BHEL Recruitment 2022: BHELನಲ್ಲಿ ಉದ್ಯೋಗಾವಕಾಶ: ಐಟಿಐ, ಡಿಪ್ಲೋಮಾ ಮಾಡಿದವರು ಅರ್ಜಿ ಸಲ್ಲಿಸಿ
BHEL Recruitment 2022: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 18 ವರ್ಷಗಳಿಗಿಂತ ಕಡಿಮೆಯಿರಬಾರದು ಮತ್ತು 27 ವರ್ಷಗಳಿಗಿಂತ ಹೆಚ್ಚಿರಬಾರದು.
BHEL Recruitment 2022: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ವಿವಿಧ ಟ್ರೇಡ್‌ಗಳಿಗೆ ತಂತ್ರಜ್ಞ / ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು Jhs.bhel.com ನಲ್ಲಿ BHEL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
BHEL Recruitment 2022 ಹುದ್ದೆಗಳ ವಿವರಗಳು: ತಂತ್ರಜ್ಞ/ಪದವೀಧರ ಅಪ್ರೆಂಟಿಸ್-15 ಹುದ್ದೆಗಳು ಎಲೆಕ್ಟ್ರಿಕಲ್-03 ಹುದ್ದೆಗಳು ಮೆಕ್ಯಾನಿಕಲ್-04 ಹುದ್ದೆಗಳು ಎಲೆಕ್ಟ್ರಾನಿಕ್ಸ್-03 ಹುದ್ದೆಗಳು ಇನ್ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್-01 ಹುದ್ದೆ ಸಿವಿಲ್-01 ಹುದ್ದೆ ಕಂಪ್ಯೂಟರ್ ಅಪ್ಲಿಕೇಶನ್-02 ಹುದ್ದೆಗಳು ಕಚೇರಿ ನಿರ್ವಹಣೆ ಮತ್ತು ಕಾರ್ಯದರ್ಶಿ-01 ಹುದ್ದೆ
BHEL Recruitment 2022 ಗಾಗಿ ಅರ್ಹತಾ ಮಾನದಂಡಗಳು: ಗ್ರಾಜುಯೇಟ್ ಅಪ್ರೆಂಟಿಸ್, ಟ್ರೇಡ್ ಅಪ್ರೆಂಟಿಸ್, ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಡಿಪ್ಲೋಮಾ/ ಐಟಿಐ/ ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕಾಗುತ್ತದೆ.
BHEL Recruitment 2022 ಗಾಗಿ ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 18 ವರ್ಷಗಳಿಗಿಂತ ಕಡಿಮೆಯಿರಬಾರದು ಮತ್ತು 27 ವರ್ಷಗಳಿಗಿಂತ ಹೆಚ್ಚಿರಬಾರದು.
BHEL Recruitment 2022 ಗಾಗಿ ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಮಾರ್ಚ್ 2022
BHEL Recruitment 2022 ಅರ್ಜಿ ಸಲ್ಲಿಸುವುದು ಹೇಗೆ? ಅಭ್ಯರ್ಥಿಗಳು ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಇನ್ನಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(BHEL Recruitment 2022 for Technician/ Graduate Apprentice Posts)