Mamata Banerjee: ಚುನಾವಣೆ ಪ್ರಚಾರದ ವೇಳೆ ಸಿಎಂ ಮಮತಾ ಬ್ಯಾನರ್ಜಿ ಡ್ಯಾನ್ಸ್; ವಿಡಿಯೋ ವೈರಲ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲೋಕಸಭಾ ಚುನಾವಣೆಯ 7ನೇ ಮತ್ತು ಕೊನೆಯ ಹಂತದ ಪ್ರಚಾರ ನಡೆಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಇತರ ಮಹಿಳಾ ಕಾರ್ಯಕರ್ತರೊಂದಿಗೆ ಮಮತಾ ಬ್ಯಾನರ್ಜಿ ವೇದಿಕೆಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

Mamata Banerjee: ಚುನಾವಣೆ ಪ್ರಚಾರದ ವೇಳೆ ಸಿಎಂ ಮಮತಾ ಬ್ಯಾನರ್ಜಿ ಡ್ಯಾನ್ಸ್; ವಿಡಿಯೋ ವೈರಲ್
ಮಮತಾ ಬ್ಯಾನರ್ಜಿ
Follow us
|

Updated on: May 29, 2024 | 7:27 PM

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಅವರು ಇಂದು ಪಶ್ಚಿಮ ಬಂಗಾಳದಲ್ಲಿ (West Bengal) ತಮ್ಮ ಸಾರ್ವಜನಿಕ ರ‍್ಯಾಲಿಯಲ್ಲಿ ವೇದಿಕೆಯ ಮೇಲೆ ಹಲವಾರು ಮಹಿಳೆಯರೊಂದಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಮತಾ ಬ್ಯಾನರ್ಜಿ ಭಾಗವಹಿಸಿದ್ದ ರ‍್ಯಾಲಿ ಮುಕ್ತಾಯವಾಗುತ್ತಿದ್ದಂತೆ, ಅವರು ವೇದಿಕೆಯಲ್ಲಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಮಹಿಳಾ ಕಾರ್ಯಕರ್ತರೊಂದಿಗೆ ಸೇರಿಕೊಂಡು ಸಾಂಪ್ರದಾಯಿಕ ಗೀತೆಗೆ ಡ್ಯಾನ್ಸ್ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಮಹಿಳೆಯರೊಂದಿಗೆ ನಿಂತು ಕಾಲು ಕುಣಿಸುತ್ತಾ, ಅವರ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಂತರ ಅವರು ವೇದಿಕೆಯಿಂದ ಕೆಳಗಿಳಿದು, ಡ್ಯಾನ್ಸ್ ಮಾಡಲು ತನ್ನನ್ನು ಹುರಿದುಂಬಿಸಿದ ಸಭಿಕರತ್ತ ಕೈ ಬೀಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಇಂಡಿಯಾ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಲೋಕಸಭೆ ಚುನಾವಣೆಗೆ 72 ಗಂಟೆಗಳಿಗಿಂತ ಕಡಿಮೆ ಸಮಯ ಉಳಿದಿದ್ದು, ಮಮತಾ ಬ್ಯಾನರ್ಜಿ ಮತ್ತು ಅವರ ಟಿಎಂಸಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಭಾರೀ ಪ್ರಚಾರವನ್ನು ನಡೆಸುತ್ತಿದೆ.

ಜೂನ್ 1ರಂದು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್ ಸೇರಿದಂತೆ 9 ಸ್ಥಾನಗಳಲ್ಲಿ 7ನೇ ಹಂತದಲ್ಲಿ ಮತದಾನ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು