ಲೋಕಸಭೆ ಚುನಾವಣೆಯಲ್ಲಿ 272 ಸ್ಥಾನ ಗೆಲ್ಲದಿದ್ದರೆ ಬಿಜೆಪಿಯ ಪ್ಲಾನ್ ಬಿ ಏನು?; ಅಮಿತ್ ಶಾ ಉತ್ತರ ಹೀಗಿದೆ

|

Updated on: May 17, 2024 | 2:59 PM

ಪ್ಲಾನ್ ಎ (ಯಶಸ್ವಿಯಾಗಲು) 60% ಕ್ಕಿಂತ ಕಡಿಮೆ ಅವಕಾಶವಿರುವಾಗ ಮಾತ್ರ ಪ್ಲಾನ್ ಬಿ ಮಾಡಬೇಕಾಗಿದೆ. ಪಿಎಂ ಮೋದಿ ಅವರು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಾರೆ ಎಂದು ನನಗೆ ಖಚಿತವಾಗಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯ ದೊಡ್ಡ ಬೆಂಬಲಿಗರು ಪ್ರಧಾನಿ ಮೋದಿ ಎಂದು ಅಮಿತ್ ಶಾ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ 272 ಸ್ಥಾನ ಗೆಲ್ಲದಿದ್ದರೆ ಬಿಜೆಪಿಯ ಪ್ಲಾನ್ ಬಿ ಏನು?; ಅಮಿತ್ ಶಾ ಉತ್ತರ ಹೀಗಿದೆ
ಅಮಿತ್ ಶಾ
Follow us on

ದೆಹಲಿ ಮೇ 17: ಲೋಕಸಭೆಯಲ್ಲಿ (Lok Sabha Election) ಬಿಜೆಪಿ ಬಹುಮತದ ಅರ್ಧ ಸೀಟುಗಳನ್ನು ದಾಟದೇ ಇದ್ದರೆ ಮುಂದಿನ ಯೋಜನೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಅದು ಸಂಭವಿಸುವ ಸಾಧ್ಯತೆಯನ್ನು ನಾನು ನೋಡುತ್ತಿಲ್ಲ. ಹಾಗಾಗಿ ಬಿಜೆಪಿಗೆ (BJP) ಪ್ಲಾನ್ ಬಿ ಬೇಕಾಗಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 272ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ ಬಿಜೆಪಿಯ ಯೋಜನೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಅಂತಹ ಯಾವುದೇ ಸಾಧ್ಯತೆಗಳು ನನಗೆ ಕಾಣುತ್ತಿಲ್ಲ, 60 ಕೋಟಿ ಫಲಾನುಭವಿಗಳ ಸೈನ್ಯವು ಪ್ರಧಾನಿ ಮೋದಿಯವರೊಂದಿಗೆ ನಿಂತಿದೆ. ಅವರಿಗೆ ಯಾವುದೇ ಜಾತಿ ಅಥವಾ ವಯೋಮಾನವಿಲ್ಲ.ಈ ಎಲ್ಲಾ ಪ್ರಯೋಜನಗಳನ್ನು ಪಡೆದವರಿಗೆ ನರೇಂದ್ರ ಮೋದಿ ಯಾರು? ಅವರಿಗೆ 400 ಸೀಟು ಯಾಕೆ ನೀಡಬೇಕು ಎಂಬುದು ಗೊತ್ತು.

ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಬಿಜೆಪಿಯ ಪ್ಲಾನ್ ಬಿ ಬಗ್ಗೆ ಕೇಳಿದಾಗ, ಅದು ಬಹುಮತವನ್ನು ತಲುಪದಿದ್ದರೆ, ಪಕ್ಷದ ಪ್ಲಾನ್ ಎ ಯಶಸ್ವಿಯಾಗುತ್ತದೆ ಎಂದು ಅಮಿತ್ ಶಾ ಹೇಳಿದರು. “ಪ್ಲಾನ್ ಎ (ಯಶಸ್ವಿಯಾಗಲು) 60% ಕ್ಕಿಂತ ಕಡಿಮೆ ಅವಕಾಶವಿರುವಾಗ ಮಾತ್ರ ಪ್ಲಾನ್ ಬಿ ಮಾಡಬೇಕಾಗಿದೆ. ಪಿಎಂ ಮೋದಿ ಅವರು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಾರೆ ಎಂದು ನನಗೆ ಖಚಿತವಾಗಿದೆ”. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯ ದೊಡ್ಡ ಬೆಂಬಲಿಗರು ಪ್ರಧಾನಿ ಮೋದಿ ಎಂದು ಅಮಿತ್ ಶಾ ಹೇಳಿದ್ದಾರೆ.

‘ಉತ್ತರ-ದಕ್ಷಿಣ’ ವಿಭಜನೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
“ಇದು ಪ್ರತ್ಯೇಕ ದೇಶ ಎಂದು ಯಾರಾದರೂ ಹೇಳಿದರೆ ಅದು ತುಂಬಾ ಆಕ್ಷೇಪಾರ್ಹವಾಗಿದೆ, ಈ ದೇಶವನ್ನು ಈಗ ಎಂದಿಗೂ ವಿಭಜಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಜಿಸುವ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅದನ್ನು ನಿರಾಕರಿಸುವುದಿಲ್ಲ ಅಥವಾ ಈ ಹೇಳಿಕೆಯಿಂದ ಅಂತರ ಕಾಪಾಡಿಲ್ಲ. ದೇಶದ ಜನತೆ ಕಾಂಗ್ರೆಸ್ ಪಕ್ಷದ ಕಾರ್ಯಸೂಚಿಯ ಬಗ್ಗೆ ಯೋಚಿಸಬೇಕು. ಈ ಚುನಾವಣೆಯಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ 5 ರಾಜ್ಯಗಳನ್ನು ಒಟ್ಟುಗೂಡಿಸಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.

ದೇಶದ ರಾಜಕೀಯದಲ್ಲಿ ಸ್ಥಿರತೆ ತರಲು 400ಕ್ಕೂ ಹೆಚ್ಚು ಸ್ಥಾನಗಳ ಅಗತ್ಯವಿದೆ. ಸಂವಿಧಾನವನ್ನು ಬದಲಾಯಿಸುವ ಜನಾದೇಶ ಬಿಜೆಪಿಗಿದೆ. ಆದರೆ ನಾವು ಎಂದಿಗೂ ಅದನ್ನು ಮಾಡಲಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಲೋಕಸಭೆಯಲ್ಲಿ 400 ಸ್ಥಾನಗಳನ್ನು ಹೊಂದಿರುವ ಬಿಜೆಪಿಯು ಗಡಿಗಳನ್ನು ರಕ್ಷಿಸಲು, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಲು ಮತ್ತು ಬಡವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಎಲ್ಲಿ ಬುಲ್ಡೋಜರ್ ಚಲಾಯಿಸಬೇಕು ಎಂದು ಯೋಗಿ ಆದಿತ್ಯನಾಥ್ ಅವರಿಂದ ಕಲಿಯಿರಿ: ಮೋದಿ

ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸಂವಿಧಾನವನ್ನು ತಿದ್ದುಪಡಿ ಮಾಡಲು ಬಯಸುತ್ತದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿ ಪ್ರಯೋಜನಗಳನ್ನು ಕಿತ್ತುಕೊಂಡು ಮುಸ್ಲಿಂ ಸಮುದಾಯಕ್ಕೆ ನೀಡಲು ಕಾಂಗ್ರೆಸ್ ಉದ್ದೇಶಿಸಿದೆ ಎಂದು ಬಿಜೆಪಿ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Fri, 17 May 24