ಟ್ರೋಲ್ ಆಯ್ತು ಕೇರಳ ಯುಡಿಎಫ್ ಅಭ್ಯರ್ಥಿಗಳ ಬಗ್ಗೆ ಪ್ರಿಯಾಂಕಾ ಗಾಂಧಿ ಮಾಡಿದ್ದ ಟ್ವೀಟ್
ಸಂವಿಧಾನದ ಪ್ರಕಾರ ಚುನಾವಣೆಗೆ ಸ್ಪರ್ಧಿಸುವ ಉಮೇದುವಾರರ ಕನಿಷ್ಠ ವಯಸ್ಸು 25 ವರ್ಷ ಆಗಿರಬೇಕು ಎಂಬ ನಿಯಮವಿದೆ. ಈ ನಿಯಮ ತಿಳಿಯದೆ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿದ ಟ್ವೀಟ್ ಗುರುವಾರ ವ್ಯಾಪಕವಾಗಿ ಟ್ರೋಲ್ ಆಯ್ತು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮೈತ್ರಿಕೂಟದ ಕೇರಳ ಅಭ್ಯರ್ಥಿಗಳ ಪೈಕಿ ಅರ್ಧದಷ್ಟು ಮಂದಿಯ ವಯಸ್ಸು 20ರಿಂದ 40ರ ಆಸುಪಾಸಿನಲ್ಲಿದೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದರು. ಆದರೆ ಭಾರತದ ಸಂವಿಧಾನದ ಪ್ರಕಾರ ಚುನಾವಣೆಗೆ ಸ್ಪರ್ಧಿಸುವ ಉಮೇದುವಾರರ ಕನಿಷ್ಠ ವಯಸ್ಸು 25 ವರ್ಷ ಆಗಿರಬೇಕು ಎಂಬ ನಿಯಮವಿದೆ. ಈ ನಿಯಮ ತಿಳಿಯದೆ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ವ್ಯಂಗ್ಯವಾಡಿದ್ದಾರೆ.
ಸಂವಿಧಾನದ 84 (ಬಿ) ವಿಧಿಯ ಅನ್ವಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಉಮೇದುವಾರರ ವಯಸ್ಸು 25 ವರ್ಷವಾಗಿರಬೇಕು. ವಿಧಾನಸಭೆಗೂ ಸಂವಿಧಾನದ 173 (ಬಿ) ವಿಧಿಯ ಪ್ರಕಾರ 25 ವರ್ಷಗಳ ವಯೋಮಿತಿಯನ್ನು ಸೂಚಿಸಲಾಗಿದೆ. 1950ರ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಕನಿಷ್ಠ ವಯೋಮಿತಿಯನ್ನು ಸೂಚಿಸಲಾಗಿದೆ.
ಪ್ರಿಯಾಂಕಾರ ಟ್ವೀಟ್ಗೆ ಲಡಾಖ್ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಾಮ್ಗ್ಯಾಲ್ ಕಟುವಾಗಿ ಕಾಮೆಂಟ್ ಮಾಡಿದ್ದರು. ‘ನಿಮಗೆ ಚುನಾವಣಾ ಕಾನೂನು ಗೊತ್ತಿರದಿದ್ದರೆ ಸುಮ್ಮನಿರಿ’ ಎಂದು ಪ್ರತಿಕ್ರಿಯಿಸಿದ್ದರು. ‘ಪ್ರಿಯ ಪ್ರಿಯಾಂಕಾ ಗಾಂಧಿ ಜಿ, ನಿಮಗೆ ಸಕ್ರಿಯ ರಾಜಕಾರಣದ ಮುಖ್ಯ ಅಂಶಗಳು ಮತ್ತು ಚುನಾವಣಾ ನಿಯಮಗಳು ಗೊತ್ತಿರದಿದ್ದರೆ ಸುಮ್ಮನಿರುವುದು ಅತ್ಯುತ್ತಮ ಆಯ್ಕೆ’ ಎಂದು ಹೇಳಿದ್ದರು.
ನಂತರ ಒಬ್ಬರಾದ ಮೇಲೆ ಒಬ್ಬರು ಪ್ರಿಯಾಂಕಾ ಟ್ವೀಟ್ ಬಗ್ಗೆ ತಮಾಷೆ ಮಾಡಲು ಆರಂಭಿಸಿದರು. ಶಾಸಕ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಲು ಕನಿಷ್ಠ 25 ವರ್ಷವಾಗಿರಬೇಕು. ಈಗ ಹೇಳಿ 20 ವರ್ಷಕ್ಕೆ ಯಾರೆಲ್ಲಾ ಶಾಸಕರಾಗಿದ್ದರು ಎಂದು ಟ್ವೀಟ್ ಯೂಸರ್ ಒಬ್ಬರು ಪ್ರಶ್ನಿಸಿದ್ದರು. ಪ್ರಿಯಾಂಕಾ ಹೇಳಿಕೆಗೆ ಕಾಮೆಂಟ್ ರೂಪದಲ್ಲಿ ಹರಿದುಬಂದ ಕೆಲ ಟ್ವೀಟ್ಗಳಿವು.
So proud that 50% of our candidates in Kerala are between the age of 20 and 40. Combined with the wisdom and experience of our senior leadership, they make a formidable force. I hope they are given a chance to serve the people of Kerala so that the UDF’s vision can be realised. pic.twitter.com/5Js0xczTPH
— Priyanka Gandhi Vadra (@priyankagandhi) March 31, 2021
Bhai MLA hone ki minimum qualification his 25 yrs hai. pic.twitter.com/LWq8lqsKwQ
— Makhulu (@makhulumapogos) March 31, 2021
Dear @priyankagandhi Ji,
यदि आप सक्रिय राजनीति और चुनाव नियमों की मूल बात नहीं जानते हैं तो चुप रहना ही एक अच्छा विकल्प है !
Minimum age to contest election in India is 25. Now what about your candidates between the age 20 to below 25? https://t.co/r8t8RO2Ki5
— Jamyang Tsering Namgyal (@jtnladakh) March 31, 2021
ಕೇರಳ ವಿಧಾನಸಭೆಗೆ ಏಪ್ರಿಲ್ 6ರಂದು ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು ಕನಿಷ್ಠ 71 ಸದಸ್ಯ ಬಲ ಬೇಕಿದೆ.
ಇದನ್ನೂ ಓದಿ: ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ನರೇಂದ್ರ ಮೋದಿ ರ‍್ಯಾಲಿ, ಟ್ವಿಟರ್ನಲ್ಲಿ ಮೋದಿ ಗೋಬ್ಯಾಕ್ ಟ್ರೆಂಡ್
ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೇರಿದರೆ ಕೇರಳದಲ್ಲಿ ಸಿಎಎ ಜಾರಿ; ಪೀಯೂಷ್ ಗೋಯಲ್