AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manipur Assembly Polls: ಮಣಿಪುರ ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಗುಂಡು ಹಾರಿಸಿಕೊಂಡು ಸಾವು; ಆತ್ಮಹತ್ಯೆಯಲ್ಲ

ಮತದಾನ ಪ್ರಾರಂಭವಾಗಿ ಅರ್ಧಗಂಟೆಯೂ ಕಳೆಯುವ ಮೊದಲೇ ಮಣಿಪುರ ಮುಖ್ಯಮಂತ್ರಿ ಎನ್​.ಬಿರೆನ್​ ಸಿಂಗ್​ ಮತ್ತು ರಾಜ್ಯಪಾಲ ಲಾ.ಗಣೇಶನ್​ ತಮ್ಮ ಮತ ಚಲಾಯಿಸಿದ್ದಾರೆ.

Manipur Assembly Polls: ಮಣಿಪುರ ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಗುಂಡು ಹಾರಿಸಿಕೊಂಡು ಸಾವು; ಆತ್ಮಹತ್ಯೆಯಲ್ಲ
ಸಾಂದರ್ಭಿಕ ಚಿತ್ರ
TV9 Web
| Updated By: Lakshmi Hegde|

Updated on: Feb 28, 2022 | 5:40 PM

Share

ಇಂದು ಮಣಿಪುರ ವಿಧಾನಸಭೆ ಚುನಾವಣೆ (Manipur Assembly Election) ಮೊದಲ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದಲೂ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದರೂ, ಚುರಚಾಂದ್​​ಪುರ ತಿಪೈಮುಖ್ ವಿಧಾನಸಭಾ ಕ್ಷೇತ್ರದಲ್ಲಿ ಒಂದು ದುರ್ಘಟನೆ ನಡೆದಿದೆ. ಚುನಾವಣಾ ಕರ್ತವ್ಯದಲ್ಲಿದ್ದ ನವೋರೆಮ್ ಇಬೋಚೌಬಾ ಎಂಬುವರು ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಇವರು ತಾವು ಕೈಯಲ್ಲಿ ಹಿಡಿದಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ತಮಗೇ ಫೈರಿಂಗ್​ ಮಾಡಿಕೊಂಡು ಮೃತಪಟ್ಟಿದ್ದಾಗಿ ಮುಖ್ಯ ಚುನಾವಣಾಧಿಕಾರಿ ರಾಜೇಶ್ ಅಗರ್​ವಾಲ್​ ಮಾಹಿತಿ ನೀಡಿದ್ದಾರೆ. ಮೃತ ಪೊಲೀಸ್ ಅಧಿಕಾರಿ ಕಕ್​​ಚಿಂಗ್​ ಜಿಲ್ಲೆಯವರು ಎಂದು ಹೇಳಲಾಗಿದೆ.

ಇಂದು ಬೆಳಗ್ಗೆ 7ಗಂಟೆಯಿಂದ ಮಣಿಪುರದಲ್ಲಿ ಮತದಾನ ಶುರುವಾಗಿದ್ದು, ಮಧ್ಯಾಹ್ನ 3ಗಂಟೆ ಹೊತ್ತಿಗೆ 67.53ರಷ್ಟು ಮತಚಲಾವಣೆಯಾಗಿತ್ತು. ಮಾರ್ಚ್​ 5ಕ್ಕೆ ಎರಡನೇ ಹಂತದ ಮತದಾನವಿದ್ದು, ಮಾರ್ಚ್​ 10ಕ್ಕೆ ಮತ ಎಣಿಕೆ ನಡೆಯಲಿದೆ. ಇಂದು ಬೆಳಗ್ಗೆ ಚುರ್​ಚಾಂದ್​ಪುರ ಜಿಲ್ಲೆಯಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದರಲ್ಲಿ ಇವಿಎಂ ಮಷಿನ್​ ಧ್ವಂಸಗೊಂಡಿದೆ. ಎನ್​ಪಿಪಿ ಅಭ್ಯರ್ಥಿಯ ವಾಹನಕ್ಕೆ ಹಾನಿಯಾಗಿದೆ ಎಂದೂ ವರದಿಯಾಗಿದೆ.

ಮತದಾನ ಪ್ರಾರಂಭವಾಗಿ ಅರ್ಧಗಂಟೆಯೂ ಕಳೆಯುವ ಮೊದಲೇ ಮಣಿಪುರ ಮುಖ್ಯಮಂತ್ರಿ ಎನ್​.ಬಿರೆನ್​ ಸಿಂಗ್​ ಮತ್ತು ರಾಜ್ಯಪಾಲ ಲಾ.ಗಣೇಶನ್​ ತಮ್ಮ ಮತ ಚಲಾಯಿಸಿದ್ದಾರೆ. ಪಶ್ಚಿಮ ಇಂಫಾಲ್​ ಜಿಲ್ಲೆಯ ಸಾಗೋಲ್​ಬಾದ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತದಾನ ಮಾಡಿದ ರಾಜ್ಯಪಾಲ ಗಣೇಶನ್​,  ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮತಚಲಾಯಿಸಬೇಕು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇದೆ. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಸಂಕೇತ ಎಂದು ಹೇಳಿದರು.

ಮೊದಲ ಹಂತದಲ್ಲಿ ಚುನಾವಣೆ ಎದುರಿಸಿದ ಪ್ರಮುಖರ ಪೈಕಿ ಮಣಿಪುರ ಸಿಎಂ ಎನ್​.ಬಿರೆನ್​ ಸಿಂಗ್​ (ಹೈಜಾಂಗ್​), ವಿಧಾನಸಭೆ ಸ್ಪೀಕರ್​ ವೈ. ಖೇಮ್​ಚಾಂದ್​ ಸಿಂಗ್​ (ಸಿಂಗ್​​ಜಾಮೇಯ್​) ಉಪ ಮುಖ್ಯಮಂತ್ರಿ ಯಮ್ನಮ್​ ಜಾಯ್​​ಕುಮಾರ್​ ಸಿಂಗ್ (ಉರಿಪೊಕ್​), ಕಾಂಗ್ರೆಸ್​ ಮಣಿಪುರ ರಾಜ್ಯ ಮುಖ್ಯಸ್ಥ ಎನ್​. ಲೋಕೇಶ್​ (ನಾಂಬೋಲ್​​) ಇದ್ದಾರೆ.

ಇದನ್ನೂ ಓದಿ: Video: ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ ಯುಎಸ್​​ನಲ್ಲಿ ಭರ್ಜರಿ ಮಾರಾಟವಾಗ್ತಿದೆ ರಷ್ಯಾ ವೋಡ್ಕಾ; ಚರಂಡಿ ತುಂಬಿ ಹರಿಯುತ್ತಿದೆ !

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