AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ‌ಕಾಲೇಜುಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಪದವಿ ಕಾಲೇಜು: ಕ್ಯಾಂಪಸ್ ಸಂದರ್ಶನದಲ್ಲಿ 2000ಕ್ಕೂ ಅಧಿಕ‌ ವಿದ್ಯಾರ್ಥಿಗಳಿಗೆ ಜಾಬ್

ಸರ್ಕಾರಿ ಕಾಲೇಜುಗಳೆಂದರೆ ಜನರಿಗೆ ಅದೇನೊ ಒಂಥರಾ ತಿರಸ್ಕಾರದ ಮನೋಭಾವ. ಅಲ್ಲಿ ಸರಿಯಾಗಿ ಶಿಕ್ಷಣ ಸಿಗುವುದಿಲ್ಲ. ಅಲ್ಲಿ ಓದಿದರೆ ಮಕ್ಕಳಿಗೆ ಭವಿಷ್ಯವಿಲ್ಲ ಎಂಬವರೇ ಹೆಚ್ಚು. ಆದರೆ ಅದೊಂದು ಸರ್ಕಾರಿ ಪದವಿ ಕಾಲೇಜು ಇಂತಹ ನಂಬಿಕೆಗೆ ವಿರುದ್ಧವಾಗಿದೆ. ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದು, ಐದು ವರ್ಷದಲ್ಲಿ 2000ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ಪಡೆದಿದ್ದಾರೆ.

ಖಾಸಗಿ ‌ಕಾಲೇಜುಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಪದವಿ ಕಾಲೇಜು: ಕ್ಯಾಂಪಸ್ ಸಂದರ್ಶನದಲ್ಲಿ 2000ಕ್ಕೂ ಅಧಿಕ‌ ವಿದ್ಯಾರ್ಥಿಗಳಿಗೆ ಜಾಬ್
ಬಾಗಲಕೋಟೆ ಸರ್ಕಾರಿ ಪದವಿ ಕಾಲೇಜು
ರವಿ ಹೆಚ್ ಮೂಕಿ, ಕಲಘಟಗಿ
| Updated By: Ganapathi Sharma|

Updated on:Jul 05, 2025 | 12:05 PM

Share

ಬಾಗಲಕೋಟೆ, ಜುಲೈ 5: ಒಂದು ಕಡೆ ಕಾಲೇಜಿನಲ್ಲಿ ಕಂಪ್ಯೂಟರ್ ಶಿಕ್ಷಣ. ಇನ್ನೊಂದೆಡೆ ಮನದಲ್ಲಿ ಹತ್ತಾರು ಕನಸು, ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಬಸ್ ಏರುತ್ತಿರುವ ವಿದ್ಯಾರ್ಥಿಗಳು. ಕಾಲೇಜು ಸಿಬ್ಬಂದಿಯಿಂದ ಸಂಭ್ರಮದ ಬೀಳ್ಕೊಡುಗೆ. ಇದೆಲ್ಲ ಕಂಡುಬಂದಿದ್ದು ಬಾಗಲಕೋಟೆ ಸರ್ಕಾರಿ ಪದವಿ (Bagalkote Government Degree College) ಕಾಲೇಜಿನಲ್ಲಿ. ಬಾಗಲಕೋಟೆ ಸರ್ಕಾರಿ ಪದವಿ ಕಾಲೇಜು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುತ್ತಿದೆ. ಯಾವುದೇ ಖಾಸಗಿ ಕಾಲೇಜಿಗೂ ಕಡಿಮೆಯಿಲ್ಲದಂತೆ ಸಾಧನೆ ಮಾಡುತ್ತಿದೆ. ಕಳೆದ ಐದಾರು ವರ್ಷದಿಂದ ಕಾಲೇಜಿನಿಂದ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದ (Campus Iterview) ಮೂಲಕ ಕೆಲಸ ಪಡೆದುಕೊಂಡಿದ್ದಾರೆ. ಇಲ್ಲಿ ಬರಿ ಬೋಧನೆ ಮಾತ್ರವಲ್ಲ ಬದುಕಿಗೆ ದಾರಿ ತೋರಲಾಗುತ್ತಿದೆ. ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆಯಿಲ್ಲದಂತೆ ಕ್ಯಾಂಪಸ್ ಸಂದರ್ಶನ ನಡೆಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಕಲ್ಪಿಸಲಾಗುತ್ತಿದೆ.

ಈ ವರ್ಷ ಬರೊಬ್ಬರಿ 200 ವಿದ್ಯಾರ್ಥಿಗಳು‌ ಕ್ಯಾಂಪಸ್ ಸಂದರ್ಶನದ ಮೂಲಕ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದಾರೆ. ‘ಎಜಾಕಿ’ ಎಂಬ ಎರೊಸ್ಪೇಸ್ ಉತ್ಪನ್ನಗಳ ತಯಾರಿಕೆ ಕಂಪನಿಯಲ್ಲಿ 200 ಜನ ಉದ್ಯೋಗ ಪಡೆದಿದ್ದಾರೆ. ಅದರಲ್ಲಿ ಕಲಾ ವಿಭಾಗದ 80 ಜನ, ವಾಣಿಜ್ಯ ವಿಭಾಗದ 40, ವಿಜ್ಞಾನ ವಿಭಾಗದ 60, ಬಿಸಿಎ ಕಲಿತ 20 ಮಂದಿ ವಿದ್ಯಾರ್ಥಿಗಳಿದ್ದಾರೆ.

