Nagaland election 2023: ನಾಗಾಲ್ಯಾಂಡ್​​ನಲ್ಲಿ ಎನ್​​ಡಿಎ ಮೋಡಿ, ಇತಿಹಾಸ ನಿರ್ಮಿಸಿದ ಇಬ್ಬರು ಮಹಿಳೆಯರು; ಕಾಂಗ್ರೆಸ್ ಶೂನ್ಯ!

Election Results Analysis: ನಾಗಾಲ್ಯಾಂಡ್‌ನಲ್ಲಿ ಸತತ 10 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪತನದ ಸ್ಥಿತಿಯಲ್ಲಿದೆ. ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಕನಿಷ್ಠ ಒಂದು ಸ್ಥಾನವನ್ನು ಗೆಲ್ಲುವ ಯಾವುದೇ ಖಚಿತತೆಯಿಲ್ಲದೆ ಕಣಕ್ಕಿಳಿದಿತ್ತು. ಹಾಗಾಗಿ ಯಾವುದೇ ಸೀಟು ಗೆಲ್ಲಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ

Nagaland election 2023: ನಾಗಾಲ್ಯಾಂಡ್​​ನಲ್ಲಿ ಎನ್​​ಡಿಎ ಮೋಡಿ, ಇತಿಹಾಸ ನಿರ್ಮಿಸಿದ ಇಬ್ಬರು ಮಹಿಳೆಯರು; ಕಾಂಗ್ರೆಸ್ ಶೂನ್ಯ!
ನಾಗಾಲ್ಯಾಂಡ್ ನಲ್ಲಿ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 02, 2023 | 8:22 PM

ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಬ್ಬರು ಶಾಸಕಿಯರು ನಾಗಾಲ್ಯಾಂಡ್ (Nagaland)ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಎನ್‌ಡಿಪಿಪಿಗಾಗಿ ದಿಮಾಪುರ್-III ರಿಂದ ಸ್ಪರ್ಧಿಸಿದ್ದ ಹೆಕಾನಿ ಜಖಾಲು(Hekani Jakhalu) ಮತ್ತು ಪಶ್ಚಿಮ ಅಂಗಮಿಯಿಂದ ಕ್ಷೇತ್ರದಲ್ಲಿ ಕಣಕ್ಕಿಳಿದ ಸಲ್ಹೌಟುವೊನುವೊ ಕ್ರೂಜ್ (Salhoutuonuo Kruse) ಅವರು ಭರ್ಜರಿ ಗೆಲುವಿನೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. ಜಖಾಲು ಅವರು 154 ಅಂಚೆ ಮತಗಳು (45.16%) ಸೇರಿದಂತೆ 14,395 ಮತಗಳನ್ನು ಪಡೆದರು. ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್ ವಿಲಾಸ್) ಸ್ಪರ್ಧಿಸಿದ್ದ ಆಶೆಟೊ ಶಿಮೊಮಿ 12,859 ಮತಗಳಿಸಿ( ಶೇ 40.34%) ಎರಡನೇ ಸ್ಥಾನ ಪಡೆದರು. ಏತನ್ಮಧ್ಯೆ, ಸಲ್ಹೌಟುವೊನುವೊ ಗೆಲುವು ಭರ್ಜರಿಯಾಗಿತ್ತು. ಅವರು 6,956 ಮತಗಳನ್ನು (49.87%) ಗಳಿಸಿದರೆ, ಅವರ ಪ್ರತಿಸ್ಪರ್ಧಿ ಮತ್ತು ಕ್ಷೇತ್ರದ ಹಾಲಿ ಶಾಸಕ ಕೆನಿಶಾಖೋ ನಖ್ರೋ (ಪಕ್ಷೇತರ) 6,915 ಮತಗಳನ್ನು ಗಳಿಸಿದ್ದಾರೆ.

