PM Modi Address: ಬಿಜೆಪಿ ಪ್ರಚಂಡ ಗೆಲುವಿಗೆ ಮಹಿಳೆಯರೇ ಕಾರಣ: ಪ್ರಧಾನಿ ನರೇಂದ್ರ ಮೋದಿ

PM Modi on Assembly Election Results Live Updates:ಬಡವರಿಗೆ  ಈ  ಹಕ್ಕು  ಸಿಗಬೇಕಾದರೆ ಗುಡ್ ಗವರ್ನೆನ್ಸ್ ,ಡೆಲಿವರಿ ಅಗತ್ಯ. ನಾನು ಮುಖ್ಯಮಂತ್ರಿಯಾಗಿದ್ದವನು. ಹಾಗಾಗಿ ಕೊನೆಯ ವ್ಯಕ್ತಿಗೆ ಈ ಹಕ್ಕುಗಳು  ಸಿಗಬೇಕಾದರೆ ಎಷ್ಟು ಕಷ್ಟ ಇತ್ತು ಎಂಬುದು  ನನಗೆ ಗೊತ್ತಿದೆ . ಬಡವರಿಗೆ ಅವರ ಹಕ್ಕುಗಳನ್ನು ಅವರ ಮನೆ ಬಾಗಿಲು ವರೆಗೆ ಕೊಂಡೊಯ್ಯದೆ ಸಮಾಧಾನದಲ್ಲಿ ಕೂರುವ ವ್ಯಕ್ತಿ  ನಾನಲ್ಲ

PM Modi Address: ಬಿಜೆಪಿ ಪ್ರಚಂಡ ಗೆಲುವಿಗೆ ಮಹಿಳೆಯರೇ ಕಾರಣ: ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: ganapathi bhat

Updated on:Mar 11, 2022 | 7:57 AM

ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ (BJP) ಸರ್ಕಾರ ರಚಿಸಲು ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಸಂಜೆ ದೆಹಲಿಯಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ನಾಲ್ಕು ರಾಜ್ಯಗಳಲ್ಲಿ  ಬಿಜೆಪಿ ಜಯಭೇರಿ ಬಾರಿಸಿದ್ದಾರೆ. ಉತ್ತರ ಪ್ರದೇಶದಲ್ಲಿನ(Uttar Pradesh) ಗೆಲುವಿನ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ ಅವರು, ಪ್ರಧಾನಿ ಮೋದಿ  ನೇತೃತ್ವದಲ್ಲಿ ನಾವು ಈ ಚುನಾವಣೆ  ಗೆದ್ದಿದ್ದೇವೆ ಎಂದು ಹೇಳಿದ್ದಾರೆ. ಮೋದಿ ಭಾಷಣಕ್ಕಿಂತ ಮುನ್ನ ಮಾತನಾಡಿದ  ಜೆಪಿ ನಡ್ಡಾ, ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.  ಇವತ್ತು ಬಂದ ಫಲಿತಾಂಶದಲ್ಲಿ  ಭಾರತದ ಜನತೆಯ ಆಶೀರ್ವಾದ ನಮಗೆ  ಸಿಕ್ಕಿದೆ.  ಇದು ಮೋದಿಯವರು ಕಾರ್ಯಕ್ರಮ, ಅವರು  ತಂದ ನೀತಿಗೆ ದೇಶದ ಜನರು ಮನ್ನಣೆ ನೀಡಿದ್ದಾರೆ. ದೇಶದ ಜನತೆಗೆ  ಧನ್ಯವಾದಗಳು. ಮೋದಿಯವರ ನೇತೃತ್ವವು ಈ ಗೆಲುವಿಗೆ ಕಾರಣವಾಗಿದೆ.  ಈ ಗೆಲುವಿಗೆ ಧನ್ಯವಾದ ಹೇಳುತ್ತೇನೆ. ಇವತ್ತು ಬಂದಿರುವ ಫಲಿತಾಂಶ ಜನರ ಆಶೀರ್ವಾದವಾಗಿದೆ. ಉತ್ತರ ಪ್ರದೇಶದ ಬಗ್ಗೆ ಮಾತನಾಡುವುದಾದರೆ  ಅಲ್ಲಿನ  ಜನತೆ ನಮಗೆ  ಸತತ ಆಶೀರ್ವಾದ ನೀಡಿದ್ದಾರೆ. ಉತ್ತರಾಖಂಡದಲ್ಲಿಯೂ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ.  ಗೋವಾದಲ್ಲಿ ನಾವು  ಹ್ಯಾಟ್ರಿಕ್ ಬಾರಿಸಲಿದ್ದೇವೆ. ಅಲ್ಲಿಯೂ ಮೋದಿಯವರ ಕಾರ್ಯಗಳಿಗೆ  ಶ್ಲಾಘನೆ ಸಿಕ್ಕಿದೆ. ನಾಲ್ಕು ರಾಜ್ಯಗಳಲ್ಲಿ ನಾವು ಅಧಿಕಾರಕ್ಕೇರಲಿದ್ದೇವೆ. ಅದೇ ಹೊತ್ತಲ್ಲಿ ಅಸ್ಸಾಂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಬಿಜೆಪಿಗೆ ಜನಾಶೀರ್ವಾದ ಸಿಕ್ಕಿದೆ.

