಪೂರ್ಣ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗೆ’ ಮಾತ್ರ ಸಿನಿಮಾ ನೋಡಿ ಗಾಂಧೀಜಿಯನ್ನು ತಿಳಿದುಕೊಳ್ಳಬೇಕಾದ ಅಗತ್ಯವಿರುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ನವೀನ್ ಪಟ್ನಾಯಕ್ ಆರೋಗ್ಯದ ತನಿಖೆಗೆ ವಿಶೇಷ ಸಮಿತಿ ರಚನೆ; ಪ್ರಧಾನಿ ಮೋದಿ

ಏನಿದು ಪ್ರಕರಣ?:

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಟಿವಿ ಸಂದರ್ಶನವೊಂದರಲ್ಲಿ, ಬೆನ್ ಕಿಂಗ್ಸ್ಲಿ ಅವರ ಗಾಂಧಿ (1982) ಸಿನಿಮಾ ಬರುವವರೆಗೆ ಮಹಾತ್ಮ ಗಾಂಧಿ ಬಗ್ಗೆ ಈ ಜಗತ್ತಿಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆಯ ಕೊನೆಯ ಹಂತಕ್ಕೆ ಮುಂಚಿತವಾಗಿ ಈ ಹೇಳಿಕೆ ಬಂದಿದೆ.

ತಮ್ಮ ವಿಶ್ವ ಪ್ರವಾಸಗಳ ಅವಲೋಕನಗಳನ್ನು ಸಂದರ್ಶನದಲ್ಲಿ ಹಂಚಿಕೊಂಡ ಪಿಎಂ ನರೇಂದ್ರ ಮೋದಿ, ಮಹಾತ್ಮ ಗಾಂಧಿಯವರನ್ನು ವಿಶ್ವವೇ ಗುರುತಿಸುವಂತೆ ಮಾಡಲು ರಿಚರ್ಡ್ ಅಟೆನ್‌ಬರೋ ಅವರ 1982ರ ಚಲನಚಿತ್ರ ‘ಗಾಂಧಿ’ ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲಿಯವರೆಗೂ ಜಗತ್ತಿನವರಿಗೆ ಗಾಂಧಿ ಬಗ್ಗೆ ತಿಳಿದಿರಲಿಲ್ಲ ಎಂದಿದ್ದರು.

ಇದನ್ನೂ ಓದಿ: ‘ನರೇಂದ್ರ ಮೋದಿ ಒಬಿಸಿ ಆದದ್ದು ಹೇಗೆ?’; ಜಾತಿ ಗಣತಿ ಪರ ಮತ್ತೆ ರಾಹುಲ್ ಗಾಂಧಿ ಬ್ಯಾಟಿಂಗ್

ಮಹಾತ್ಮಾ ಗಾಂಧಿಯವರು ಜಗತ್ತಿನ ಮಹಾನ್ ಚೇತನ, ಈ 75 ವರ್ಷಗಳಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಜಗತ್ತಿಗೆ ತಿಳಿಸುವುದು ನಮ್ಮ ಜವಾಬ್ದಾರಿಯಲ್ಲವೇ? ಅವರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ, ಕ್ಷಮಿಸಿ, ಆದರೆ ಜಗತ್ತಿನಲ್ಲಿ ಅವರ ಬಗ್ಗೆ ಮೊದಲ ಬಾರಿಗೆ ಕುತೂಹಲ ಹುಟ್ಟಿತು. ‘ಗಾಂಧಿ’ ಚಿತ್ರ ನಿರ್ಮಾಣವಾದಾಗ ಜಗತ್ತಿನ ಜನರಿಗೆ ಗಾಂಧೀಜಿ ಬಗ್ಗೆ ಗೊತ್ತಾಯಿತು. ಆದರೆ, ಭಾರತೀಯರಾದ ನಮಗೆ ಗಾಂಧೀಜಿಯ ಬಗ್ಗೆ ತಿಳಿಸಲು ಸಾಧ್ಯವಾಗಲಿಲ್ಲ” ಎಂದು ಪ್ರಧಾನಿ ಸಂದರ್ಶನದಲ್ಲಿ ಹೇಳಿದ್ದರು.

ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲಾ ಅವರಂತಹ ಇತರ ನಾಯಕರ ಬಗ್ಗೆ ಜಗತ್ತಿಗೆ ತಿಳಿದಿತ್ತು. ಆದರೆ, ಗಾಂಧಿ ಅವರೆಲ್ಲರಿಗಿಂತಲೂ ಕಡಿಮೆಯೇನಿಲ್ಲ ಎಂದು ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