Northeast Election Results: ನಾಗಾಲ್ಯಾಂಡ್, ತ್ರಿಪುರಾದಲ್ಲಿ ಬಿಜೆಪಿ ಜಯಭೇರಿ; ಮೇಘಾಲಯದಲ್ಲಿ ಸಂಗ್ಮಾ ಜತೆ ಮೈತ್ರಿ ಸರ್ಕಾರ ರಚನೆಗೆ ಸಿದ್ಧತೆ
ಮೇಘಾಲಯದಲ್ಲಿ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ರಾಜ್ಯ ಚುನಾವಣೆಗಳಲ್ಲಿ ಬಹುಮತದ ಕೊರತೆಯ ನಂತರ ಮತ್ತೊಂದು ಅವಧಿಯನ್ನು ಪಡೆದುಕೊಳ್ಳಲು ಸಹಾಯವನ್ನು ಪಡೆಯಲು ಅಮಿತ್ ಶಾಗೆ ಕರೆ ಮಾಡಿದ್ದಾರೆ. ಅವರ ಮನವಿಯನ್ನು ತಡಮಾಡದೆ ಈಡೇರಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಬಿಜೆಪಿ(BJP) ಮತ್ತು ಅದರ ಮಿತ್ರಪಕ್ಷಗಳು ತ್ರಿಪುರಾ (Tripura) ಮತ್ತು ನಾಗಾಲ್ಯಾಂಡ್‌ನಲ್ಲಿ (Nagaland) ಅಧಿಕಾರವನ್ನು ಉಳಿಸಿಕೊಂಡಿವೆ. ಇತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಬಲವನ್ನು ಕೋರಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮೇಘಾಲಯದಲ್ಲಿ (Meghalaya) ಮತ್ತೆ ಸರ್ಕಾರವನ್ನು ರಚಿಸಲು ಸಿದ್ಧತೆ ನಡೆಸುತ್ತಿದ್ದಾರೆ. ತ್ರಿಪುರಾದಲ್ಲಿ, ಎಡಪಕ್ಷಗಳು ಮತ್ತು ಕಾಂಗ್ರೆಸ್‌ನ ಮೊದಲ ಮೈತ್ರಿ ಮತ್ತು ಬುಡಕಟ್ಟು ಸ್ಥಾನಗಳಲ್ಲಿ ಪ್ರಬಲ ಶಕ್ತಿಯಾಗಿ ಟಿಪ್ರಾ ಮೋಥ ಹೊರಹೊಮ್ಮುವಿಕೆಯು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ವಿಫಲವಾಗಿದೆ.
ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ: ರೌಂಡಪ್
- ತ್ರಿಪುರಾದಲ್ಲಿ ಬಿಜೆಪಿಯ ಮತ ಹಂಚಿಕೆ ಮತ್ತು ಸ್ಥಾನಗಳ ಸಂಖ್ಯೆ ಕಡಿಮೆಯಾಗಿದೆ ಆದರೆ ಎಡ-ಕಾಂಗ್ರೆಸ್ ಮೈತ್ರಿ ಪರಿಸ್ಥಿತಿ ಕೆಟ್ಟದಾಗಿದೆ. 60 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದುಕೊಂಡಿತು, 2018 ರಲ್ಲಿ ಇದು 36 ಸ್ಥಾನಗಳಿಸಿತ್ತು. ಪ್ರತಿಪಕ್ಷದ ಮೈತ್ರಿಕೂಟದ ಒಟ್ಟು ಸಂಖ್ಯೆ 14 ಆಗಿದ್ದರೆ, 2018 ರಲ್ಲಿ ಸಿಪಿಐ(ಎಂ) ಸ್ವಂತವಾಗಿ ಹೋರಾಡಿದಾಗ 16 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಬಾರಿಯೂ ಕಾಂಗ್ರೆಸ್ ಖಾತೆ ತೆರೆಯಲು ವಿಫಲವಾಗಿತ್ತು.
- ಆದಾಗ್ಯೂ, ಬಿಜೆಪಿಗೆ ಹೊಡೆತ ನೀಡಿದ ಸಂಗತಿ ಎಂದರೆ ಹಿಂದಿನ ರಾಜಮನೆತನದ ವಂಶಸ್ಥರಾದ ಪ್ರದ್ಯುತ್ ದೆಬ್ಬರ್ಮಾ ನೇತೃತ್ವದ ಟಿಪ್ರಾ ಮೋಥಾದ ಗೆಲುವು ಮತ್ತು ಬಿಜೆಪಿಯ ಬುಡಕಟ್ಟು ಮಿತ್ರ ಪಕ್ಷವಾದ ಐಪಿಎಫ್‌ಟಿ ಸ್ಥಾನಗಳಲ್ಲಿ ಕುಸಿತ. ಈ ಬಾರಿ ಐಪಿಎಫ್‌ಟಿ ಕೇವಲ ಒಂದು ಸ್ಥಾನ ಮಾತ್ರ ಗೆದ್ದಿದೆ.
- ಬಿಜೆಪಿಯು ತನ್ನದೇ ಆದ ಪ್ರಮುಖ ಬುಡಕಟ್ಟು ಮುಖ ಮತ್ತು ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ಟಿಪ್ರಾ ಮೋಥಾ ಪ್ರತಿಸ್ಪರ್ಧಿ ಸುಬೋಧ್ ದೇಬ್ ಬರ್ಮಾ ಮುಂದೆ ಕಣಕ್ಕಿಳಿಸಿ, ಪರಾಭವಗೊಂಡಿದೆ.
