ಜಗತ್ತು ನೋಡುತ್ತಿದೆ, ನೀವು ಇನ್ನೂ ಮೌನವಾಗಿದ್ದೀರಿ: ಪ್ರಧಾನಿಗೆ ಡ್ಯಾನಿಶ್ ಅಲಿ ಪತ್ರ

ಜಗತ್ತು ಭಾರತವನ್ನು ಹೆಚ್ಚು ನಿಕಟವಾಗಿ ಗಮನಿಸುತ್ತಿದೆ ಎಂದು ಅಲಿ ಪ್ರಧಾನಿ ಮೋದಿಯವರಿಗೆ ಹೇಳಿದ್ದಾರೆ. ಅಂದಹಾಗೆ ಈ ವಿಷಯದ ಬಗ್ಗೆ ಆಗಲೀ ಸದನದಲ್ಲಿ ಸದಸ್ಯರ ಶಿಸ್ತು ಬಗ್ಗೆಯಾಗಲೀ ಮೋದಿ ಮಾತನಾಡಿಲ್ಲ. "ಸಭಾನಾಯಕರಾಗಿ ಮತ್ತು ನಮ್ಮ ಮಹಾನ್ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ನಿಮ್ಮ ಸಾಮರ್ಥ್ಯದಲ್ಲಿ, ಸಂಸದರಾದ ರಮೇಶ್ ಬಿಧುರಿ ಅವರು ಅಸಂಸದೀಯ ಮತ್ತು ನಿಂದನೀಯ ಭಾಷೆಯನ್ನು ಆಶ್ರಯಿಸಿರುವ ಬಗ್ಗೆ ನೀವು ಗಂಭೀರ ಕಳವಳ  ವ್ಯಕ್ತಪಡಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಅಲಿ.

ಜಗತ್ತು ನೋಡುತ್ತಿದೆ, ನೀವು ಇನ್ನೂ ಮೌನವಾಗಿದ್ದೀರಿ: ಪ್ರಧಾನಿಗೆ ಡ್ಯಾನಿಶ್ ಅಲಿ ಪತ್ರ
ಡ್ಯಾನಿಶ್ ಅಲಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 29, 2023 | 6:52 PM

ದೆಹಲಿ ಸೆಪ್ಟೆಂಬರ್ 29: ಕಳೆದ ವಾರ ಸಂಸತ್​​ನಲ್ಲಿ ಬಿಜೆಪಿಯ ರಮೇಶ್ ಬಿಧುರಿ (Ramesh Bidhuri) ಅವರು ಇಸ್ಲಾಮೋಫೋಬಿಕ್ ವಾಗ್ದಾಳಿಗೆ ಗುರಿಯಾಗಿರುವ ಬಹುಜನ ಸಮಾಜ ಪಕ್ಷದ ಸಂಸದ ಕುನ್ವರ್ ಡ್ಯಾನಿಶ್ ಅಲಿ (Kunwar Danish Ali) ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದು “ಮೌನ ಮುರಿಯಿರಿ” ಮತ್ತು ಸಂಸತ್ ನ ನಿಯಮಗಳ ಪಾಲನೆ ಮತ್ತು ರಕ್ಷಣೆ ಕ್ರಮಕ್ಕೆ ಮುಂದಾಗುವಂತೆ ಹೇಳಿದ್ದಾರೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಅಲಿ ಪ್ರಧಾನಿ ವಿರುದ್ಧ ಜಾತಿವಾದಿ ಪದಗಳನ್ನು ಬಳಸಿದ್ದರಿಂದ ಬಿಧುರಿ ಅವರು ಕೋಮು ದೂಷಣೆಗಳನ್ನು ಬಳಸಿದ್ದಾರೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅಲಿ, “ನಿಮ್ಮನ್ನು (ಪ್ರಧಾನಿ) ಉಲ್ಲೇಖಿಸುವಾಗ ಅನುಚಿತ ಭಾಷೆ” ಬಳಸಿದ್ದು ಬಿಜೆಪಿ ಸಂಸದರೇ, ನಾನು”ಅಂತಹ ಭಾಷೆಯ ಬಳಕೆಯನ್ನು ಆಕ್ಷೇಪಿಸಿದ್ದೆ ಎಂದು ಹೇಳಿದ್ದಾರೆ.