ಬಡವ,ಶೋಷಿತ ಮತ್ತು ದಲಿತರಾಗಿ ಮೋದಿಯವರು ವಿವಿಧ ಯೋಜನೆಗಳನ್ನು  ತಂದಿದ್ದು, ಜನರು  ಮತದಾನ ಬಂದಾಗ ಕಮಲದ ಚಿಹ್ನೆಗೆ  ಮತ ಹಾಕಿದ್ದಾರೆ.   ಮೋದಿಯವರು ರಾಜಕೀಯವನ್ನೇ ಬದಲಾಯಿಸಿದ್ದಾರೆ. ವಂಶಾಡಳಿತದ  ಅಲ್ಲ, ಇಂದು ಸಶಕ್ತೀಕರಣದ ರಾಜಕಾರಣ ನಡೆಯುತ್ತಿದೆ . ಕೆಲಸ ಮಾಡಿದರೆ ಮಾತ್ರ ಮತ ಎಂದು ರಾಜಕಾರಣದ ಚೆಹರೆಯನ್ನು  ಬದಲಿಸಿದ್ದಾರೆ. ಉತ್ತರ  ಪ್ರದೇಶದಲ್ಲಿ  ಗೂಂಡಾಗಿರಿ, ಮಾಫಿಯಾರಾಜ್  ಇತ್ತು.ಆದರೆ ಯೋಗಿ ಕಾನೂನು ವ್ಯವಸ್ಥೆಯನ್ನು ಸುಧಾರಿಸಿದರು. ಅದರ ಪರಿಣಾಮ ಅವರಿಗೆ ಜನಾಶೀರ್ವಾದ ಸಿಕ್ಕಿದೆ.

ಈ  ಸಂದರ್ಭದಲ್ಲಿ ನಾನು ಎಲ್ಲ  ನಾಯಕರು,ಕಾರ್ಯಕರ್ತರಿಗೆ  ಧನ್ಯವಾದ ಹೇಳಲು ಬಯಸುತ್ತೇನೆ.

