Uttar Pradesh Election 2022: ಪ್ರಿಯಾಂಕಾ ಗಾಂಧಿಯವರ ಆಹ್ವಾನ ಮೇರೆಗೆ ಉತ್ತರ ಪ್ರದೇಶದಲ್ಲಿ ಮಹಿಳಾ ಮ್ಯಾರಥಾನ್
ಎರಡೂ ಮ್ಯಾರಥಾನ್‌ಗಳಲ್ಲಿ ಮೊದಲ ಮೂರು ವಿಜೇತರಿಗೆ ಕಾಂಗ್ರೆಸ್ ಸ್ಕೂಟಿ ಘೋಷಿಸಿದೆ. ನಾಲ್ಕರಿಂದ 25 ನೇ ತಾರೀಖಿನವರೆಗೆ ಬರುವವರಿಗೆ ಸ್ಮಾರ್ಟ್‌ಫೋನ್ ನೀಡಲಾಗುವುದು. ಮುಂದಿನ 100 ಮಂದಿಗೆ ಫಿಟ್ನೆಸ್ ಬ್ಯಾಂಡ್ ನೀಡಲಾಗುವುದು, ಮುಂದಿನ 1,000 ಮಹಿಳೆಯರಿಗೆ ಪದಕಗಳನ್ನು ನೀಡಲಾಗುವುದು ಎಂದು ಪಕ್ಷ ಹೇಳಿದೆ.
ದೆಹಲಿ: ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಮಹಿಳಾ ಕೇಂದ್ರಿತ “ಲಡ್ಕಿ ಹೂ, ಲಡ್ ಸಕ್ತಿ ಹೂ (ನಾನು ಹುಡುಗಿ ಮತ್ತು ಹೋರಾಡಬಲ್ಲೆ) ಅಭಿಯಾನದ ಪ್ರಯುಕ್ತ ಉತ್ತರ ಪ್ರದೇಶದಲ್ಲಿ ಪಕ್ಷವು ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ (marathon) ಸಾವಿರಾರು ಮಹಿಳೆಯರು ಭಾಗವಹಿಸಿದರು. ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಂಗ್ರೆಸ್ ಹಂಚಿಕೊಂಡ ವಿಡಿಯೊಗಳು ಲಖನೌ ಮತ್ತು ಝಾನ್ಸಿಯಲ್ಲಿ ಹೆಚ್ಚಿನ ಜನರು ಭಾಗವಹಿಸಿರುವುದನ್ನು ತೋರಿಸಿವೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್ (Omicron) ಪ್ರಕರಣಗಳಿಂದಾಗಿ ಜಿಲ್ಲಾಡಳಿತ ಮ್ಯಾರಥಾನ್‌ಗೆ ಅನುಮತಿ ನಿರಾಕರಿಸಿದ್ದರೂ ಅದನ್ನು ಧಿಕ್ಕರಿಸಿ ಮಹಿಳೆಯರು ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದರು. ಝಾನ್ಸಿಯಲ್ಲಿ ಮಹಿಳೆಯರು ತಿರುಗಲು ನಿರಾಕರಿಸಿದ್ದು ಪೊಲೀಸರು ಅವರನ್ನು ಮುಂದೆ ಹೋಗಲು ಬಿಡಲಿಲ್ಲ. “ಲ್ಯಾಪ್‌ಟಾಪ್‌ಗಳನ್ನು ವಿತರಿಸುವ ಸರ್ಕಾರಿ ಕಾರ್ಯಕ್ರಮದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕೊವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದಾಗ ರಾಜ್ಯ ಸರ್ಕಾರಕ್ಕೆ ಸಮಸ್ಯೆ ಇರಲಿಲ್ಲ, ನಂತರ ಈಗ ಏಕೆ” ಎಂದು ಕಾಂಗ್ರೆಸ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಮಹಿಳೆಯೊಬ್ಬರು ಹೇಳುತ್ತಿರುವುದು ಕಾಣಿಸುತ್ತಿದೆ. ಎರಡೂ ಮ್ಯಾರಥಾನ್‌ಗಳಲ್ಲಿ ಮೊದಲ ಮೂರು ವಿಜೇತರಿಗೆ ಕಾಂಗ್ರೆಸ್ ಸ್ಕೂಟಿ ಘೋಷಿಸಿದೆ. ನಾಲ್ಕರಿಂದ 25 ನೇ ತಾರೀಖಿನವರೆಗೆ ಬರುವವರಿಗೆ ಸ್ಮಾರ್ಟ್‌ಫೋನ್ ನೀಡಲಾಗುವುದು. ಮುಂದಿನ 100 ಮಂದಿಗೆ ಫಿಟ್ನೆಸ್ ಬ್ಯಾಂಡ್ ನೀಡಲಾಗುವುದು, ಮುಂದಿನ 1,000 ಮಹಿಳೆಯರಿಗೆ ಪದಕಗಳನ್ನು ನೀಡಲಾಗುವುದು ಎಂದು ಪಕ್ಷ ಹೇಳಿದೆ. ಪಕ್ಷವು ಭಾಗವಹಿಸುವವರಿಗೆ ಪ್ರವೇಶ ಶುಲ್ಕವನ್ನು ವಿಧಿಸಿಲ್ಲ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಈ ವರ್ಷ ಪ್ರಚಾರವು ಮಹಿಳಾ ಕೇಂದ್ರಿತ ಪ್ರಯತ್ನಗಳಿಗೆ ಪ್ರಾಮುಖ್ಯತೆಯನ್ನು ನೀಡಿದೆ. ರಾಜ್ಯದಲ್ಲಿ ಕಳೆದ ಕೆಲವು ಚುನಾವಣೆಗಳಲ್ಲಿ ವರ್ಚುವಲ್ ನಾನ್ ಪ್ಲೇಯರ್ ಆಗಿರುವ ಕಾಂಗ್ರೆಸ್, ಕಳೆದ ಕೆಲವು ವರ್ಷಗಳಲ್ಲಿ ಮಹಿಳೆಯರ ವಿರುದ್ಧ ಹೆಚ್ಚಿನ ಅಪರಾಧಗಳು ವರದಿಯಾಗುತ್ತಿರುವ ರಾಜ್ಯದಲ್ಲಿ ಲಿಂಗ ಸಮಾನತೆಯ ಮೇಲೆ ಕೇಂದ್ರೀಕರಿಸಿದೆ. ಹಥಾರಸ್ ನಲ್ಲಿ ದಲಿತ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ, ಮತ್ತು ಉನ್ನಾವೋ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳು ದೇಶದಲ್ಲಿ ಆಕ್ರೋಶವುಂಟುಮಾಡಿದ್ದವು.
