AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನಿಯರ್​​​ಗಳಿಗೆ ವಾಟ್ಸಾಪ್​​ನಲ್ಲಿ ಕಿರುಕುಳ ನೀಡಿದ್ರು ಕೂಡ ಅದು ರ‍್ಯಾಗಿಂಗ್, ಇದು ಯುಜಿಸಿ ಹೊಸ ರೂಲ್ಸ್​​​​

ಯುಜಿಸಿ ರ್ಯಾಗಿಂಗ್ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಅಡಿಯಲ್ಲಿ, ವಾಟ್ಸಾಪ್ ಸಂದೇಶಗಳ ಮೂಲಕವೂ ಜೂನಿಯರ್​ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದನ್ನು ರ್ಯಾಗಿಂಗ್ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ. ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲದೆ, ಯುಜಿಸಿ ಕಾಲೇಜುಗಳ ಮೇಲೂ ಈ ಜವಾಬ್ದಾರಿಯನ್ನು ಹೊರಿಸಿದೆ.

ಜೂನಿಯರ್​​​ಗಳಿಗೆ ವಾಟ್ಸಾಪ್​​ನಲ್ಲಿ ಕಿರುಕುಳ ನೀಡಿದ್ರು ಕೂಡ ಅದು ರ‍್ಯಾಗಿಂಗ್, ಇದು ಯುಜಿಸಿ ಹೊಸ ರೂಲ್ಸ್​​​​
ವಾಟ್ಸಾಪ್ ಮೂಲಕ ಕಿರುಕುಳ
ಅಕ್ಷತಾ ವರ್ಕಾಡಿ
|

Updated on:Jul 10, 2025 | 1:13 PM

Share

ಈ ಹಿಂದೆ, ಕಾಲೇಜು ಕ್ಯಾಂಪಸ್‌ಗಳು ಅಥವಾ ಹಾಸ್ಟೆಲ್‌ಗಳಲ್ಲಿ ರ‍್ಯಾಗಿಂಗ್ ಹೆಚ್ಚಾಗಿ ನಡೆಯುತ್ತಿತ್ತು, ಆದರೆ ಈ ತಂತ್ರಜ್ಞಾನದ ಯುಗದಲ್ಲಿ, ರ‍್ಯಾಗಿಂಗ್ ವಿಧಾನವೂ ಬದಲಾಗಿದೆ. ಹಿರಿಯ ವಿದ್ಯಾರ್ಥಿಗಳು ರಹಸ್ಯವಾಗಿ ವಾಟ್ಸಾಪ್ ಗುಂಪುಗಳನ್ನು ರಚಿಸಿ, ಜೂನಿಯರ್‌ಗಳ ಫೋನ್​​​ ನಂಬರ್​​ ತೆಗೆದುಕೊಂಡು ನಂತರ ಅವರಿಗೆ ಮೆಸೇಜ್​​ ಕಳುಹಿಸುವ ಮೂಲಕ ಕಿರುಕುಳ ನೀಡಲು ಪ್ರಾರಂಭಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವು ಬಾರಿ ಇಂತಹ ಪ್ರಕರಣಗಳ ದೂರುಗಳು ದಾಖಲಾಗಿವೆ. ಇದೀಗ ಇದಕ್ಕೆ ಕಡಿವಾಣ ಹಾಕಲು ವಿಶ್ವವಿದ್ಯಾಲಯ ಅನುದಾನ ಆಯೋಗ(UGC) ಮುಂದಾಗಿದೆ.

ಯುಜಿಸಿ ತನ್ನ ಹೊಸ ಮಾರ್ಗಸೂಚಿಗಳಲ್ಲಿ, ವಾಟ್ಸಾಪ್‌ನಲ್ಲಿ ಜೂನಿಯರ್‌ಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡುವುದನ್ನು, ಅದು ಮಾನಸಿಕವಾಗಿದ್ದರೂ ಸಹ, ರ‍್ಯಾಗಿಂಗ್ ಎಂದು ಪರಿಗಣಿಸಲಾಗುತ್ತದೆ ಮತ್ತು ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಇದರರ್ಥ ಯಾರಾದರೂ ವಾಟ್ಸಾಪ್‌ನಲ್ಲಿ ನಿಮಗೆ ಬೆದರಿಕೆ ಹಾಕಿದರೆ, ಅಸಂಬದ್ಧ ಸಂದೇಶಗಳನ್ನು ಕಳುಹಿಸಿದರೆ ಅಥವಾ ಗುಂಪಿನಲ್ಲಿ ನಿಮಗೆ ಕಿರುಕುಳ ನೀಡಿದರೆ, ನೀವು ಅವರ ಬಗ್ಗೆ ದೂರು ನೀಡಬಹುದು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಶಿಕ್ಷಣ ಸಂಸ್ಥೆ ಯಾವುದು ಗೊತ್ತಾ?

ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲದೆ, ಯುಜಿಸಿ ಕಾಲೇಜುಗಳ ಮೇಲೂ ಜವಾಬ್ದಾರಿಯನ್ನು ಹೊರಿಸಿದೆ. ಯಾವುದೇ ಸಂಸ್ಥೆಯು ರ‍್ಯಾಗಿಂಗ್ ಅನ್ನು ನಿಲ್ಲಿಸಲು ವಿಫಲವಾದರೆ, ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. ರ್ಯಾಗಿಂಗ್​​ ವಿದ್ಯಾರ್ಥಿಗಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿ ಮಾಡುತ್ತದೆ, ಆದ್ದರಿಂದ ಯಾವುದೇ ಭಯವಿಲ್ಲದೇ ದೂರು ನೀಡಬೇಕಾಗಿ ಯುಜಿಸಿ ವಿದ್ಯಾರ್ಥಿಗಳಿಗೆ ಆದೇಶಿಸಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Thu, 10 July 25

ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