AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLCಯಲ್ಲಿ ಕನ್ನಡ ಭಾಷಾ ಪರೀಕ್ಷೆಯ ಅಂಕ ಕಡಿತಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ವಿರೋಧ: ಸಚಿವ ಮಧು ಬಂಗಾರಪ್ಪಗೆ ಪತ್ರ

ಕರ್ನಾಟಕದಲ್ಲಿ SSLC ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ 125 ಅಂಕಗಳನ್ನು 100ಕ್ಕೆ ಇಳಿಸಲು ಪ್ರಸ್ತಾಪಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಈ ನಿರ್ಧಾರವನ್ನು ಖಂಡಿಸಿದ್ದಾರೆ. ಈ ಕುರಿತಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರ ಬರೆಯುವ ಮೂಲಕ ಅಂಕಗಳನ್ನ 100ಕ್ಕೆ ಇಳಿಕೆ ಮಾಡುವುದು ಬೇಡವೆಂದು ಮನವಿ ಮಾಡಿದ್ದಾರೆ.

SSLCಯಲ್ಲಿ ಕನ್ನಡ ಭಾಷಾ ಪರೀಕ್ಷೆಯ ಅಂಕ ಕಡಿತಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ವಿರೋಧ: ಸಚಿವ ಮಧು ಬಂಗಾರಪ್ಪಗೆ ಪತ್ರ
ಸಾಹಿತಿ ಬರಗೂರು ರಾಮಚಂದ್ರಪ್ಪ, ಸಚಿವ ಮಧು ಬಂಗಾರಪ್ಪ
Vinay Kashappanavar
| Edited By: |

Updated on:Jul 09, 2025 | 1:22 PM

Share

ಬೆಂಗಳೂರು, ಜುಲೈ 09: ಕನ್ನಡ ಸೇರಿದಂತೆ ಎಸ್‌ಎಸ್‌ಎಲ್‌ಸಿ (SSLC) ಪ್ರಥಮ ಭಾಷಾ ಪರೀಕ್ಷೆಯ ಅಂಕವನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ. ಸದ್ಯ ಈ ವಿಚಾರವಾಗಿ ಸಾಕಷ್ಟು ವಿರೋಧ ಕೇಳಿಬರುತ್ತಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರ ಬರೆದಿದ್ದು, ಅಂಕಗಳನ್ನ 100ಕ್ಕೆ ಇಳಿಕೆ ಮಾಡುವುದು ಬೇಡವೆಂದು ಮನವಿ ಮಾಡಿದ್ದಾರೆ.

ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದ ಪತ್ರದಲ್ಲಿ ಏನಿದೆ?

ಕನ್ನಡ ಸೇರಿದಂತೆ ಎಸ್​​ಎಸ್​ಎಲ್​ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕಗಳನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿ ಅಚ್ಚರಿ ಆಯಿತು. ಈ ನಿರ್ಧಾರವು ತೀವ್ರ ಖಂಡನೀಯ.

ಇದನ್ನೂ ಓದಿ: ವಿದ್ಯಾರ್ಥಿ, ಪೋಷಕರು ಗಮನಕ್ಕೆ: SSLC ಪರೀಕ್ಷಾ ನಿಯಮದಲ್ಲಿ ಮಹತ್ವದ ಬದಲಾವಣೆ

ಇದನ್ನೂ ಓದಿ
Image
ವಿದ್ಯಾರ್ಥಿ, ಪೋಷಕರ ಗಮನಕ್ಕೆ: SSLC ಪರೀಕ್ಷಾ ನಿಯಮದಲ್ಲಿ ಮಹತ್ವದ ಬದಲಾವಣೆ
Image
ಸರ್ಕಾರಿ ಪದವಿ ಕಾಲೇಜು ಸಾಧನೆ: ಕ್ಯಾಂಪಸ್ ಸಂದರ್ಶನದಲ್ಲಿ 2000 ಮಂದಿಗೆ ಜಾಬ್
Image
ರಾಯಚೂರು ಕೃಷಿ ವಿವಿ ಘಟಿಕೋತ್ಸವ: ರೈತನ ಮಗನಿಗೆ 6 ಚಿನ್ನದ ಪದಕ
Image
ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್: ವಿದ್ಯಾರ್ಥಿಗಳೇ ಇದನ್ನ ತಿಳಿದುಕಳ್ಳಿ!

ಕನ್ನಡ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗದಿ ಪಡಿಸಿದ ತೀರ್ಮಾನವು ಗೋಕಾಕ್ ಚಳವಳಿಯೆಂದೇ ಪ್ರಸಿದ್ಧವಾದ ಕನ್ನಡಪರ ಆಂದೋಲನದ ಫಲವಾಗಿ ಮೂಡಿ ಬಂದಿತ್ತು. ಕರ್ನಾಟಕ ಸಾಹಿತಿ ಕಲಾವಿದರು, ಹೋರಾಟಗಾರರು ನಡೆಸುತ್ತಿದ್ದ ಈ ಚಳುವಳಿಗೆ ಡಾ. ರಾಜಕುಮಾರ್ ಅವರ ನೇತೃತ್ವ ದೊರೆತು ರಾಜ್ಯಾದ್ಯಂತ ತೀವ್ರವಾಗಿ ವ್ಯಾಪಿಸಿದ ಫಲವಾಗಿ ಅಂದಿನ ಶ್ರೀ ಗುಂಡೂರಾವ್ ನೇತೃತ್ವದ ಸರ್ಕಾರವು ಕನ್ನಡ ಪ್ರಥಮ ಭಾಷೆಯನ್ನು ಒಳಗೊಂಡಂತೆ ಮೂರು ಭಾಷೆಗಳಿಗೂ ತಲಾ 100 ಅಂಕ ನಿಗದಿ ಪಡಿಸುವ ಸೂತ್ರವನ್ನು ರೂಪಿಸಿತ್ತು.

ಇದನ್ನೂ ಓದಿ: ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್: ವಿದ್ಯಾರ್ಥಿಗಳು, ಪೋಷಕರು ಇದನ್ನ ತಿಳಿದುಕೊಳ್ಳಲೇಬೇಕು!

ಈ ಸೂತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿ ದೀರ್ಘ ಚರ್ಚೆ, ಚಿಂತನೆಗಳ ನಂತರ ಕನ್ನಡವೂ ಸೇರಿದಂತೆ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗದಿ ಮಾಡಲಾಯಿತು. ಆಗ ಚಳುವಳಿಯ ಫಲವಾಗಿ ರೂಪುಗೊಂಡ ಈ ಸರ್ವ ಸಮ್ಮತ ನಿರ್ಧಾರವನ್ನು ಈಗ ಬದಲಾಯಿಸಿ 100 ಅಂಕಗಳನ್ನು ನಿಗದಿ ಮಾಡುವುದು ಯಾವ ತರ್ಕ? ಇದರ ಹಿಂದೆ ತರ್ಕವೂ ಇಲ್ಲ. ತತ್ವವೂ ಇಲ್ಲ. ಇದು ಕನ್ನಡವೂ ಸೇರಿದಂತೆ ಮಾತೃಭಾಷೆಗಳ ಮಹತ್ವವನ್ನು ಕುಗ್ಗಿಸುವ ಕೆಲಸ. ಕನ್ನಡ ವಿರೋಧಿ ನಿರ್ಧಾರ. ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 1:20 pm, Wed, 9 July 25

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