BOM Recruitment 2022: ಬ್ಯಾಂಕ್ನಲ್ಲಿ ಉದ್ಯೋಗಾವಕಾಶ: ಡಿಗ್ರಿ ಮಾಡಿದವರು ಅರ್ಜಿ ಸಲ್ಲಿಸಿ
Bank of Maharashtra Recruitment 2022: ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿಯ ಆಯ್ಕೆ ಪ್ರಕ್ರಿಯೆಯನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ (BOM) 500 ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿಯ ನೋಂದಣಿ ಪ್ರಕ್ರಿಯೆಯು ಫೆಬ್ರವರಿ 5 ರಿಂದ ಶುರುವಾಗಿದ್ದು, ಆಸಕ್ತ ಅರ್ಜಿದಾರರು bankofmaharashtra.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತಾ ಮಾನದಂಡಗಳು, ಪ್ರಮುಖ ದಿನಾಂಕಗಳು, ಸಂಬಳ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಪರಿಶೀಲಿಸೋಣ.
ಹುದ್ದೆಗಳ ವಿವರ: ಒಟ್ಟು ಹುದ್ದೆಗಳ ಸಂಖ್ಯೆ- 500 ಹುದ್ದೆಗಳು ಸಾಮಾನ್ಯ ಅಧಿಕಾರಿ ಸ್ಕೇಲ್ 2 : 400 500 ಹುದ್ದೆಗಳು (UR: 162, SC: 60, ST: 30, OBC: 108, EWS: 40) ಸಾಮಾನ್ಯ ಅಧಿಕಾರಿ ಸ್ಕೇಲ್ 3 : 100 500 ಹುದ್ದೆಗಳು (UR: 41, SC: 15, ST: 7, OBC: 27, EWS: 10)
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಎಲ್ಲಾ ಸೆಮಿಸ್ಟರ್/ವರ್ಷಗಳ ಒಟ್ಟು (SC/ST/OBC/PwBD ಗಾಗಿ 55%) ಅಥವಾ CA/CMA/CFA ಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ: ಜನರಲಿಸ್ಟ್ ಆಫೀಸರ್ ಸ್ಕೇಲ್ 2 ಹುದ್ದೆಗಳಿಗೆ 25 ರಿಂದ 35 ವರ್ಷಗಳೊಳಗಿನವರು ಅರ್ಜಿ ಸಲ್ಲಿಸಬಹುದು. ಜನರಲಿಸ್ಟ್ ಆಫೀಸರ್ ಸ್ಕೇಲ್ 3 ಹುದ್ದೆಗಳಿಗೆ 25 ರಿಂದ 38 ವರ್ಷಗಳೊಳಗಿನವರು ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ: ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿಯ ಆಯ್ಕೆ ಪ್ರಕ್ರಿಯೆಯನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ.
ವೇತನ: ಸಾಮಾನ್ಯ ಅಧಿಕಾರಿ ಸ್ಕೇಲ್ 2: 48,170 ರೂ. ರಿಂದ 69810 ರೂ. ವೇತನ ಸಿಗಲಿದೆ. ಸಾಮಾನ್ಯ ಅಧಿಕಾರಿ ಸ್ಕೇಲ್ 3: 63840 ರೂ. ರಿಂದ 78230 ರೂ. ವೇತನ ಸಿಗಲಿದೆ.
ಅರ್ಜಿ ಶುಲ್ಕ:
UR / EWS / OBC ಅಭ್ಯರ್ಥಿಗಳಿಗೆ: 1180 ರೂ. SC / ST 100 ಅಭ್ಯರ್ಥಿಗಳಿಗೆ: 118 ರೂ.
ಪ್ರಮುಖ ದಿನಾಂಕಗಳು: ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 5 ಫೆಬ್ರವರಿ 2022 ಆನ್‌ಲೈನ್ ಸಲ್ಲಿಕೆಗೆ ಕೊನೆಯ ದಿನಾಂಕ: 22 ಫೆಬ್ರವರಿ 2022 ಪರೀಕ್ಷೆಯ ದಿನಾಂಕ: 12 ಮಾರ್ಚ್ 2022
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Yuzvendra Chahal: ವಿಕೆಟ್ಗಳ ಶತಕ ಪೂರೈಸಿದ ಚಹಾಲ್
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!
(Bank of Maharashtra Recruitment 2022)