ನಿಮ್ಮ ವಿರುದ್ಧ ಅಸಂಸದೀಯ ಭಾಷೆ ಬಳಸುವುದರ ವಿರುದ್ಧ ನನ್ನ ನಿಲುವಿಗೆ ಆಡಳಿತ ಪಕ್ಷದ ಯಾವೊಬ್ಬ ಸದಸ್ಯರು ವಿರೋಧ ವ್ಯಕ್ತಪಡಿಸಿಲ್ಲ ಎಂಬುದು ಸದನದ ಕಲಾಪದಿಂದ ಸ್ಪಷ್ಟವಾಗಿದೆ. ಆದರೆ, ನಾನು ಎದ್ದುನಿಂತು ಬಿಧುರಿ ಅವರು ನಿಮ್ಮ ವಿರುದ್ಧ ಅಸಂಸದೀಯ ಭಾಷೆ ಬಳಸುತ್ತಿರುವುದನ್ನು ಸೂಚಿಸಿದಾಗ, ಅವರು ತಮ್ಮ ತಪ್ಪನ್ನು ಮರೆ ಮಾಚುವುದಕ್ಕಾಗಿ ನನ್ನ ಮೇಲೆ ತಿರುಗಿ ಬಿದ್ದರು ಎಂದು ಹೇಳಿದ್ದಾರೆ.

ಜಗತ್ತು ಭಾರತವನ್ನು ಹೆಚ್ಚು ನಿಕಟವಾಗಿ ಗಮನಿಸುತ್ತಿದೆ ಎಂದು ಅಲಿ ಪ್ರಧಾನಿ ಮೋದಿಯವರಿಗೆ ಹೇಳಿದ್ದಾರೆ. ಅಂದಹಾಗೆ ಈ ವಿಷಯದ ಬಗ್ಗೆ ಆಗಲೀ ಸದನದಲ್ಲಿ ಸದಸ್ಯರ ಶಿಸ್ತು ಬಗ್ಗೆಯಾಗಲೀ ಮೋದಿ ಮಾತನಾಡಿಲ್ಲ. “ಸಭಾನಾಯಕರಾಗಿ ಮತ್ತು ನಮ್ಮ ಮಹಾನ್ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ನಿಮ್ಮ ಸಾಮರ್ಥ್ಯದಲ್ಲಿ, ಸಂಸದರಾದ ರಮೇಶ್ ಬಿಧುರಿ ಅವರು ಅಸಂಸದೀಯ ಮತ್ತು ನಿಂದನೀಯ ಭಾಷೆಯನ್ನು ಆಶ್ರಯಿಸಿರುವ ಬಗ್ಗೆ ನೀವು ಗಂಭೀರ ಕಳವಳ  ವ್ಯಕ್ತಪಡಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಅಲಿ.

ಮೂರು ಪುಟಗಳ ಪತ್ರದಲ್ಲಿ, ಅವರು  ಅಂತಹ ನಡವಳಿಕೆಯನ್ನು ಖಂಡಿಸುವ ಹೇಳಿಕೆಯನ್ನು ನೀಡುವಂತೆ ಮತ್ತು ಎಲ್ಲಾ ಸದಸ್ಯರಿಗೆ ಮತ್ತು ನಡವಳಿಕೆಯ ಅತ್ಯುನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳಲು ನೆನಪಿಸುವಂತೆ ಪ್ರಧಾನಿಯನ್ನು ಕೇಳಿದರು. ಬಿಧುರಿ ಅವರನ್ನು ಅವರ ಖಂಡನೀಯ ನಡವಳಿಕೆಗಾಗಿ ಜವಾಬ್ದಾರರನ್ನಾಗಿ ಮಾಡಬೇಕು ಮತ್ತು ಅವರನ್ನು ಶಿಕ್ಷಿಸಬೇಕೆಂದು ಅಲಿ ಮನವಿ ಮಾಡಿದ್ದಾರೆ.