..@myogiadityanath जी आप लड़कियों को नियंत्रित करने जैसी महिला विरोधी बात करते हो, इसलिए आपने लखनऊ में लड़कियों की मैराथन नहीं होने दी।
झांसी की लड़कियों ने आपको एक संदेश भेजा है कि लड़कियां सहेंगी नहीं, अपने हक के लिए लड़ेंगी। अगर आप रैली कर सकते हो, तो लड़कियां भी दौड़ेंगी। pic.twitter.com/5bBYT5eyXc
— Priyanka Gandhi Vadra (@priyankagandhi) December 26, 2021
ಈ ಬಗ್ಗೆ ಟ್ವೀಟ್ ಮಾಡಿದ ಪ್ರಿಯಾಂಕಾ ಗಾಂಧಿ ಯೋಗಿ ಆದಿತ್ಯನಾಥ ಜೀ, ನೀವು ಹುಡುಗಿಯರನ್ನು ನಿಯಂತ್ರಿಸುವ ಹಾಗೆ ಮಹಿಳಾ ವಿರೋಧಿ ಮಾತುಗಳನ್ನು ಮಾತನಾಡುತ್ತೀರಿ, ಅದಕ್ಕಾಗಿಯೇ ನೀವು ಲಖನೌನಲ್ಲಿ ಹುಡುಗಿಯರ ಮ್ಯಾರಥಾನ್‌ಗೆ ಅವಕಾಶ ನೀಡಲಿಲ್ಲ. ಹುಡುಗಿಯರು ಸಹಿಸುವುದಿಲ್ಲ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ ಎಂಬ ಸಂದೇಶವನ್ನು ಝಾನ್ಸಿಯ ಹುಡುಗಿಯರು ನಿಮಗೆ ಕಳುಹಿಸಿದ್ದಾರೆ. ನೀವು ರ್ಯಾಲಿ ಮಾಡುತ್ತೀರಿ ಅಂದಾದರೆ ಹುಡುಗಿಯರೂ ಓಡುತ್ತಾರೆ ಎಂದಿದ್ದಾರೆ.
ಬಿಜೆಪಿಯು ರಾಜಕೀಯವಾಗಿ ಹಲವಾರು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ, ಪ್ರಧಾನಿ ನರೇಂದ್ರ ಮೋದಿ ಎರಡು ತಿಂಗಳಲ್ಲಿ 10 ವರ್ಷಕ್ಕಿಂತ ಹೆಚ್ಚು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. 1,000 ಕೋಟಿಗೂ ಹೆಚ್ಚು ಹಣವನ್ನು 16 ಲಕ್ಷಕ್ಕೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಸಮಾಜವಾದಿ ಪಕ್ಷವು ಅಖಿಲೇಶ್ ಯಾದವ್ ಮತ್ತು ಅವರ ತಂದೆ ಮತ್ತು ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಆಳ್ವಿಕೆಯಲ್ಲಿ ಮಹಿಳೆಯರಿಗಾಗಿ ತನ್ನ ಉಪಕ್ರಮಗಳನ್ನು ಹೈಲೈಟ್ ಮಾಡಲು ಪ್ರಯತ್ನಿಸಿದೆ.
“ನೇತಾಜಿ (ಮುಲಾಯಂ ಸಿಂಗ್ ಯಾದವ್) ಮಹಿಳೆಯರಿಗಾಗಿ ಶೌಚಾಲಯಗಳನ್ನು ನಿರ್ಮಿಸಿದರು ಮತ್ತು ಅವರಿಗೆ ಗ್ಯಾಸ್ ಸಿಲಿಂಡರ್ಗಳನ್ನು ನೀಡಿದವರಲ್ಲಿ ಅವರು ಮೊದಲಿಗರು, ಆದರೆ ಅವರ ಫೋಟೋಗಳನ್ನು ಕ್ಲಿಕ್ ಮಾಡಲಿಲ್ಲ. ಆದರೆ ಪ್ರಸ್ತುತ ಸರ್ಕಾರವು ಅದರ ಚಿತ್ರಗಳನ್ನು ಕ್ಲಿಕ್ ಮಾಡುತ್ತದೆ. ಸಮಾಜವಾದಿ ಪಕ್ಷ (ಜನರಿಗಾಗಿ) ಕೆಲಸ ಮಾಡಿದ್ದಾರೆ. ಆದ್ದರಿಂದ ನೀವು ಎಸ್‌ಪಿ ಸರ್ಕಾರ ರಚನೆಗೆ ಸಹಾಯ ಮಾಡಬೇಕು ಎಂದು ಮುಲಾಯಂ ಸಿಂಗ್ ಅವರ ಕಿರಿಯ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ ಅಪರ್ಣಾ ಯಾದವ್ ಹೇಳಿದ್ದಾರೆ.
Published On - 3:41 pm, Sun, 26 December 21