UP Assembly Polls: ಉತ್ತರ ಪ್ರದೇಶದ 61 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ; ಮಧ್ಯಾಹ್ನ 1ಗಂಟೆವರೆಗೆ ಶೇ.35ರಷ್ಟು ಮತಚಲಾವಣೆ

ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಅಯೋಧ್ಯೆಯಲ್ಲಿ ಇಂದು ಮತದಾನ ನಡೆಯುತ್ತಿದೆ. ಹನುಮಗಿರಿ ದೇವಾಲಯದ ಮುಖ್ಯ ಅರ್ಚಕ ಮಹಾಂತ ಜ್ಞಾನ ದಾಸ್ ಮತ ಹಾಕಿದ್ದಾರೆ.

UP Assembly Polls: ಉತ್ತರ ಪ್ರದೇಶದ 61 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ; ಮಧ್ಯಾಹ್ನ 1ಗಂಟೆವರೆಗೆ ಶೇ.35ರಷ್ಟು ಮತಚಲಾವಣೆ
ಮತದಾನಕ್ಕೆ ಕ್ಯೂ ನಿಂತ ಮಹಿಳೆಯರು
Follow us
TV9 Web
| Updated By: Lakshmi Hegde

Updated on:Feb 27, 2022 | 3:07 PM

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ (Uttar Pradesh Assembly Election) 5ನೇ ಹಂತದ ಮತದಾನ ನಡೆಯುತ್ತಿದ್ದ ಇಂದು ಮಧ್ಯಾಹ್ನ 1ಗಂಟೆಯವರೆಗೆ ಶೇ.34.83ರಷ್ಟು ಮತ ಚಲಾವಣೆಯಾಗಿದೆ. ಬೆಳಗ್ಗೆ 11ಗಂಟೆ ಹೊತ್ತಿಗೆ ಶೇ.21.39ರಷ್ಟು ಮತ ಚಲಾವಣೆಯಾಗಿತ್ತು. ಇಂದು 12 ಜಿಲ್ಲೆಗಳ 61 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಒಟ್ಟು 692 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2017ರ ಚುನಾವಣೆಯಲ್ಲಿ ಬಿಜೆಪಿ ಈ 61 ಕ್ಷೇತ್ರಗಳಲ್ಲಿ 50ರಲ್ಲಿ ಗೆದ್ದಿತ್ತು.  ಯುಪಿ ಮತದಾನಕ್ಕೆ ಸಂಬಂಧಪಟ್ಟಂತೆ ಇಲ್ಲಿವರೆಗೆ ನಡೆದ ಪ್ರಮುಖ ಬೆಳವಣಿಗೆಗಳು ಹೀಗಿವೆ.

  1. ಇಂದು ಚುನಾವಣಾ ಕಣದಲ್ಲಿರುವ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್​ ಪ್ರಸಾದ್ ಮೌರ್ಯ ಬೆಳಗ್ಗೆ ತಮ್ಮ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು. ಅದಕ್ಕೂ ಮೊದಲ ಮಾತನಾಡಿ, ನನ್ನ ಕ್ಷೇತ್ರವಾದ ಸಿರಥುವಿನಲ್ಲಿ ಬಿಜೆಪಿ ಅತ್ಯಂತ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ. ನಮ್ಮ ಸರ್ಕಾರ ರಾಜ್ಯದ ಅಭಿವೃದ್ಧಿಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಈ ಅಭಿವೃದ್ಧಿಗಾಗಿ ಜನರು ಇನ್ನೊಮ್ಮೆ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು. Kaushambi, UP | Deputy CM Keshav Prasad Maurya offers prayers at his residence as voting in the fifth phase of #UttarPradeshElections gets underway.

    Maurya is contesting as a BJP candidate from Sirathu constituency, polling on which is being held today. pic.twitter.com/sqOgTzZ1Kh

    — ANI UP/Uttarakhand (@ANINewsUP) February 27, 2022

  2.  ಉತ್ತರ ಪ್ರದೇಶದ ಕುಂದಾದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಗುಲ್​ಶಾನ್​ ಯಾದವ್​ ಬೆಂಗಾವಲು ವಾಹನದ ಮೇಲೆ ದಾಳಿಯಾಗಿದೆ ಎಂದು ಪಕ್ಷ ಆರೋಪ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯರ ಪೊಲೀಸರು, ಇದಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಂಡಿದ್ದೇವೆ. ಈಗ ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ. ಇನ್ನುಳಿದಂತೆ ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ರಾಜ್ಯದಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ.
  3. ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಅಯೋಧ್ಯೆಯಲ್ಲಿ ಇಂದು ಮತದಾನ ನಡೆಯುತ್ತಿದೆ. ಹನುಮಗಿರಿ ದೇವಾಲಯದ ಮುಖ್ಯ ಅರ್ಚಕ ಮಹಾಂತ ಜ್ಞಾನ ದಾಸ್ ಮತ ಹಾಕಿದ್ದಾರೆ. ಈ ವೇಳೆ ಅವರೊಂದಿಗೆ ಹಲವು ಖಾವಿಧಾರಿಗಳು, ಧಾರ್ಮಿಕ ಮುಖಂಡರು ಇದ್ದರು.
  4. ಕಳೆದ ನಾಲ್ಕೂ ಹಂತಗಳಂತೆ ಈ ಹಂತದಲ್ಲಿ ಬಾರಿಯೂ ಸಮಾಜವಾದಿ ಪಕ್ಷದ ಆರೋಪ ಮುಂದುವರಿದಿದೆ. ಪ್ರತಾಪ್​​ಗಢ್​​ನ ಬಾಬಾಗಂಜ್​ ವಿಧಾನಸಭಾ ಕ್ಷೇತ್ರದ 161, 263, 190, 75, 76, 114 ನಂಬರ್​ಗಳ ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ ಮತ್ತು ಮಟೇರಾ ವಿಧಾನಸಭಾ ಕ್ಷೇತ್ರದ 219ನೇ ಮತ ಕೇಂದ್ರದಲ್ಲಿ ನಕಲಿ ಮತದಾನ ಆಗಿದೆ ಎಂದು ಆರೋಪ ಮಾಡಿದೆ.

ಇದನ್ನೂ ಓದಿ: Fact Check ರಷ್ಯಾ ದಾಳಿ ನಂತರ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಸೇನಾ ಸಮವಸ್ತ್ರ ಧರಿಸಿ ಹೋರಾಡುತ್ತಿರುವ ವೈರಲ್ ಚಿತ್ರ ಈಗಿನದ್ದು ಅಲ್ಲ

Published On - 3:06 pm, Sun, 27 February 22