ಯುವಜನತೆಯೇ ಬಹುದೊಡ್ಡ ಸಂಪತ್ತು ಎಂದು ನಂಬಿರುವ ಹೆಕಾನಿ ಜಖಾಲು 17 ವರ್ಷಗಳಿಂದ ಯುವ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನಾಗಾಲ್ಯಾಂಡ್ ಅಭಿವೃದ್ಧಿ ಹೊಂದಬೇಕಾದರೆ ನಾವು ಮೊದಲು ನಮ್ಮ ಯುವಕರನ್ನು ಸಬಲೀಕರಣಗೊಳಿಸಬೇಕು ಅಂತಾರೆ ಅವರು. ಯುವಕರು ಸ್ವಂತ ಕಾಲಿನ ಮೇಲೆ ನಿಂತು ಸ್ವತಂತ್ರರಾಗಲು ಸಾಧ್ಯವಾದರೆ ಅವರ ಕನಸುಗಳು ನನಸಾಗುತ್ತವೆ ಎಂಬುದು ಜಖಾಲು ಅವರ ನಂಬಿಕೆ. ಜಖಾಲು ಅವರ ಅಭಿಯಾನವು ಅಲ್ಪಸಂಖ್ಯಾತರ ಉನ್ನತಿ ಮತ್ತು ಮಹಿಳಾ ಸಬಲೀಕರಣವನ್ನು ಆಧರಿಸಿದೆ. ಎಲ್ಲ ಮಕ್ಕಳಿಗೂ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಕಲ್ಪಿಸಬೇಕು ಎಂದು ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಇತ್ತ ಸಲ್ಹೌಟುವೊನುವೊ ಅವರು 24 ವರ್ಷಗಳಿಂದ ವಿವಿಧ NGO ಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ದಿವಂಗತ ಎನ್‌ಡಿಪಿಪಿ ನಾಯಕ ಕೆವಿಶೇಖೋ ಕ್ರೂಜ್ ಅವರ ಪತ್ನಿ. 2018ರಲ್ಲಿ ಕೆವಿಶೇಖೋ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಏತನ್ಮಧ್ಯೆ, ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಂತೆ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ಭಾರಿ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿದೆ. 60 ಸ್ಥಾನಗಳ ಪೈಕಿ 43ರಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಬಿಜೆಪಿ ಮೂರು ಸ್ಥಾನಗಳನ್ನು ಮತ್ತು ಮಾಜಿ ಮುಖ್ಯಮಂತ್ರಿ ನೆಯ್ಫು ರಿಯೊ ಅವರ ಎನ್‌ಡಿಪಿಪಿ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಅಲಯನ್ಸ್ (ಯುಡಿಎ) 10 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಈ ಬಾರಿಯೂ ಸಂಪೂರ್ಣವಾಗಿ ಕುಸಿದಿದೆ.

ಇದನ್ನೂ ಓದಿ:Hekani Jakhalu: ನಾಗಾಲ್ಯಾಂಡ್​ನ ಮೊದಲ ಮಹಿಳಾ ಶಾಸಕಿಯಾಗಿ ಹೆಕಾನಿ ಜಖಾಲು ಆಯ್ಕೆ

ಮತವಾಗಿ ಬದಲಾದ ಬುಡಕಟ್ಟು ರಾಜಕಾರಣ

ನಾಗಾಲ್ಯಾಂಡ್‌ನಲ್ಲಿ ಪ್ರಬಲ ವಿರೋಧವಿಲ್ಲದೆ ಚುನಾವಣೆ ನಡೆದಿದೆ. ಒಬ್ಬ ಅಭ್ಯರ್ಥಿ ಅವಿರೋಧವಾಗಿ ಗೆದ್ದಿದ್ದರಿಂದ 59 ಸ್ಥಾನಗಳಿಗೆ ಚುನಾವಣೆ ನಡೆಯಿತು. ಅಕುಲುಟೊ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಾಕೆಶೆ ಸುಮಿ ಅನಿರೀಕ್ಷಿತವಾಗಿ ನಾಮಪತ್ರ ಹಿಂಪಡೆದಿದ್ದರಿಂದ ಬಿಜೆಪಿ ಅಭ್ಯರ್ಥಿ ಕಶೆಟೊ ಕಿಮಿನಿ (68) ಅವಿರೋಧವಾಗಿ ಗೆದ್ದಿದ್ದಾರೆ. ಆರ್‌ಜೆಡಿ ನಾಯಕಿಯಾಗಿದ್ದ ಸುಮಿ ಚುನಾವಣೆ ಘೋಷಣೆಯಾಗುವ ಮುನ್ನ ಕಾಂಗ್ರೆಸ್ ಅಭ್ಯರ್ಥಿಯಾದರು. ನಾಗಾ ಶಾಂತಿ ಒಪ್ಪಂದ, ಗಡಿನಾಡು ನಾಗಾಲ್ಯಾಂಡ್ ರಾಜ್ಯ ರಚನೆ, ರಸ್ತೆ ಅಭಿವೃದ್ಧಿ, ವಿದ್ಯುತ್ ಮತ್ತು ಹೊಸ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಪ್ರಮುಖ ವಿಷಯಗಳನ್ನಾಗಿ ಇಟ್ಟುಕೊಂಡು ನಡೆಸಿದ ಅಭಿಯಾನಗಳು ಎನ್‌ಡಿಪಿಪಿ-ಬಿಜೆಪಿ ಮೈತ್ರಿಯ ಬೃಹತ್ ಯಶಸ್ಸಿಗೆ ಕಾರಣವಾಗಿವೆ.

