RRB Recruitment 2025: ಭಾರತೀಯ ರೈಲ್ವೆಯಲ್ಲಿ ಈ ವರ್ಷ 50 ಸಾವಿರ ಹುದ್ದೆಗಳಿಗೆ ನೇಮಕಾತಿ!

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2025-26ನೇ ಸಾಲಿನಲ್ಲಿ 50,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ 9000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 2024ರಲ್ಲಿ 1,08,324 ಹುದ್ದೆಗಳಿಗೆ 12 ಅಧಿಸೂಚನೆಗಳನ್ನು ನೀಡಲಾಗಿದೆ. ಅಭ್ಯರ್ಥಿಗಳಿಗೆ ಹತ್ತಿರದ ಪರೀಕ್ಷಾ ಕೇಂದ್ರಗಳನ್ನು ಒದಗಿಸಲಾಗುವುದು ಮತ್ತು ದಿವ್ಯಾಂಗರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದು ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

RRB Recruitment 2025: ಭಾರತೀಯ ರೈಲ್ವೆಯಲ್ಲಿ ಈ ವರ್ಷ 50 ಸಾವಿರ ಹುದ್ದೆಗಳಿಗೆ ನೇಮಕಾತಿ!
ರೈಲ್ವೆ ನೇಮಕಾತಿ

Updated on: Jul 12, 2025 | 1:09 PM

ಭಾರತೀಯ ರೈಲ್ವೆಯಲ್ಲಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಗುಡ್​​ ನ್ಯೂಸ್​​ ಇಲ್ಲಿದೆ. ವಾಸ್ತವವಾಗಿ, ರೈಲ್ವೆ ನೇಮಕಾತಿ ಮಂಡಳಿಯು ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಮಂಡಳಿಯು ಹೊರಡಿಸಿದ ಅಧಿಸೂಚನೆಯ ಪ್ರಕಾರ, RRB 2025-26ನೇ ವರ್ಷದಲ್ಲಿ ಒಟ್ಟು 50,000 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ. ಅಲ್ಲದೆ, ಹಣಕಾಸು ವರ್ಷದ ಆರಂಭದಲ್ಲಿ, ರೈಲ್ವೆ ನೇಮಕಾತಿ ಮಂಡಳಿಯು 9000 ಹುದ್ದೆಗಳಿಗೆ ನೇಮಕಾತಿಗಾಗಿ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ರೈಲ್ವೆಯಲ್ಲಿ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮತ್ತು ಭಾರತೀಯ ರೈಲ್ವೆಯಲ್ಲಿ ಉತ್ತಮ ಹುದ್ದೆಗಳಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

2025-26ನೇ ಹಣಕಾಸು ವರ್ಷದಲ್ಲಿ ಹಲವು ಹುದ್ದೆಗಳ ನೇಮಕಾತಿ:

ರೈಲ್ವೆ ನೇಮಕಾತಿ ಮಂಡಳಿಯು 2025-26ರ ಆರ್ಥಿಕ ವರ್ಷದಲ್ಲಿ ರೈಲ್ವೆಯಲ್ಲಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಒಟ್ಟು 50,000 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ. ಅಲ್ಲದೆ, ಮಂಡಳಿಯು ಹೊರಡಿಸಿದ ಅಧಿಸೂಚನೆಯ ಪ್ರಕಾರ, 2024 ರಿಂದ ಇಲ್ಲಿಯವರೆಗೆ 55197 ಹುದ್ದೆಗಳಿಗೆ ಏಳು ವಿಭಿನ್ನ ಅಧಿಸೂಚನೆಗಳ ಅಡಿಯಲ್ಲಿ 1.86 ಕೋಟಿಗೂ ಹೆಚ್ಚು ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗಿದೆ. ಇದರ ಹೊರತಾಗಿ, RRB ಪ್ರಕಾರ, 2024 ರಲ್ಲಿ 1,08,324 ಹುದ್ದೆಗಳಿಗೆ ಈಗಾಗಲೇ ಒಟ್ಟು ಹನ್ನೆರಡು ಅಧಿಸೂಚನೆಗಳನ್ನು ನೀಡಲಾಗಿದೆ. 2026-27ರ ಹಣಕಾಸು ವರ್ಷದಲ್ಲಿಯೂ ಸಹ, ಒಟ್ಟು 50,000 ಹುದ್ದೆಗಳನ್ನು RRB ನೇಮಕ ಮಾಡಿಕೊಳ್ಳಲಿದೆ.

ಇದನ್ನೂ ಓದಿ: ರೈಲ್ವೆಯಲ್ಲಿ 6000 ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ, ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಪ್ರಾರಂಭ

ಇದನ್ನೂ ಓದಿ
ಜೂನಿಯರ್​ಗಳಿಗೆ ವಾಟ್ಸಾಪ್​​​ನಲ್ಲಿ ಕಿರುಕುಳ ನೀಡಿದ್ರು ಕೂಡ ರ‍್ಯಾಗಿಂಗ್!
ಆಪಲ್‌ನ ಹೊಸ COO ಆಗಿ ಭಾರತ ಮೂಲದ ಸಬಿಹ್ ಖಾನ್ ನೇಮಕ; ಸಂಬಳ ಎಷ್ಟು ಗೊತ್ತಾ?
ಅಮೆರಿಕದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯರಿಗೆ ಗುಡ್​​ ನ್ಯೂಸ್​
ಎಸ್ಎಸ್ಎಲ್​ಸಿಯಲ್ಲಿ 100 ಅಂಕ ಇಳಿಕೆಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ವಿರೋಧ

ಹತ್ತಿರದ ಪರೀಕ್ಷಾ ಕೇಂದ್ರಗಳ ಹಂಚಿಕೆ:

ಆರ್‌ಆರ್‌ಬಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, ವಿವಿಧ ರಾಜ್ಯಗಳ ಅಭ್ಯರ್ಥಿಗಳಿಗೆ ಹತ್ತಿರದ ಪರೀಕ್ಷಾ ಕೇಂದ್ರಗಳನ್ನು ಹಂಚಿಕೆ ಮಾಡಲು ಸಹ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ದಿವ್ಯಾಂಗರು ಮತ್ತು ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗುವುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