Agniveer Recruitment 2025: ಸೇನಾ ಅಗ್ನಿವೀರ್ ನೇಮಕಾತಿ ಪರೀಕ್ಷೆಯ ಫಲಿತಾಂಶ ಬಿಡುಗಡೆ, ಪರಿಶೀಲಿಸುವುದು ಹೇಗೆ?
ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ 2025 ರ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಫಲಿತಾಂಶ ಪ್ರಕಟವಾಗಿದೆ. joinindianarmy.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಪರಿಶೀಲಿಸಬಹುದು. ಜೂನ್ 30 ರಿಂದ ಜುಲೈ 10 ರವರೆಗೆ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಹಾಜರಾಗಬೇಕು. ಮೆರಿಟ್ ಪಟ್ಟಿಯ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಭಾರತೀಯ ಸೇನೆಯು ಜೂನ್-ಜುಲೈನಲ್ಲಿ ಅಗ್ನಿವೀರ್ ನೇಮಕಾತಿ 2025 ಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ನಡೆಸಿತು ಮತ್ತು ಈಗ ಅದರ ಫಲಿತಾಂಶವೂ ಬಿಡುಗಡೆಯಾಗಿದೆ. ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ joinindianarmy.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
ಸೇನಾ ಅಗ್ನಿವೀರ್ ನೇಮಕಾತಿ ಪರೀಕ್ಷೆಯನ್ನು ಜೂನ್ 30 ರಿಂದ ಜುಲೈ 10 ರವರೆಗೆ ನಡೆಸಲಾಯಿತು. ಇದನ್ನು ಇಂಗ್ಲಿಷ್, ಹಿಂದಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಪಂಜಾಬಿ, ಒಡಿಯಾ, ಬಂಗಾಳಿ, ಉರ್ದು, ಗುಜರಾತಿ, ಮರಾಠಿ ಮತ್ತು ಅಸ್ಸಾಮಿ ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾಯಿತು. ಪರೀಕ್ಷೆಯು ವಸ್ತುನಿಷ್ಠ ಪ್ರಕಾರದ್ದಾಗಿದ್ದು, ಇದರಲ್ಲಿ ಬಹು ಆಯ್ಕೆಯ ಪ್ರಶ್ನೆಗಳನ್ನು (MCQ ಗಳು) ಕೇಳಲಾಗಿತ್ತು.
ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು?
- ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿಯ ಅಧಿಕೃತ ವೆಬ್‌ಸೈಟ್ joinindianarmy.nic.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಲಭ್ಯವಿರುವ ‘ಇಂಡಿಯನ್ ಆರ್ಮಿ ಅಗ್ನಿವೀರ್ ಸಿಇಇ ರಿಸ್ಟಲ್ 2025’ ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ. ಫಲಿತಾಂಶದ ಪುಟ ತೆರೆದುಕೊಳ್ಳುತ್ತದೆ.
- ಫಲಿತಾಂಶವನ್ನು ಪರಿಶೀಲಿಸಿದ ನಂತರ, PDF ಫೈಲ್ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸ್ಟಾಫ್, ಲೋಡರ್ ಹುದ್ದೆಗೆ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಸಾಕು
ಪರೀಕ್ಷೆಯ ನಂತರದ ಪ್ರಕ್ರಿಯೆ:
ಈಗ ಈ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದೆ ದೈಹಿಕ ಸದೃಢತಾ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಭಾಗಿಯಾಗಬೇಕು. ಮೊದಲು ದೈಹಿಕ ಸದೃಢತಾ ಪರೀಕ್ಷೆ ಇರುತ್ತದೆ, ಇದರಲ್ಲಿ 1.6 ಕಿ.ಮೀ ಓಟ, ಬೀಮ್ (ಪುಲ್-ಅಪ್‌ಗಳು), 9 ಅಡಿ ಉದ್ದ ಜಿಗಿತ ಮತ್ತು ಜಿಗ್-ಜಾಗ್ ಬ್ಯಾಲೆನ್ಸ್ ಸೇರಿವೆ. ಪುರುಷರಿಗೆ ಓಟಕ್ಕೆ 5 ನಿಮಿಷ 30 ಸೆಕೆಂಡುಗಳು ಮತ್ತು ಮಹಿಳೆಯರಿಗೆ 7 ನಿಮಿಷ 30 ಸೆಕೆಂಡುಗಳು ನೀಡಲಾಗುತ್ತದೆ. ಮುಂದಿನ ಸುತ್ತಿಗೆ ಹೋಗಲು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅವಶ್ಯಕ. ನಂತರ ಕೊನೆಯ ಸುತ್ತಿನಲ್ಲಿ, ಉತ್ತೀರ್ಣರಾದ ಎಲ್ಲಾ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಇರುತ್ತದೆ ಮತ್ತು ಅವರು ಇದರಲ್ಲಿಯೂ ಉತ್ತೀರ್ಣರಾದರೆ, ಭಾರತೀಯ ಸೇನೆಯು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುತ್ತದೆ, ಅದರ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