ಮೋದಿ  ಭಾಷಣದ ಮುಖ್ಯಾಂಶಗಳು

ಎಲ್ಲ ಮತದಾರರರಿಗೆ ನನ್ನ ಅಭಿನಂದನೆಗಳು. ಮಹಿಳೆಯರು,ಯುವಕರು ಬಿಜೆಪಿಗೆ ಬೆೆಂಬಲ ನೀಡಿದ್ದಕ್ಕಾಗಿ ಅವರಿಗೆ  ಧನ್ಯವಾದಗಳು. ಈ ಹಿಂದೆ ಹೇಳಿದ್ದೆ ಈ ಬಾರಿ ಹೋಳಿ   ಮಾರ್ಚ್ 10ರಂದು ಆರಂಭವಾಗಲಿದೆ ಎಂದು.  ನಮ್ಮ ಕಾರ್ಯಕರ್ತರು ಅದನ್ನು  ಸಾಧಿಸಿ ತೋರಿಸಿದ್ದಾರೆ . ಪ್ರತಿಯೊಬ್ಬ ಕಾರ್ಯಕರ್ತರೂ   ಬಿಜೆಪಿ  ಗೆಲುವಿಗೆ ಕಾರಣವಾಗಿದ್ದಾರೆ.ಒಬ್ಬ ಮುಖ್ಯಮಂತ್ರಿ ಎರಡನೇ ಬಾರಿ ಚುನಾಯಿತರಾಗಿದ್ದು  ಉತ್ತರಪ್ರದೇಶದಲ್ಲಿ. ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿ ಒಂದೇ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೇರಿದೆ.  ಮಣಿಪುರದಲ್ಲಿ ಮತ ಹೆಚ್ಚಾಗಿದೆ. ಗೋವಾದಲ್ಲಿ ಎಲ್ಲ ಲೆಕ್ಕಾಚಾರ ತಪ್ಪಿದೆ.  ಅವರು  ನಮಗೆ ಅವಕಾಶ ಕೊಟ್ಟಿದ್ದಾರೆ. ಉತ್ತರಾಖಂಡದಲ್ಲಿಯೂ ಜನರು ನಮಗೆ  ಅವಕಾಶ ನೀಡಿದ್ದಾರೆ.  ಪರ್ವತಗಳ ರಾಜ್ಯ,ಪೂರ್ವೋತ್ತರ ಗಡಿಯಲ್ಲಿರುವ ರಾಜ್ಯ, ಕರಾವಳಿ ರಾಜ್ಯ,ಗಂಗಾತಟದಲ್ಲಿರುವ ರಾಜ್ಯ  ಹೀಗೆ  ನಾಲ್ಕು ದಿಕ್ಕಿನಿಂದ  ಜನರು ನಮಗೆ  ಆಶೀರ್ವದಿಸಿದ್ದಾರೆ. ಇಲ್ಲಿನ ರಾಜಕೀಯ ಭಿನ್ನ.ಆದರೆ ಜನರು ನಮ್ಮಲ್ಲಿ  ವಿಶ್ವಾಸವಿರಿಸಿದ್ದಾರೆ .