Bagalkote Govt College Campus

ಇದನ್ನೂ ಓದಿ
Image
ಹಿಂದೂ ಮುಖಂಡನ ಮೊಬೈಲ್​ನಲ್ಲಿ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಪತ್ತೆ!
Image
ಕ್ಷುಲ್ಲಕ ಕಾರಣಕ್ಕೆ ಕಿರಿಕ್: ಮಾಡೆಲ್ ಮೇಲೆ ಬಸ್ ಸಿಬ್ಬಂದಿ ಹಲ್ಲೆ
Image
Karnataka Rains: ಮಳೆ ಆರ್ಭಟ, ಇಂದು ಕೂಡ ಶಾಲೆಗಳಿಗೆ ರಜೆ
Image
ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲೇ ಕುಸಿದು ಬಿದ್ದ ಪೈಲಟ್!

ಬೆಂಗಳೂರಿನ‌ ‘ಎಜಾಕಿ’ ಕಂಪನಿ ಎರೊಸ್ಪೇಸ್ ಉತ್ಪನ್ನಗಳ ತಯಾರಿಕಾ ಘಟಕವಾಗಿದ್ದು, ಊಟ ವಸತಿ ನೀಡಿ ಪ್ರಾರಂಭಿಕ ಹಂತದಲ್ಲೇ 21 ಸಾವಿರ ವೇತನ ನೀಡಲಾಗುತ್ತಿದೆ. ಉದ್ಯೋಗಕ್ಕೆ ಹೊರಟ ವಿಧ್ಯಾರ್ಥಿಗಳನ್ನು ಕಾಲೇಜು ಸಿಬ್ಬಂದಿ ಸಂಭ್ರಮದಿಂದ ಬೀಳ್ಕೊಟ್ಟಿದ್ದಾರೆ.

ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ, ಬಿಕಾಮ್, ಬಿಎಸ್​​ಸಿ, ಬಿಸಿಎ, ಬಿಬಿಎ ಇದ್ದು ಒಟ್ಟು 3 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಷ್ಟೊಂದು ಮಂದಿ ವಿದ್ಯಾರ್ಥಿಗಳು ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಶಿಕ್ಷಣದ ಜೊತೆಗೆ ಉದ್ಯೋಗ ಕಲ್ಪಿಸುತ್ತಿರುವುದು ಈ ಕಾಲೇಜಿನ ಮತ್ತೊಂದು ಗರಿಮೆಯಾಗಿದೆ.

ಐದಾರು ಕಂಪನಿಗಳ ಜತೆ ಕ್ಯಾಂಪಸ್​ ಸಂದರ್ಶನಕ್ಕೆ ಒಪ್ಪಂದ

ಕಾಲೇಜು ಕ್ವೆಸ್, ಟಾಟಾ, ಮಹಿಂದ್ರಾ, ಎಜಾಕಿ ಸೇರಿದಂತೆ ಐದಾರು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಪ್ರತಿ ವರ್ಷ ಕ್ಯಾಂಪಸ್ ಸಂದರ್ಶನ ನಡೆಸಿ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಕಳುಹಿಸಿಕೊಡಲಾಗುತ್ತಿದೆ.

ಪದವಿ ಪ್ರಥಮ ವರ್ಷದಿಂದಲೇ ಕೌಶಲ ತರಬೇತಿ

Bagalkote Govt College Students

ಪದವಿ ಪ್ರಥಮ ವರ್ಷದಿಂದಲೇ ಉದ್ಯೋಗ ಕೌಶಲ್ಯ ತರಭೇತಿ ನೀಡಿ ಮಾನಸಿಕವಾಗಿ ದೈಹಿಕವಾಗಿ, ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಸಿದ್ದಪಡಿಸಲಾಗುತ್ತಿದೆ. ಇದರಿಂದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆಯಿಲ್ಲದಂತೆ ಉದ್ಯೋಗ ಅರ್ಹತೆ ಪಡೆದು ತಯಾರಾಗುತ್ತಿದ್ದಾರೆ‌.

ಇದನ್ನೂ ಓದಿ: ದೇಶದ ಮೊದಲ ಎಂಜಿನಿಯರಿಂಗ್ ಕಾಲೇಜು ಯಾವುದು ಗೊತ್ತಾ?

ಒಟ್ಟಿನಲ್ಲಿ ಉತ್ತಮ ಆಡಳಿತ‌ ಮಂಡಳಿ ಇದ್ದು, ಯೋಗ್ಯ ಶಿಕ್ಷಣ ನೀಡಿದರೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಕೂಡ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಬಹುದು ಎಂಬುದಕ್ಕೆ ಈ ಕಾಲೇಜು ಸಾಕ್ಷಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:11 am, Sat, 5 July 25