ಉನ್ನತ ಸ್ಥಾನವನ್ನು ಹೊಂದಿರುವವರು ಈ ರೀತಿ ಹೇಳಬಾರದು: ಗೆಹ್ಲೋಟ್ಗೆ ಧನ್ಖರ್ ಪ್ರತಿಕ್ರಿಯೆ
ಒಬ್ಬ ವ್ಯಕ್ತಿಯು ಉನ್ನತ ಸ್ಥಾನವನ್ನು ಹೊಂದಿದ್ದಾರೆ. ಅವರ ನಡವಳಿಕೆಯು ಹೆಚ್ಚು ಘನತೆಯಿಂದ ಕೂಡಿರಬೇಕು. ರಾಜಕೀಯ ಲಾಭ ಪಡೆಯಲು ಯಾವುದೇ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಸಾಂವಿಧಾನಿಕ ಸಂಸ್ಥೆಗಳಿಗೆ ಬಂದಾಗ ಎಲ್ಲರೂ ಜವಾಬ್ದಾರರಾಗಿರಲು ನಾನು ಕರೆ ನೀಡುತ್ತೇನೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.
ದೆಹಲಿ ಸೆಪ್ಟೆಂಬರ್ 29: ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಕಾಂಗ್ರೆಸ್ (Congress) ಆಡಳಿತವಿರುವ ರಾಜ್ಯಕ್ಕೆ ಉಪರಾಷ್ಟ್ರಪತಿಯವರು ಪದೇ ಪದೇ ಭೇಟಿ ನೀಡುತ್ತಿರುವುದನ್ನು ಪ್ರಶ್ನಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರಿಗೆ ಜಗದೀಪ್ ಧನ್ಖರ್ (Jagdeep Dhankhar) ಪ್ರತಿಕ್ರಿಯಿಸಿದ್ದಾರೆ. ರಾಜಸ್ಥಾನದ ನೀಮ್ರಾನಾದಲ್ಲಿ ಚುನಾವಣಾ ಪ್ರಚಾರದಲ್ಲಿ, ಚುನಾವಣೆ ಸಮೀಪಿಸಿರುವುದರಿಂದ ಐದು ಜಿಲ್ಲೆಗಳಿಗೆ ಉಪರಾಷ್ಟ್ರಪತಿಯವರ ಭೇಟಿಯನ್ನು ಗೆಹ್ಲೋಟ್ ವಿರೋಧಿಸಿದ್ದು, ಈ ಭೇಟಿಯು “ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ” ಎಂಬ ಸಂದೇಶ ಇದರಿದ ರವಾನೆಯಾಗುತ್ತದೆ ಎಂದು ಹೇಳಿದ್ದರು.
ರಾಜಕಾರಣಿಗಳು ಬರಬೇಕು, ಆದರೆ ದಯವಿಟ್ಟು ಉಪರಾಷ್ಟ್ರಪತಿಯನ್ನು ಕಳುಹಿಸಬೇಡಿ, ಇದು ಸಂವಿಧಾನಾತ್ಮಕ ಹುದ್ದೆ, ರಾಷ್ಟ್ರಪತಿ, ಉಪರಾಷ್ಟ್ರಪತಿಯನ್ನು ಗೌರವಿಸುತ್ತೇವೆ. ನಿನ್ನೆ ಉಪರಾಷ್ಟ್ರಪತಿ ಬಂದು ಐದು ಜಿಲ್ಲೆಗಳಿಗೆ ಭೇಟಿ ನೀಡಿದ್ದರು. ಇದು ಚುನಾವಣಾ ಕಾಲ. ಈಗ ಬಂದರೆ ಅದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲದ ಎಲ್ಲಾ ರೀತಿಯ ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂದು ನೀಮ್ರಾನಾದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಗೆಹ್ಲೋಟ್ ಹೇಳಿದ್ದಾರೆ.
