ಯೋಗಿ ಆದಿತ್ಯನಾಥ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವೆ: ಚಂದ್ರಶೇಖರ್ ಆಜಾದ್

Chandrashekhar Azad ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಥಾನ ಗೆಲ್ಲುವುದು ನನಗೆ ಮುಖ್ಯವಲ್ಲ. ಯೋಗಿ ಆದಿತ್ಯನಾಥ ಅವರು ವಿಧಾನಸಭೆಯಲ್ಲಿ ಇರಬಾರದು ಎಂಬುದು ನನಗೆ ಮುಖ್ಯವಾಗಿದೆ. ಹಾಗಾಗಿ ಅವರು ಎಲ್ಲಿ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ ಎಂದ ಚಂದ್ರಶೇಖರ್ ಆಜಾದ್.

ಯೋಗಿ ಆದಿತ್ಯನಾಥ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವೆ: ಚಂದ್ರಶೇಖರ್ ಆಜಾದ್
ಚಂದ್ರಶೇಖರ್ ಆಜಾದ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 09, 2021 | 8:02 PM

ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ಚುನಾವಣೆಯಲ್ಲಿ(Uttar Pradesh Elections) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ವಿರುದ್ಧ ಸ್ಪರ್ಧಿಸುವುದಾಗಿ ದಲಿತ ಮುಖಂಡ  ಭೀಮ್ ಆರ್ಮಿಯ (Bhim Army) ಚಂದ್ರಶೇಖರ್ ಆಜಾದ್ (Chandrashekhar Azad) ಘೋಷಿಸಿದ್ದಾರೆ. 34 ವರ್ಷದ ಅವರು 2019 ರಲ್ಲಿ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಹೋರಾಡುವುದಾಗಿ ಘೋಷಿಸಿದ ನಂತರ ಯು-ಟರ್ನ್ ತೆಗೆದುಕೊಂಡಿದ್ದರು.  “ನಾನು ಪ್ರಧಾನಿ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದೆ. ಆದರೆ ಆ ಸಮಯದಲ್ಲಿ ನನ್ನ ಬಳಿ ಯಾವುದೇ ಪಕ್ಷ ಇರಲಿಲ್ಲ. ವಿರೋಧದ ಮತಗಳನ್ನು ವಿಭಜಿಸುವ ಬದಲು ನಾನು ಅವರ ಅಭ್ಯರ್ಥಿಯನ್ನು ಬೆಂಬಲಿಸುವುದು ಉತ್ತಮ ಎಂದು ಮಾಯಾವತಿ (BSP ಮುಖ್ಯಸ್ಥೆ) ಎಂದು ಹೇಳಿದ್ದರು. ಈ ಬಾರಿ ನಾನು ಆಜಾದ್ ಸಮಾಜ ಪಕ್ಷವನ್ನು ಹೊಂದಿದ್ದೇನೆ ಎಂದು ಎಂದು ಎನ್​​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಚಂದ್ರಶೇಖರ್ ಆಜಾದ್ ಅಕಾ ರಾವಣ್ ಹೇಳಿದ್ದಾರೆ. ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಥಾನ ಗೆಲ್ಲುವುದು ನನಗೆ ಮುಖ್ಯವಲ್ಲ. ಯೋಗಿ ಆದಿತ್ಯನಾಥ ಅವರು ವಿಧಾನಸಭೆಯಲ್ಲಿ ಇರಬಾರದು ಎಂಬುದು ನನಗೆ ಮುಖ್ಯವಾಗಿದೆ. ಹಾಗಾಗಿ ಅವರು ಎಲ್ಲಿ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ.  ನಾವು ಸ್ವಂತ ಬಲದಿಂದ ಚುನಾವಣೆಗೆ ಸ್ಪರ್ಧಿಸಿದರೆ ದಲಿತರು, ಮುಸ್ಲಿಮರು ಅಥವಾ ಹಿಂದುಳಿದ ಜಾತಿಗಳ ಅಭ್ಯರ್ಥಿಗಳನ್ನು ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ಕಣಕ್ಕಿಳಿಸುತ್ತೇವೆ ಎಂದು ಆಜಾದ್ ಹೇಳಿದರು.

