ಹೋಟೆಲ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಪಡೆಯಲು IIHM ಸಂಸ್ಥೆ ಉತ್ತಮ ಆಯ್ಕೆ ಏಕೆ? ಇಲ್ಲಿದೆ ಕಾರಣ
ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಂಜಿನಿಯರ್, ವೈದ್ಯಕೀಯ ಸೇರಿದಂತೆ ಹೀಗೆ ಹತ್ತು ಹಲವು ಕೋರ್ಸ್‌ಗಳು ಲಭ್ಯವಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್‌ಗೆ ಎಲ್ಲಿಲ್ಲದ ಬೇಡಿಕೆಯಿದೆ. ಹೋಟೆಲ್ ಉದ್ಯಮಕ್ಕೆ ಸೇರುವ ಆಸಕ್ತಿಯಿಂದ ಹೋಟೆಲ್ ಮ್ಯಾನೇಜ್ಮೆಂಟ್ ಪದವಿಯನ್ನು ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಆಧುನಿಕ ಆತಿಥ್ಯ ಕ್ಷೇತ್ರವು ವೇಗವಾಗಿ ರೂಪಾಂತರಗೊಳ್ಳುತ್ತಿರುವ ಈ ಯುಗದಲ್ಲಿ, ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಭವಿಷ್ಯಕ್ಕೆ ತಯಾರಾದ ತಲೆಮಾರನ್ನು ರೂಪಿಸುತ್ತಿದ್ದು, ಹೀಗಾಗಿ ಇದೊಂದು ಉತ್ತಮ ಹಾಗೂ ಪ್ರಮುಖ ಸಂಸ್ಥೆಯಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಹೋಟೆಲ್ ಉದ್ಯಮವು ವಿಸ್ತಾರವಾಗಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ಯಾವುದೇ ಪದವಿಯನ್ನು ಪಡೆಯದೇ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು. ಆದರೆ ಇದೀಗ ಹೋಟೆಲ್ ಉದ್ಯಮಕ್ಕೆ ಸೇರಲು ಬಯಸುವ ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲು ಹೋಟೆಲ್ ಮ್ಯಾನೇಜ್ಮೆಂಟ್ ಪದವಿಯನ್ನು ಪಡೆಯುವುದು ಬಹಳ ಮುಖ್ಯ. ಇಂತಿಷ್ಟು ವರ್ಷಗಳ ಪದವಿ ಹಾಗೂ ತರಬೇತಿಯ ಬಳಿಕ ಹೋಟೆಲ್ ಉದ್ಯಮದ ಕಡೆಗೆ ಮುಖ ಮಾಡಬಹುದು. ಹೋಟೆಲ್ ಉದ್ಯಮದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (International Institute of Hotel Management) ಪ್ರಮುಖ ಸಂಸ್ಥೆಯಾಗಿದೆ. IIHM ಸ್ಥಾಪಕ ಹಾಗೂ ಮುಖ್ಯ ಮಾರ್ಗದರ್ಶಕ ಡಾ. ಸುಬೋರ್ನೋ ಬೋಸ್ (IIHM Founder and Chief Mentor Dr. Suborno Bose) ಅವರು ಈ ಸಂಸ್ಥೆಯನ್ನೇ ವಿದ್ಯಾರ್ಥಿಗಳು ಯಾಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಉದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿಗಳ ತಯಾರಿ : ಜಾಗತಿಕ ಶಿಕ್ಷಣದ ಗುಣಮಟ್ಟ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯೂ ವಿಶಿಷ್ಟವಾಗಿಸುತ್ತದೆ. ಇಲ್ಲಿ ಹೋಟೆಲ್ ನಿರ್ವಹಣಾ ತತ್ವಗಳು, HR, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಆತಿಥ್ಯ ತಂತ್ರಜ್ಞಾನಗಳನ್ನು ಪಠ್ಯಕ್ರಮದಲ್ಲಿ ಸೇರಿಸಿ ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗಕ್ಕಾಗಿ ಮಾತ್ರ ಆತ್ಮವಿಶ್ವಾಸದೊಂದಿಗೆ ತಯಾರು ಮಾಡಲಾಗುತ್ತದೆ. ಆಧುನಿಕ ತಂತ್ರಜ್ಞಾನ, ಸುಧಾರಿತವಾದ ಸಾಫ್ಟ್‌ವೇರ್‌ಗಳು, ಮತ್ತು ಪಠ್ಯಕ್ರಮದಲ್ಲಿ ಎಐ ಅಳವಡಿಕೆ, ಪ್ರಾಯೋಗಿಕ ತರಬೇತಿ ಸೇರಿದಂತೆ ಪದವಿ ಮುಗಿಯುವ ವೇಳೆಗೆ ಪರಿಪೂರ್ಣ ಹೋಟೆಲ್ ಉದ್ಯಮವನ್ನು ಮುನ್ನಡೆಸಲು ಎಲ್ಲಾ ರೀತಿಯ ಮಾರ್ಗದರ್ಶನ ನೀಡಲಾಗುತ್ತದೆ.
