ತಮಿಳುನಾಡು ಚುನಾವಣೆ ಬಳಿಕ ಸುನಿಲ್ ಕಾನುಗೋಳು ಅವರು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್(K Chandrasekhar Rao) ಅವರನ್ನು ಭೇಟಿಯಾಗಿದ್ದರು. ಭೇಟಿ ಸಂದರ್ಭದಲ್ಲಿ ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕುರಿತು ಚರ್ಚೆಯಾಗಿತ್ತು. ಈ ಸಂಬಂಧ ಸುಧೀರ್ಘ ಮಾತುಕತೆಯನ್ನೂ ನಡೆಸಿದ್ದರು. ಆದರೆ ಒಂದಷ್ಟು ಮಾತುಕತೆ ಬಳಿಕ ಸುನಿಲ್ ಅವರ ಆಫರ್ ಅನ್ನು ಕೆಸಿಆರ್ ತಿರಸ್ಕರಿಸಿದ್ದರು ಎಂದು ಹೇಳಲಾಗುತ್ತಿದೆ.
ಅದರ ಪರಿಣಾಮವೇನೆಂದರೆ ಅದಾಗಿ ಕೆಲವೇ ತಿಂಗಳಲ್ಲಿ, ಸುನಿಲ್ ಕಾಂಗ್ರೆಸ್ ಸೇರ್ಪಡೆಯಾಗುವುದರ ಜತೆಗೆ ಕಾಂಗ್ರೆಸ್ನ ಚುನಾವಣಾ ಕಾರ್ಯತಂತ್ರದ ಅಧ್ಯಕ್ಷರಾಗಿಯೂ ನೇಮಕವಾಗುತ್ತಾರೆ. ಅದರ ಬೆನ್ನಲ್ಲೇ ಕರ್ನಾಟಕ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯತಂತ್ರದ ಉಸ್ತುವಾರಿಯನ್ನು ಸುನಿಲ್ ವಹಿಸಿಕೊಳ್ಳುತ್ತಾರೆ.
ಹಾಗೆಯೇ ಭಾರತ್ ಜೋಡೋ ಯಾತ್ರೆ ಹಿಂದಿನ ಪ್ರಮುಖ ಶಕ್ತಿ ಕೂಡ ಸುನಿಲ್ ಹೌದು, ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಅದ್ಭುತವಾಗಿ ಸಂಘಟಿಸಿ ಗೆದ್ದ ಬೆನ್ನಲ್ಲೇ ಅವೆಲ್ಲಾ ಶಕ್ತಿಯನ್ನು ತೆಲಂಗಾಣದತ್ತ ಹಾಕಿದರು, ಅದರ ಫಲಿತಾಂಶವೇ ಇಂದು ಬಂದಿದೆ.
ಮತ್ತಷ್ಟು ಓದಿ: ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ರೆಡ್ಡಿ ಮನೆಗೆ ಬಿಗಿ ಭದ್ರತೆ
ಅವರ ತಂತ್ರಗಾರಿಕೆ ಮತ್ತು ಪರಿಶ್ರಮಕ್ಕೆ ಈಗ ಉತ್ತಮ ಫಲ ಸಿಕ್ಕಿದೆ. ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ಯಾತ್ರೆ’ಗೆ ಕಾರ್ಯತಂತ್ರ ರೂಪಿಸಿದ ಕೀರ್ತಿಯೂ ಕನುಗೋಳು ಅವರದ್ದು.
ಕರ್ನಾಟಕದ ಬಳ್ಳಾರಿ ಮೂಲದ ಸುನೀಲ್ ಕಾನುಗೋಳು, ಚೆನ್ನೈನಲ್ಲಿ ಹುಟ್ಟಿ ಬೆಳೆದ ಅವರು USA ಯಿಂದ ಉನ್ನತ ವ್ಯಾಸಂಗ ಮಾಡಿದರು ಮತ್ತು ಜಾಗತಿಕ ನಿರ್ವಹಣಾ ಸಲಹಾ ಸಂಸ್ಥೆಯಾದ ಮೆಕಿನ್ಸೆಯಲ್ಲಿ ಕೆಲಸ ಮಾಡಿದರು.
ಭಾರತಕ್ಕೆ ಹಿಂದಿರುಗಿದ ನಂತರ, ಕಾನುಗೋಳು ಗುಜರಾತ್‌ನಲ್ಲಿ ರಾಜಕೀಯ ಕಾರ್ಯತಂತ್ರಗಳಲ್ಲಿ ತೊಡಗಿಸಿಕೊಂಡರು ಮತ್ತು ಅಸೋಸಿಯೇಷನ್ ಆಫ್ ಬಿಲಿಯನ್ ಮೈಂಡ್ಸ್ (ಎಬಿಎಂ) ಅನ್ನು ಮುನ್ನಡೆಸಿದರು. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಕಾರ್ಯತಂತ್ರ ರೂಪಿಸಿದವರಲ್ಲಿ ಇವರೂ ಒಬ್ಬರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Sun, 3 December 23