ಫಲ ಕಂಡಿತು ಮೋದಿ, ಅಮಿತ್ ಶಾ ಪ್ರಚಾರ

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪ್ರಚಾರಕ್ಕೆ ಆಗಮಿಸಿದ್ದು ಇಲ್ಲಿ ಫಲ ಕಂಡಿದೆ. ಪೂರ್ವ ನಾಗಾಲ್ಯಾಂಡ್‌ನ 7 ಬುಡಕಟ್ಟು ಜನಾಂಗದವರು ಫ್ರಾಂಟಿಯರ್ ನಾಗಾಲ್ಯಾಂಡ್ ಎಂಬ ಹೊಸ ರಾಜ್ಯ ರಚನೆಗೆ ಒತ್ತಾಯಿಸಿ ಚುನಾವಣೆಯನ್ನು ಬಹಿಷ್ಕರಿಸಲು ಸಿದ್ಧವಾದಾಗ ಅಮಿತ್ ಶಾ ನಿರ್ಣಾಯಕ ಮಧ್ಯಸ್ಥಿಕೆ ನಡೆಸಿದರು. ಈ ನಿಟ್ಟಿನಲ್ಲಿ ಚುನಾವಣೆ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವರು ಭರವಸೆ ನೀಡಿರುವುದು ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಪೂರ್ವ ನಾಗಾಲ್ಯಾಂಡ್‌ಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

2018 ರಲ್ಲಿ ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ಎನ್‌ಪಿಎಫ್ (ನಾಗಾ ಪೀಪಲ್ಸ್ ಫ್ರಂಟ್) ಬಿಜೆಪಿಯೊಂದಿಗಿನ ಮೈತ್ರಿಯನ್ನು ತೊರೆದ ನಂತರ, ನೈಫು ರಿಯೊ ಎನ್‌ಡಿಪಿಪಿಯನ್ನು ರಚಿಸಿದರು. 2018 ರ ಚುನಾವಣೆಯಲ್ಲಿ, ಎನ್‌ಪಿಎಫ್ 26 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಯಿತಾದರೂ ಅಧಿಕಾರಕ್ಕೇರಿದ್ದು NDPP-BJP ಮೈತ್ರಿ ಆಗಿತ್ತು. ನಂತರ, 21 ಎನ್‌ಪಿಎಫ್ ಶಾಸಕರು ಯುಡಿಎಗೆ ಸೇರ್ಪಡೆಗೊಂಡರು. ಈ ಬಾರಿಯೂ ಪಕ್ಷಕ್ಕೆ ನಾಯಕರನ್ನು ಕಳೆದುಕೊಳ್ಳುವ ಆತಂಕ ತಪ್ಪಿದ್ದಲ್ಲ. ಈ ಬಾರಿ ಎನ್‌ಪಿಎಫ್ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೇವಲ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: Hekani Jakhalu: ನಾಗಾಲ್ಯಾಂಡ್​ನ ಮೊದಲ ಮಹಿಳಾ ಶಾಸಕಿಯಾಗಿ ಹೆಕಾನಿ ಜಖಾಲು ಆಯ್ಕೆ

ಕಾಂಗ್ರೆಸ್ ಪತನ?