ಈ ಫಲಿತಾಂಶವು  ಪ್ರೋ ಆಕ್ಟಿವ್ ಗವರ್ನೆನ್ಸ್ ಬಗ್ಗೆ ಗಟ್ಟಿಯಾದ ಮೊಹರು ಒತ್ತಿದ್ದಾರೆ.  ಮೊದಲು ಜನರು ಸರ್ಕಾರಿ  ಕಚೇರಿಗಳ ಬಾಗಿಲು ಬಡಿಯುತ್ತಿದ್ದರು.ದೇಶದಲ್ಲಿ ಬಡವರ ಹೆಸರಲ್ಲಿ ಘೋಷಣೆ, ಯೋಜನೆ ಬಹಳ ಇತ್ತು. ಆದರೆ ಬಡವರಿಗೆ ಆ ಹಕ್ಕು ಸಿಗುತ್ತಿರಲಿಲ್ಲ. ಬಡವರಿಗೆ  ಈ  ಹಕ್ಕು  ಸಿಗಬೇಕಾದರೆ ಗುಡ್ ಗವರ್ನೆನ್ಸ್ ,ಡೆಲಿವರಿ ಅಗತ್ಯ. ನಾನು ಮುಖ್ಯಮಂತ್ರಿಯಾಗಿದ್ದನು. ಹಾಗಾಗಿ ಕೊನೆಯ ವ್ಯಕ್ತಿಗೆ ಈ ಹಕ್ಕುಗಳು  ಸಿಗಬೇಕಾದರೆ ಎಷ್ಟು ಕಷ್ಟ ಇತ್ತು ಎಂಬುದು  ನನಗೆ ಗೊತ್ತಿದೆ . ಬಡವರಿಗೆ ಅವರ ಹಕ್ಕುಗಳನ್ನು ಅವರ ಮನೆ ಬಾಗಿಲು ವರೆಗೆ ಕೊಂಡೊಯ್ಯದೆ ಸಮಾಧಾನದಲ್ಲಿ ಕೂರುವ ವ್ಯಕ್ತಿ  ನಾನಲ್ಲ.  ಸರ್ಕಾರದಲ್ಲಿನ ಸಮಸ್ಯೆಗಳು ಏನೆಂಬುದು ನನಗೊತ್ತಿದೆ. ನಾನು ಸವಾಲು ಸ್ವೀಕರಿಸಿದೆ.  ಕೆಂಪುಕೋಟೆಯಲ್ಲಿ ಭಾಷಣ  ಮಾಡಿದ್ದ ನಾನು ಬಿಜೆಪಿಗೆ ಎಲ್ಲೆಲ್ಲಿ ಸೇವೆ ಮಾಡಲು ಅವಕಾಶ ಸಿಗುತ್ತದೆಯೋ  ಅಲ್ಲಿ ನಾವು ನೂರು ಪ್ರತಿಶತ ಜವಾಬ್ದಾರಿಯೊಂದಿಗೆ ಮಾಡುವೆ ಎಂಬ ನಿರ್ಣಯ ತೆಗೆದುಕೊಂಡೆ. ಬಡವರ ಬಗ್ಗೆ ಕಾಳಜಿ,ಕರುಣೆ ಇದ್ದರೆ ಮಾತ್ರ ಇದು ಸಾಧ್ಯ.  ನಾವು ಪ್ರತಿಯೊಂದು ಬಡವರನ್ನು ತಲುಪುತ್ತೇೆವೆ. ನಾನು ಮಹಿಳೆ,ಮಾತೆ, ಮಗಳು ಎಲ್ಲ ಹೆಣ್ಣು ಮಕ್ಕಳಿಗೆ ನಮನ ಮಾಡುತ್ತೇನೆ. ಬಿಜೆಪಿಗೆ ಅವರು ತುಂಬಾ ಪ್ರೀತಿ ನೀಡಿದ್ದಾರೆ.  ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ.ಮಹಿಳೆಯರು ಬಿಜೆಪಿಯ  ಗೆಲುವಿನ ಸಾರಥಿ ಆಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಜಾತಿವಾದದಿಂದ ಜನರ,ಜಾತಿಗಳ ಅವಮಾನವಾಗುತ್ತಿತ್ತು.ಕೆಲವರು ಯುಪಿಯಲ್ಲಿ ಜಾತಿಯಿಂದಲೇ ಚುನಾವಣೆ ನಡೆಯುತ್ತದೆ ಎಂದು ಹೇಳುತ್ತಿದ್ದರು. ಆದರೆ ಅಲ್ಲಿ ನೋಡಿ ಅಲ್ಲಿನ ಜನರು ಅಭಿವೃದ್ಧಿಯ  ರಾಜಕಾರಣ ಆಯ್ಕೆ ಮಾಡಿದ್ದಾರೆ.  ಅಲ್ಲಿನ  ಜನರು ಜಾತಿಯ ಹೆಸರು ದೇಶವನ್ನು ಒಡೆಯಲು ಅಲ್ಲ  ಸಂಘಟಿಸಲು ಬಳಸಬೇಕು ಎಂದು ಅಲ್ಲಿನ ಜನರು ತೋರಿಸಿಕೊಟ್ಟರು