ಅಂತಾರಾಷ್ಟ್ರೀಯ ಪದವಿ ಕಾರ್ಯಕ್ರಮಗಳು ಲಭ್ಯ : IIHMನಿಂದ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಉನ್ನತ ಕಲಿಕೆಯ ಅವಕಾಶಗಳಿವೆ. ಈ ಕಾರ್ಯಕ್ರಮವು ಫ್ರಾನ್ಸ್, ಮಾಸ್ಕರಿನ್, ಆಸ್ಟ್ರೇಲಿಯಾ ಮುಂತಾದ ದೇಶಗಳೊಂದಿಗೆ ಸಹಯೋಗವನ್ನು ಹೊಂದಿದೆ. ಜಾಗತಿಕ ಅತಿಥಿ ಉಪನ್ಯಾಸಕರು ನಿಯಮಿತವಾಗಿ ಡಿಜಿಟಲ್ ಮಾಧ್ಯಮದ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ.
ವಿಡಿಯೋ ಇಲ್ಲಿದೆ ನೋಡಿ:
ಜನಪ್ರಿಯ ಯಂಗ್ ಚೆಫ್ ಒಲಿಂಪಿಯಾಡ್ ಕಾರ್ಯಕ್ರಮ : ವಿಶ್ವದ ಅತಿದೊಡ್ಡ ಪಾಕಶಾಲೆಯ ಕಾರ್ಯಕ್ರಮವಾದ ಯಂಗ್ ಚೆಫ್ ಒಲಿಂಪಿಯಾಡ್ (YCO)ನ್ನು ಕೂಡ IIIHM ಆಯೋಜಿಸಿದೆ. ಯುವ ಪ್ರತಿಭೆಗಳಿಗಾಗಿ YCO ಅತ್ಯಂತ ಜನಪ್ರಿಯ ಪಾಕಶಾಲೆಯ ಸ್ಪರ್ಧೆಗಳು ತಮ್ಮನ್ನು ತಾವು ತೆರೆದುಕೊಳ್ಳಲು ಸಹಾಯಕವಾಗಿದೆ. YCO ಪ್ರಧಾನ ತೀರ್ಪುಗಾರರು ಮತ್ತು ಮಾರ್ಗದರ್ಶಕರು ಪದ್ಮಶ್ರೀ ಬಾಣಸಿಗ ಸಂಜೀವ್ ಕಪೂರ್ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಫೋಟೋ ಇಲ್ಲಿದೆ ನೋಡಿ:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆಗಳ ಜೊತೆಗೆ ಒಡನಾಟ : IIHM ಶೈಕ್ಷಣಿಕ ಮತ್ತು ಉದ್ಯಮ ವಿನಿಮಯ ಕಾರ್ಯಕ್ರಮಗಳಿಗಾಗಿ ಪ್ರಪಂಚದಲ್ಲಿರುವ 55ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಈ ಸಂಸ್ಥೆಗಳ ಮೂಲಕ ಮಾಸ್ಟರ್‌ಕ್ಲಾಸ್‌ಗಳು, ವಿವಿಧ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಭೇಟಿ ನೀಡುವ ಅವಕಾಶಗಳಿವೆ.
ಜಾಗತಿಕ ಮಟ್ಟದಲ್ಲಿ ಎಐ ಅಳವಡಿಕೆ : 50 ದೇಶಗಳ ಸಹಭಾಗಿತ್ವದಲ್ಲಿ ಗ್ಲೋಬಲ್ ನಾಲೆಜ್ ಶೇರಿಂಗ್ ಡಿಸಿಲಾರೇಷನ್ ಆನ್ ಎಐ ಇನ್ ಹಾಸ್ಪಿಟಲಿಟಿ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಉದ್ಯಮವನ್ನು ಕ್ರಮೇಣವಾಗಿ ಡಿಜಿಟಲ್ ತಂತ್ರಜ್ಞಾನಗಳು ಆವರಿಸಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಸಲುವಾಗಿ ಕೃತಕ ಬುದ್ಧಿಮತ್ತೆಯನ್ನು (AI) ಪರಿಚಯಿಸಿದೆ.
ಇದನ್ನೂ ಓದಿ : Google Parental Controls: ನಿಮ್ಮ ಮಕ್ಕಳು ಆನ್‌ಲೈನ್‌ನಲ್ಲಿ ಏನು ನೋಡುತ್ತಿದ್ದಾರೆ ಎಂದು ಈ ಟ್ರಿಕ್ಸ್ ಮೂಲಕ ತಿಳಿಯಿರಿ
ಪ್ರೇರಣೆಯ ನಾಯಕತ್ವದ ಸಾಧ್ಯತೆ ಹೆಚ್ಚು : IIHM ಶಿಕ್ಷಣವು ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಆಸಕ್ತಿಯಿರುವವರಿಗೆ ಉತ್ತಮ ಆಯ್ಕೆ ವಿದ್ಯಾರ್ಥಿಗಳು ಬಹುಪಾಲು ಕೌಶಲ್ಯಗಳೊಂದಿಗೆ ತಯಾರಾಗಬೇಕು, ಶೆಫ್, ಫ್ರಂಟ್ ಆಫೀಸ್ ಮ್ಯಾನೇಜರ್ ಆಗಿದ್ದರೂ ಕೂಡ ಬ್ಯಾಕ್ಆಫ್ ಆಪರೇಷನ್ ನಲ್ಲಿ ನಿಪುಣತೆ ಹೊಂದಿರುವಂತೆ ಮಾಡುವುದು ಈ ಸಂಸ್ಥೆಯಿಂದ ಮಾತ್ರ ಸಾಧ್ಯ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Fri, 11 July 25