ನನ್ನ ಪ್ರತಿಷ್ಠೆಗೆ ಧಕ್ಕೆ ತರುವ ನಿರಂತರ ಪ್ರಯತ್ನ ಇದು ಎಂದು ಹೇಳಿದ ಅಲಿ, ದುಬೆ ಮತ್ತು ಇನ್ನೊಬ್ಬ ಬಿಜೆಪಿ ಸಂಸದ ರವಿ ಕಿಶನ್ ಶುಕ್ಲಾ ಅವರ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, “(ತನ್ನ) ದೈಹಿಕ ಹತ್ಯೆಯ ನಿರೂಪಣೆಯನ್ನು” ರಚಿಸಲಾಗುತ್ತಿದೆ ಎಂದು ತಾನು ಭಯಪಡುತ್ತೇನೆ ಎಂದು ಈ ಹಿಂದೆ ಹೇಳಿದ್ದರು.

ಸಂಸತ್​​​ನಲ್ಲಿನ ವಾಗ್ದಾಳಿ ನಂತರ ಅಪರಿಚಿತ ವ್ಯಕ್ತಿಗಳು ತನಗೆ “ಬೆದರಿಕೆ ಸಂದೇಶಗಳನ್ನು” ಕಳುಹಿಸಿದ್ದಾರೆ ಮತ್ತು ಈ ಪಠ್ಯಗಳ ಸ್ಕ್ರೀನ್‌ಶಾಟ್‌ಗಳನ್ನು ಲಗತ್ತಿಸಿರುವುದಾಗಿ ಅಲಿ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ ಮಾತಾಡುವೆ: ‘ಇಂಡಿಯಾ’ದಲ್ಲಿನ ಭಿನ್ನಾಭಿಪ್ರಾಯ ಬಗ್ಗೆ ಶರದ್ ಪವಾರ್

ವಿರೋಧ ಪಕ್ಷದ ನಾಯಕರಿಂದ ದೂರುಗಳನ್ನು ಸ್ವೀಕರಿಸಿದ ತಮ್ಮ ಪಕ್ಷ ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅದರ ನಿರ್ಣಯವನ್ನು ಬಿಟ್ಟರೆ, ರಮೇಶ್ ಬಿಧುರಿ ಈ ವಿವಾದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿರ್ಲಾ ಅವರು ಅಂತಹ ನಡವಳಿಕೆಯನ್ನು ಪುನರಾವರ್ತಿಸಿದರೆ “ಕಟ್ಟುನಿಟ್ಟಿನ ಕ್ರಮ” ಕೈಗೊಳ್ಳುವುದಾಗಿ ಹೇಳಿದ್ದಾರೆ.

ಗುರುವಾರ ಬಿಜೆಪಿ ಮತ್ತು ಪ್ರತಿಪಕ್ಷಗಳು ಸಂಸತ್ತಿನ ವಿಶೇಷಾಧಿಕಾರ ಸಮಿತಿಗೆ ದೂರು ಸಲ್ಲಿಸಿದವು. ಅಲಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಸಂಸದೆ ಕನಿಮೋಳಿ ಅವರು ಬಿಜೆಪಿಗೆ ನೋಟಿಸ್ ಕಳುಹಿಸಿದ ನಂತರ ದುಬೆ ಮತ್ತು ಕಿಶನ್ ಗೆ ಬಿಜೆಪಿಗೆ ನೋಟಿಸ್ ಕಳುಹಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