ಪಂಜಾಬ್ ನ ಬಿಜೆಪಿ ಕಾರ್ಯಕರ್ತರನ್ನೂ ನಾನು ಶ್ಲಾಘಿಸುತ್ತೇನೆ. ಅವರು ಅಲ್ಲಿ  ನಮ್ಮ ಬಾವುಟವನ್ನು ಎಷ್ಟು ಗಟ್ಟಿಯಾಗಿ ಊರಿದ್ದಾರೆ ಎಂದರೆ ಮುಂದಿನ ದಿನಗಳಲ್ಲಿ ಅದು ಪ್ರಯೋಜನ ನೀಡಲಿದ್ದಾರೆ.ಗಡಿ ರಾಜ್ಯವಾಗಿರುವ ಕಾರಣ ಅಲ್ಲಿನ  ಕಾರ್ಯಕರ್ತರು ಹೆಚ್ಚು ಸುರಕ್ಷೆಯನ್ನು ನೀಡುತ್ತಾರೆ.

ಜಗತ್ತು ಕೊರೊನಾ  ವಿರುದ್ಧ ಹೋರಾಡುವ ಹೊತ್ತಲ್ಲಿ ಈ ಚುನಾವಣೆ ನಡೆದಿದೆ.ಇದರ ಜತೆಗೆ ಯುದ್ಧವೂ ನಡೆಯುತ್ತಿದೆ.ಎರಡು ವರ್ಷಗಳಲ್ಲಿ  ಸಪ್ಲೈ ಚೈನ್ ಮೇಲೆಯೂ ಪ್ರಭಾವ ಬೀರಿದೆ. ಈ ಹೊತ್ತಲ್ಲಿ ಭಾರತ ತೆಗೆದುಕೊಂಡ ನಿರ್ಧಾರಗಳು  ಭಾರತವನ್ನು  ಮುಂದೆ ಸಾಗಲು ಸಹಾಯ ಮಾಡಿದೆ.   ಭಾರತ  ಬಚಾವಾಗಿದೆ ಯಾಕೆಂದರೆ ನಮ್ಮ ನೀತಿಗಳು ಮಣ್ಣಿನೊಂದಿಗೆ ನಂಟುಹೊಂದಿದೆ.ಎಲ್ಲೆಲ್ಲಿ ಡಬಲ್ ಇಂಜಿನ್ ಇದೆಯೋ ಅಲ್ಲಿ  ಪುರೋಗತಿ ಆಗಿದೆ.

ಯುದ್ಧದ ಪರೋಕ್ಷ ಮತ್ತು ಪ್ರತ್ಯಕ್ಷ ಪರಿಣಾಮವು ಹಲವು ದೇಶಗಳ ಮೇಲಿದೆ. ಭಾರತ ಶಾಂತಿಯ ಪಕ್ಷದಲ್ಲಿದೆ . ಯುದ್ಧದಲ್ಲಿ ತೊಡಗಿರುವ ದೇಶದೊಂದಿಗೆ ನಮಗೆ ನಂಟಿದೆ.  ತೈಲ,  ಸೂರ್ಯಕಾಂತಿ ಎಣ್ಣೆಯನ್ನು ಭಾರತ  ಈ ದೇಶಗಳಿಂದ ಖರೀದಿಸುತ್ತಿವೆ. ಯುದ್ಧದಿಂದಾಗಿ ಬೆಲೆಏರಿಕೆ ಆಗುತ್ತಿದೆ. ಈ ಸಂಕಷ್ಟ  ಸಮಯದಲ್ಲಿ ನಮ್ಮ  ಬಜೆಟ್  ಬಗ್ಗೆ ಕಣ್ಣಾಡಿಸಿದರೆ ದೇಶ ಆತ್ಮ ನಿರ್ಭರ ರೀತಿಯಲ್ಲಿ  ಮುಂದೆ ಸಾಗುತ್ತಿದೆ. ಆ  ವಿಪರೀತ ,ಅನಿಶ್ಚಿತತೆಯ ವಾತಾವರಣದಲ್ಲಿ ವಿಶೇಷವಾಗಿ ಯುಪಿಯಲ್ಲಿ ಜನರು ತಮ್ಮ  ದೂರದೃಷ್ಟಿಯನ್ನು  ಪರಿಚಯಿಸಿದ್ದಾರೆ. ಅವರು ನೀಡಿದ  ಈ ಫಲಿತಾಂಶ ಜನತಂತ್ರ ಎಂಬುದು ಭಾರತೀಯ ಜನರ ರಕ್ತದಲ್ಲಿದೆ ಎಂಬುದಕ್ಕೆ ಉದಾಹರಣೆ.