ಉನ್ನತ ಸ್ಥಾನದಲ್ಲಿರುವವರು ಜವಾಬ್ದಾರಿಯುತ ಪದಗಳನ್ನು ಬಳಸಬೇಕು ಉಪರಾಷ್ಟ್ರಪತಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ವ್ಯಕ್ತಿಯು ಉನ್ನತ ಸ್ಥಾನವನ್ನು ಹೊಂದಿದ್ದಾರೆ. ಅವರ ನಡವಳಿಕೆಯು ಹೆಚ್ಚು ಘನತೆಯಿಂದ ಕೂಡಿರಬೇಕು. ರಾಜಕೀಯ ಲಾಭ ಪಡೆಯಲು ಯಾವುದೇ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಸಾಂವಿಧಾನಿಕ ಸಂಸ್ಥೆಗಳಿಗೆ ಬಂದಾಗ ಎಲ್ಲರೂ ಜವಾಬ್ದಾರರಾಗಿರಲು ನಾನು ಕರೆ ನೀಡುತ್ತೇನೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.
ಕೆಲವರು ರಾಜಕೀಯ ಕನ್ನಡಕ ಹಾಕಿಕೊಂಡು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಸಭ್ಯ ಟೀಕೆಗಳನ್ನು ಮಾಡುವುದು ಚಿಂತನೆಗೀಡುಮಾಡುವ ಮತ್ತು ಕಳವಳಕಾರಿ ವಿಷಯವಾಗಿದೆ” ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.
ಇದನ್ನೂ ಓದಿ: ಜಗತ್ತು ನೋಡುತ್ತಿದೆ, ನೀವು ಇನ್ನೂ ಮೌನವಾಗಿದ್ದೀರಿ: ಪ್ರಧಾನಿಗೆ ಡ್ಯಾನಿಶ್ ಅಲಿ ಪತ್ರ
ಅವರು ಇದನ್ನು ಮಾಡಬಾರದು. ಇಂತಹ ನಡವಳಿಕೆಯು ನಮ್ಮ ಸಾಂಸ್ಕೃತಿಕ ಪರಂಪರೆಗೆ ವಿರುದ್ಧವಾಗಿದೆ. ರಾಜಕೀಯ ಲಾಭ ಗಳಿಸಲು ನಾವು ಸಾಂವಿಧಾನಿಕ ಪದಾಧಿಕಾರಿಗಳನ್ನು ರಾಜಕೀಯ ನೋಟದಿಂದ ನೋಡಬಾರದು. ಅದು ಸ್ವೀಕಾರಾರ್ಹವಲ್ಲ” ಎಂದು ಧನ್ಖರ್ ಹೇಳಿದ್ದಾರೆ.
ರಾಜಸ್ಥಾನಕ್ಕೆ ಭೇಟಿ ನೀಡಲು ಉಪರಾಷ್ಟ್ರಪತಿ ಮುಖ್ಯಮಂತ್ರಿಯವರ ಅನುಮತಿಯನ್ನು ತೆಗೆದುಕೊಳ್ಳಬೇಕೇ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಗೆಹ್ಲೋಟ್ ಅವರಿಗೆ ಕೇಳಿದ್ದಾರೆ. “ಉಪರಾಷ್ಟ್ರಪತಿಗೆ ಮುಖ್ಯಮಂತ್ರಿಗಳು ಈಗ ಯಾಕೆ ಬರುತ್ತಿದ್ದಾರೆ ಎಂದು ಹೇಳಿದರು. ಹಾಗಾದರೆ ಅವರ ಅನುಮತಿ ಪಡೆದು ಉಪರಾಷ್ಟ್ರಪತಿ ಬರುತ್ತಾರಾ?”ಎಂದು ಗುರುವಾರ ಜೈಪುರದಲ್ಲಿ ಸುದ್ದಿಗಾರ ಜತೆ ಮಾತನಾಡಿದ ಮೇಘವಾಲ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