BRBNMPL Recruitment 2024: ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

|

Updated on: Aug 26, 2024 | 10:00 AM

Bharatiya Reserve Bank Note Mudran Recruitment 2024: ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಸಂಸ್ಥೆಯಲ್ಲಿ ಮೂರು ಸಹಾಯಕ ವ್ಯವಸ್ಥಾಪಕರು (ಭದ್ರತೆ), ಭದ್ರತಾ ವ್ಯವಸ್ಥಾಪಕ ಒಂದು ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿ ಸೂಚಿಸಲಾಗಿದೆ.

BRBNMPL Recruitment 2024:  ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ
ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ನೇಮಕಾತಿ
Follow us on

Bharatiya Reserve Bank Note Mudran Recruitment 2024: ಭಾರತೀಯ ರಿಸರ್ವ್ ಬ್ಯಾಂಕ್ ನ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್‌ ನ ಮೈಸೂರಿನ ನೋಟು ಮುದ್ರಣ ಘಟಕದಲ್ಲಿ (ಬಿಆರ್​​ಬಿಎನ್​​ಎಂಪಿಎಲ್ – Bharatiya Reserve Bank Note Mudran Private Limited – BRBNMPL)​  ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ವ್ಯವಸ್ಥಾಪಕರು, ಭದ್ರತಾ ವ್ಯವಸ್ಥಾಪಕ ಹುದ್ದೆಗಳಿಗಾಗಿ ಆಸಕ್ತ/ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಬೇಕಾದ ವಯೋಮಿತಿ, ಅರ್ಜಿ ಶುಲ್ಕ, ವಿದ್ಯಾರ್ಹತೆ, ವೇತನ ಶ್ರೇಣಿ, ಹುದ್ದೆಗಳ ವಿವರ ಸೇರಿದಂತೆ ವಿವರವಾದ ಮಾಹಿತಿ/ ವೆಬ್​​ಸೈಟ್​​ ಲಿಂಕ್​ ನಲ್ಲಿ ನೀಡಲಾಗಿದೆ.

ಒಟ್ಟು ಹುದ್ದೆಗಳು- 4
ಸಹಾಯಕ ವ್ಯವಸ್ಥಾಪಕರು- (ಭದ್ರತೆ) 3
ಭದ್ರತಾ ವ್ಯವಸ್ಥಾಪಕ- 1

ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಆದ್ಯತೆ ಇರುತ್ತದೆ.
ವಯೋಮಿತಿ: 45 ರಿಂದ 52 ವರ್ಷಗಳು.

ಸಂಬಳ: ಸಹಾಯಕ ವ್ಯವಸ್ಥಾಪಕರು (ಭದ್ರತೆ) 56,100 ರೂ.
ಭದ್ರತಾ ವ್ಯವಸ್ಥಾಪಕರು: 69,700 ರೂ.

ಅರ್ಜಿಗಳನ್ನು ಆಫ್​​ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ: SC, ST, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಇತರೆ ಅಭ್ಯರ್ಥಿಗಳಿಗೆ 300 ರೂ. ಇದ್ದು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಬ್ಯಾಂಕ್ ಪೇ ಆರ್ಡರ್ ಮೂಲಕ ಹಣ ಪಾವತಿಸಬೇಕಾಗಿದೆ. ಇಲಾಖೆ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್​ಲೋಡ್ ಮಾಡಿ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಕಳುಹಿಸಿ ಕೊಡಬೇಕಾದ ವಿಳಾಸ:

ಚೀಫ್ ಜನರಲ್ ಮ್ಯಾನೇಜರ್, ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ ಪ್ರೈವೇಟ್ ಲಿಮಿಟೆಡ್ ನಂ. 3 ಮತ್ತು 4, I ಹಂತ, I ಹಂತ, B.T.M. ಲೇಔಟ್, ಬನ್ನೇರುಘಟ್ಟ ರಸ್ತೆ, ಅಂಚೆ ಪೆಟ್ಟಿಗೆ ಸಂಖ್ಯೆ 2924, ಡಿ.ಆರ್. ಕಾಲೇಜು ಪೋಸ್ಟ್​ ಬಾಕ್ಸ್ ನಂ. 2924, ಬೆಂಗಳೂರು – 560 029

ಅರ್ಜಿಗಳನ್ನು ಸೆಪ್ಟೆಂಬರ್ 06 ರೊಳಗೆ  ಈ ವಿಳಾಸಕ್ಕೆ ಕಳುಹಿಸಬೇಕು. ಕೆಲವು ಪ್ರದೇಶಗಳಿಗೆ ಸೆಪ್ಟೆಂಬರ್ 13ರವರೆಗೆ ವಿಸ್ತರಿಸಲಾಗಿದೆ.