ದೇಶದ ಪ್ರತಿಯೊಬ್ಬ ನಾಗರಿಕ ದೇಶ ನಿರ್ಮಾಣದಲ್ಲಿ ತೊಡಗಿದ್ದಾರೆ.ಆದರೆ ಕೆಲವರು  ಜನರನ್ನು ಗೊಂದಲ ಮಾಡುತ್ತಿದ್ದಾರೆ.  ಲಸಿಕೆ ನೀಡುತ್ತಿರುವುದನ್ನು  ಜಗತ್ತು ಶ್ಲಾಘಿಸುತ್ತಿದೆ.ಆದರೆ ಕೆಲವರು ಆ ಸೇವೆಯನ್ನು ಪ್ರಶ್ನಿಸುತ್ತಿದ್ದಾರೆ. ಉಕ್ರೇನ್ ನಲ್ಲಿ ವಿದ್ಯಾರ್ಥಿಗಳು ಸಿಲುಕಿದ್ದಾಗ  ಈ  ಜನರು ಆ ಮಕ್ಕಳನ್ನು ಬಿಟ್ಟಿಲ್ಲ. ಅವರ ಕುಟುಂಬದವರನ್ನೂ ಚಿಂತೆ ಮಾಡುವಂತೆ ಮಾಡಿದರು.  ಆಪರೇಷನ್  ಗಂಗಾವನ್ನೂ ಅವರು ಬಿಟ್ಟಿಲ್ಲ.

ಈ ಚುನಾವಣೆಯಲ್ಲಿ  ನಾನು ಅಭಿವೃದ್ಧಿ ಕಾರ್ಯವನ್ನಷ್ಟೇ ಮಾತನಾಡಿದ್ದೆ. ನಾನು ಹೆಚ್ಚು ಗಮನ ಹರಿಸಿದ್ದು ವಂಶಾಡಳಿತ  ಅಧಿಕಾರ ಬಗ್ಗೆ.  ನಾನು ಯಾವುದೇ ವ್ಯಕ್ತಿಯ  ಬಗ್ಗೆ,ಕುಟುಂಬದ ಬಗ್ಗೆ ದ್ವೇಷ ಹೊಂದಿಲ್ಲ. ನಾನು ಈ  ವಂಶಾಡಳಿತ ಅಧಿಕಾರ ರಾಜ್ಯಗಳನ್ನು ಹೇಗೆ ಹಿಂದಕ್ಕೆ ತಳ್ಳಿದೆ ಎಂಬುದನ್ನು  ನಾನು ಅವರಿಗೆ ಮನವರಿಕೆ ಮಾಡಿಕೊಟ್ಟೆ. ನಾನು ಹೇಳಿದ ಸಂಗತಿಗಳ ಬಗ್ಗೆ ಚರ್ಚೆ ಆಗಬೇಕಿದೆ. ವಂಶಾಡಳಿತವನ್ನು ಈ ಜನರು  ಕೊನೆಗೊಳಿಸುತ್ತಾರೆ. ಈ ಮಾತನ್ನು ನೀವು ಬರೆದಿಟ್ಟುಕೊಳ್ಳಿ