- ‘ಗ್ರೇಟರ್ ಟಿಪ್ರಾಲ್ಯಾಂಡ್’ ಪ್ರತ್ಯೇಕ ರಾಜ್ಯಕ್ಕಾಗಿ ಪ್ರದ್ಯುತ್ ತನ್ನ ಬೇಡಿಕೆಯನ್ನು ಕೈಬಿಟ್ಟರೆ ಬಿಜೆಪಿ ನಾಯಕತ್ವವು ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಅನ್ವೇಷಿಸಬಹುದು ಎಂದು ಕೆಲವು ವರದಿಗಳು ಹೇಳಿವೆ.
- ಮೇಘಾಲಯದಲ್ಲಿ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ರಾಜ್ಯ ಚುನಾವಣೆಗಳಲ್ಲಿ ಬಹುಮತದ ಕೊರತೆಯ ನಂತರ ಮತ್ತೊಂದು ಅವಧಿಯನ್ನು ಪಡೆದುಕೊಳ್ಳಲು ಸಹಾಯವನ್ನು ಪಡೆಯಲು ಅಮಿತ್ ಶಾಗೆ ಕರೆ ಮಾಡಿದ್ದಾರೆ. ಅವರ ಮನವಿಯನ್ನು ತಡಮಾಡದೆ ಈಡೇರಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
- 60 ಸದಸ್ಯ ಬಲದ ವಿಧಾನಸಭೆಯಲ್ಲಿ ಸಂಗ್ಮಾ ಅವರ ಪಕ್ಷವು 22 ಸ್ಥಾನಗಳನ್ನು ಗೆದ್ದಿದ್ದು, ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಒಂದು ಸ್ಥಾನದ ಮತದಾನವನ್ನು ರದ್ದುಗೊಳಿಸಲಾಗಿದ್ದು ನಂತರ ನಡೆಸಲಾಗುವುದು.
- ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) 11 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ತಲಾ ಐದು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
- ಕಾನ್ರಾಡ್ ಕೆ ಸಂಗ್ಮಾ ಅವರು ದಕ್ಷಿಣ ತುರಾ ಕ್ಷೇತ್ರದಲ್ಲಿ ಗೆದ್ದಿದ್ದು ಅವರ ಉಪ ಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್ಸಾಂಗ್ 8,140 ಮತಗಳಿಂದ ಪೈನುರ್ಸ್ಲಾ ಸ್ಥಾನವನ್ನು ಗೆದ್ದಿದ್ದಾರೆ.
- ಟಿಎಂಸಿಯ ವಿರೋಧ ಪಕ್ಷದ ನಾಯಕ ಮುಕುಲ್ ಸಂಗ್ಮಾ 507 ಮತಗಳ ಅಂತರದಿಂದ ಸಾಂಗ್ಸಾಕ್ ಸ್ಥಾನವನ್ನು ಗೆದ್ದಿದ್ದಾರೆ, ಆದರೆ ಟಿಕ್ರಿಕಿಲ್ಲಾ ಕ್ಷೇತ್ರವನ್ನು ಎನ್‌ಪಿಪಿಯ ಜೆ ಡಿ ಸಂಗ್ಮಾ ವಿರುದ್ಧ 5,313 ಮತಗಳಿಂದ ಕಳೆದುಕೊಂಡರು.
- ನಾಗಾಲ್ಯಾಂಡ್‌ನಲ್ಲಿ ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 60 ಸದಸ್ಯ ಬಲದ ವಿಧಾನಸಭೆಯಲ್ಲಿ 33 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದಿದೆ. ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) 21 ಸ್ಥಾನಗಳನ್ನು ಗೆದ್ದರೆ, ಅದರ ಮೈತ್ರಿ ಪಾಲುದಾರ 12 ಸ್ಥಾನಗಳನ್ನು ಪಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
- ಎನ್‌ಡಿಪಿಪಿ-ಬಿಜೆಪಿ 40:20 ಸೀಟು ಹಂಚಿಕೆಯಲ್ಲಿ ಚುನಾವಣೆ ಎದುರಿಸಿದ್ದವು.
- ಮುಖ್ಯಮಂತ್ರಿ ಮತ್ತು ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಅಭ್ಯರ್ಥಿ ನೇಫಿಯು ರಿಯೊ ಉತ್ತರ ಅಂಗಮಿ-II ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದು, ಕಾಂಗ್ರೆಸ್‌ನ ಸೆಯಿವಿಲಿ ಸಚು ಅವರನ್ನು 15,824 ಮತಗಳ ಅಂತರದಿಂದ ಸೋಲಿಸಿದ್ದಾರೆ.
- ಎಣಿಕೆಯ ಆರಂಭಿಕ ಸುತ್ತಿನಲ್ಲಿ ನೋಕ್ಸೆನ್ ಮತ್ತು ತುಯೆನ್ಸಾಂಗ್ ಸದರ್-II ಎಂಬ ಎರಡು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಅಠವಾಲೆ) ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
- ಈ ವರ್ಷ 15 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ರಾಜ್ಯದಲ್ಲಿಯೂ ತನ್ನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:51 pm, Thu, 2 March 23