ಉತ್ತರಪ್ರದೇಶ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಯೋಗಿ ಆದಿತ್ಯನಾಥ ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸ್ಪಷ್ಟಪಡಿಸಿಲ್ಲ. ಯೋಗಿ ಆದಿತ್ಯನಾಥ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬದಲು  ಅವರನ್ನು ಬೆಂಬಲಿಸುವಂತೆ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರಂತಹ ದೊಡ್ಡ ನಾಯಕರಲ್ಲಿ ನೀವು ವಿನಂತಿಸುತ್ತೀರಾ ಎಂಬ ಪ್ರಶ್ನೆಗೆ ಎಂದು ಆಜಾದ್ ಉತ್ತರ ಹೀಗಿತ್ತು.”ನಾನು ಬಿಜೆಪಿಯನ್ನು ತಡೆಯಬೇಕು ಮತ್ತು ಅದಕ್ಕಾಗಿ ನಾನು ಅವರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ತಡೆಯಲು ಬಯಸುತ್ತೇನೆ. ಒಂದೋ ಬೆಹೆನ್ಜಿ (ಮಾಯಾವತಿ) ಜತೆ ಹೋರಾಡಬೇಕು ಅಥವಾ ಅವರು ನನಗೆ ಬಿಡಬೇಕು. ನಾನು ಬಲಶಾಲಿ ಮತ್ತು ನಾನು ಯೋಗಿ ಆದಿತ್ಯನಾಥ ಅವರನ್ನು ಎದುರಿಸಬಲ್ಲೆ. ನಾನು ಟಿಕಾವ್, ಬಿಕಾವ್ ಅಲ್ಲ (ನಾನು ಉಳಿಯುತ್ತೇನೆ, ನನ್ನ ಬೆಂಬಲವನ್ನು ಖರೀದಿಸಲಾಗುವುದಿಲ್ಲ) ಎಂದು ಜನರಿಗೆ ಗೊತ್ತಿದೆ ಮತ್ತು ನಾನು ಓಡಿಹೋಗಲಾರೆ,” ಎಂದು ಅವರು ಹೇಳಿದರು.

2019 ರಲ್ಲಿ ಆಜಾದ್ ಅವರು ವಾರಣಾಸಿಯಿಂದ ಪಿಎಂ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದರು, ಆದರೆ ನಂತರ ಹಿಂದೆ ಸರಿದರು. ಅವರ ಸಂಘಟನೆಯು ಸಮಾಜವಾದಿ ಪಕ್ಷ-ಬಿಎಸ್‌ಪಿ ಮೈತ್ರಿಯನ್ನು ಬೆಂಬಲಿಸುತ್ತದೆ ಮತ್ತು ಬಿಜೆಪಿಯನ್ನು ಸೋಲಿಸಲು ದಲಿತ ಮತಗಳು ಹಾಗೇ ಉಳಿಯಬೇಕು ಎಂದು ಅವರು ಹೇಳಿದ್ದರು. ಚಂದ್ರಶೇಖರ್ ಆಜಾದ್ ನೇತೃತ್ವದ ಭೀಮ್ ಆರ್ಮಿ ಮೇ 2017 ರಲ್ಲಿ ದಲಿತರು ಮತ್ತು ಮೇಲ್ವರ್ಗದ ಠಾಕೂರ್‌ಗಳ ನಡುವೆ ಸಹರಾನ್‌ಪುರದಲ್ಲಿ ಘರ್ಷಣೆಯ ಸಮಯದಲ್ಲಿ ಗಮನ ಸೆಳೆಯಿತು.

ಘರ್ಷಣೆಯ ನಂತರ ಚಂದ್ರಶೇಖರ್ ಆಜಾದ್ ಅವರನ್ನು ಬಂಧಿಸಲಾಯಿತು. ಅಲಹಾಬಾದ್ ಹೈಕೋರ್ಟ್ ಅವರಿಗೆ ಜಾಮೀನು ನೀಡಿದ್ದರೂ, ಉತ್ತರ ಪ್ರದೇಶ ಪೊಲೀಸರು ಕಠಿಣ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಿದ್ದಾರೆ. 16 ತಿಂಗಳ ಜೈಲಿನಲ್ಲಿದ್ದ ಬಳಿಕ 2018ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಂಡಿದ್ದರು.

ಇದನ್ನೂ ಓದಿ: ರಫೇಲ್ ಒಪ್ಪಂದ: ಕಿಕ್‌ಬ್ಯಾಕ್‌ಗಳನ್ನು ಸಿಬಿಐ ತನಿಖೆ ಮಾಡದಿರಲು ನಿರ್ಧರಿಸಿದೆ ಎಂದ ಫ್ರೆಂಚ್ ಮಾಧ್ಯಮ ವರದಿ

Published On - 7:54 pm, Mon, 8 November 21