ನಾಗಾಲ್ಯಾಂಡ್‌ನಲ್ಲಿ ಸತತ 10 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪತನದ ಸ್ಥಿತಿಯಲ್ಲಿದೆ. ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಕನಿಷ್ಠ ಒಂದು ಸ್ಥಾನವನ್ನು ಗೆಲ್ಲುವ ಯಾವುದೇ ಖಚಿತತೆಯಿಲ್ಲದೆ ಕಣಕ್ಕಿಳಿದಿತ್ತು. ಹಾಗಾಗಿ ಯಾವುದೇ ಸೀಟು ಗೆಲ್ಲಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಚುನಾವಣಾ ಫಲಿತಾಂಶವನ್ನು ಅವಲೋಕಿಸಿದರೆ, ಕಾಂಗ್ರೆಸ್ ಮತ್ತೊಮ್ಮೆ ಪುಟಿದೇಳುವ ಯಾವುದೇ ಕುರುಹು ಕಾಣಿಸುತ್ತಿಲ್ಲ. ಡಿಸೆಂಬರ್ 4, 2021 ರಂದು ನಾಗಾಲ್ಯಾಂಡ್‌ನಲ್ಲಿ ನಡೆದ ಹತ್ಯಾಕಾಂಡ (ಪ್ರತ್ಯೇಕವಾದಿಗಳು ಎಂದು ಭಾವಿಸಿ ಕಮಾಂಡೋಗಳು ನಡೆಸಿದ ಗುಂಡಿನ ದಾಳಿ, ನಂತರದ ಘಟನೆಯಲ್ಲಿ ಒಟ್ಟು 15 ಜನರು ಪ್ರಾಣ ಕಳೆದುಕೊಂಡಿದ್ದರು) ಬಿಜೆಪಿಗೆ ಹೊಡೆತವಾಗಬಹುದು ಎಂದು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ ಇಲ್ಲಿ ಅದು ಸ್ವಲ್ಪವೂ ಪರಿಣಾಮ ಬೀರಿಲ್ಲ ಎಂದೇ ಹೇಳಬೇಕು. ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್ ಒಂದು ಕಾಲದಲ್ಲಿ ಬೃಹತ್ ಶಕ್ತಿಯಾಗಿತ್ತು. ಕಾಂಗ್ರೆಸ್ 1980 ರ ದಶಕದಲ್ಲಿ ಕಾಂಗ್ರೆಸ್ ನಾಗಾಲ್ಯಾಂಡ್‌ನಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿತ್ತು. ಆದರೆ 2018ರ ವಿಧಾನಸಭಾ ಚುನಾವಣೆಯೊಂದಿಗೆ ಕಾಂಗ್ರೆಸ್ ನೆಲಕಚ್ಚಿತು. 2013ರಲ್ಲಿ ಗೆದ್ದಿದ್ದ ಎಲ್ಲ 8 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿತ್ತು. ಕಾಂಗ್ರೆಸ್ ವೋಟ್ ಶೇರ್ ಈಗ ಕೇವಲ 2.1% ಕುಸಿದಿದೆ.

2008ರಲ್ಲಿ 23 ಸೀಟು ಗೆದ್ದು ಶೇ.35ರಷ್ಟು ಮತಗಳನ್ನು ಗಳಿಸಿದ ಕಾಂಗ್ರೆಸ್ ಈ ಬಾರಿ ಹೇಳ ಹೆಸರಿಲ್ಲದಂತಾಗಿದೆ. ಬದಲಾವಣೆಗಳನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಹಿಂದೇಟು ಹಾಕಿದ್ದೇ ಅಧಃಪತನಕ್ಕೆ ಕಾರಣವಾಯಿತು ಎಂಬ ಹಲವು ಅಭಿಪ್ರಾಯಗಳು ಅಂದು ಕೇಳಿಬಂದಿದ್ದವು. ಆರು ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಬಳಿ ಚುನಾವಣಾ ಕಣಕ್ಕಿಳಿದಿದ್ದರೂ ಹೂಡಿಕೆ ಮಾಡಲು ಸಾಕಷ್ಟು ಹಣವಿಲ್ಲ ಎಂದು ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದರು. ಈ ಬಾರಿಯೂ ಕಾಂಗ್ರೆಸ್‌ನ ಕಾಕೆಶೆ ಸುಮಿ ಅವರು ಚುನಾವಣೆಗೂ ಮುನ್ನ ಪತ್ರ ಹಿಂಪಡೆದಿದ್ದರು. ಇದರೊಂದಿಗೆ ಅಕುಲೋಟೊ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕ್ಯಾಸೆಟ್ಟೊ ಕಿಮಿನಿ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್ ಮೇಲುಗೈ ಸಾಧಿಸುವ ನಿರೀಕ್ಷೆಯಲ್ಲಿ ಕ್ಷೇತ್ರ ಪ್ರವೇಶಿಸಿದೆ. ಆದರೆ ಎನ್‌ಡಿಎಯ ಚಾಣಕ್ಯ ತಂತ್ರದ ಮುಂದೆ ಮತ್ತೊಮ್ಮೆ ಪುಟಿದೇಳುವ ಕನಸೂ ಭಗ್ನವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