Central Bank of India Recruitment 2023: ಬ್ಯಾಂಕ್ ನೇಮಕಾತಿ: ಪದವೀಧರರಿಗೆ ಅವಕಾಶ
Central Bank of India Recruitment 2023: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, 21 ರಿಂದ 45 ವರ್ಷಗಳವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
Central Bank of India Recruitment 2023: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ (Central Bank of India) ಖಾಲಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಬಿಸಿನೆಸ್ ಕರೆಸ್ಪಾಂಡೆಂಟ್ ಮೇಲ್ವಿಚಾರಕರ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಬ್ಯಾಂಕ್ ಹೆಸರು : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
- ಹುದ್ದೆಗಳ ಸಂಖ್ಯೆ: 1
- ಉದ್ಯೋಗ ಸ್ಥಳ: ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಬೆಂಗಳೂರು
- ಹುದ್ದೆಯ ಹೆಸರು: ಬಿಸಿನೆಸ್ ಕರೆಸ್ಪಾಂಡೆಂಟ್ ಸೂಪರ್ವೈಸರ್ಸ್
ಶೈಕ್ಷಣಿಕ ಅರ್ಹತೆ:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ , BE, M.Sc, MCA, MBA ಪೂರ್ಣಗೊಳಿಸಿರಬೇಕು.
ವಯೋಮಿತಿ:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, 21 ರಿಂದ 45 ವರ್ಷಗಳವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ರೂ.12000 ರಿಂದ ರೂ. 15000 ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-ಜುಲೈ-2023
ಇದನ್ನೂ ಓದಿ: IREL Recruitment 2023: ಐಆರ್ಇಎಲ್ ನೇಮಕಾತಿ: ಆರಂಭಿಕ ವೇತನ 40 ಸಾವಿರ ರೂ.
ಅರ್ಜಿ ಕಳುಹಿಸಬೇಕಾದ ವಿಳಾಸ:
Central Bank of India, Regional Office Bangalore, 2nd Floor, Grand Majestic Mall Gandhinagar, Bengaluru – 560009.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್ಸೈಟ್: centralbankofindia.co.in