ಮುಂದೇನಾಗಲಿದೆ ಎಂಬುದನ್ನು  ಆ  ಫಲಿತಾಂಶ ತೋರಿಸಿಕೊಟ್ಟಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹಿಮ್ಮೆಟ್ಟಿಸುವ ಕಾರ್ಯವನ್ನೂ ‘ಅವರು’  ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಜನರಿಗೆ ಸಿಟ್ಟದೆ. ಬಿಜೆಪಿ  2014ರಲ್ಲಿ ಪ್ರಾಮಾಣಿಕತೆಯ ಭರವಸೆ ನೀಡಿಗೆದ್ದಿತ್ತು. ನಮ್ಮ  ಪ್ರಾಮಾಣಿಕತೆ ಮೆಚ್ಚಿ 2019ರಲ್ಲ ಜನರು ಮತ್ತೆ ನಮ್ಮನ್ನು ಗೆಲ್ಲಿಸಿದರು. ಆದರೆ ಈಗ ಕೆಲವು  ಜನರು ಭ್ರಷ್ಟಾಚಾರದೊಂದಿಗೆ ನಂಟು ಹೊಂದಿದ್ದಾರೆ. ಅವರು ತನಿಖಾ ಸಂಸ್ಥೆಗಳತ್ತ  ಬೆರಳು ತೋರಿಸಿ, ಅವುಗಳನ್ನು  ಅವಮಾನಿಸುತ್ತಿದ್ದಾರೆ . ಈ  ಜನರಿಗೆ ದೇಶದ ನೀರಿನಲ್ಲಿಯೂ ನಂಬಿಕೆ ಇಲ್ಲ. ಭ್ರಷ್ಟಾಚಾರ  ಮಾಡಿ ಅವರು ಸಿಕ್ಕಿಹಾಕಿಕೊಂಡರೆ ಅದಕ್ಕೆ ರಾಜಕೀಯ,ಜಾತಿ,ಧರ್ಮದ   ಹೆಸರು ನೀಡುತ್ತಾರೆ.

ನಾನು ಎಲ್ಲ ಜಾತಿಗಳ ಬಗ್ಗೆ ಹೆಮ್ಮೆ  ಪಡುವ ಜನರಲ್ಲಿ ಹೇಳುತ್ತಿದ್ದೇನೆ, ಭ್ರಷ್ಟಾಚಾರಿಗಳನ್ನು ಸಮಾಜದಿಂದ ದೂರವಿಡಿ. ಯುಪಿಯಲ್ಲಿ  ನಮ್ಮ  ಗೆಲುವಿಗೆ ಕಾರಣವಾದದ್ದೂ ಅದೇ.ನಾನು ಬನಾರಸ್  ನ ಸಂಸದನಾಗಿದ್ದುಕೊಂಡು  ಯುಪಿಯವರ  ಪ್ರೀತಿ ಮತ್ತು ಆಶೀರ್ವಾದದಿಂದ ನಾನೂ ಉತ್ತರಪ್ರದೇಶದವನಾದೆ. ಯುಪಿ  ಜನರಿಗೆ ಈಗ ತಿಳಿದಿದೆ ಜಾತಿವಾದವನ್ನು ದೂರವಿಡಬೇಕು ಎಂದು.

ದೇಶದ  ಬಡವರು ಗ್ರಾಮದ ಜತೆಗೆ ದೇಶದ ಯುವಶಕ್ತಿಯೊಂದಿಗೆ  ಆತ್ಮನಿರ್ಭರ್ ಮಿಷನ್  ನ್ನು ಸಾಧಿಸಲಿದೆ.  ಜಗತ್ತಿನ ಅತೀ ದೊಡ್ಡ ಮತ್ತು ವೇಗವಾದ ಲಸಿಕೆ  ನೀಡಿದೆ ಭಾರತದ ಸಾಮರ್ಥ್ಯವಾಗಿದೆ. ಭಾರತ ಎಲ್ಲ ಕ್ಷೇತ್ರದಲ್ಲಿಯೂ ಸಾಮರ್ಥ್ಯ ತೋರಿಸಿದ್ದಕ್ಕೆ ಕಾರಣ ಯುವಶಕ್ತಿ.

Published On - 7:37 pm, Thu, 10 March 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್