CIL recruitment 2022: ಕೋಲ್ ಇಂಡಿಯಾದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
CIL recruitment 2022: ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಕೋಲ್ ಇಂಡಿಯಾ ಲಿಮಿಡೆಟ್ನ ಅಧಿಕೃತ ವೆಬ್‌ಸೈಟ್ www.coalindia.in ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.
CIL recruitment 2022: ಕೋಲ್ ಇಂಡಿಯಾ ಲಿಮಿಟೆಡ್ 41 ಮೆಡಿಕಲ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಈ ನೇಮಕಾತಿಗೆ ಅರ್ಜಿ ಪ್ರಕ್ರಿಯೆಯು ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 29 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಕೋಲ್ ಇಂಡಿಯಾ ಲಿಮಿಡೆಟ್ನ ಅಧಿಕೃತ ವೆಬ್‌ಸೈಟ್ www.coalindia.in ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಈ ನೇಮಕಾತಿ ಕುರಿತಾದ ಕೆಲ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್ (E4) / ಮೆಡಿಕಲ್ ಸ್ಪೆಷಲಿಸ್ಟ್ (E3)- – 28 ಹುದ್ದೆಗಳು
- ಹಿರಿಯ ವೈದ್ಯಕೀಯ ಅಧಿಕಾರಿ- 13 ಹುದ್ದೆಗಳು
- ಒಟ್ಟು ಹುದ್ದೆಗಳ ಸಂಖ್ಯೆ- 41
ವಯೋಮಿತಿ: ಹಿರಿಯ ವೈದ್ಯಕೀಯ ತಜ್ಞ (E4) ಹುದ್ದೆಗಳಿಗೆ 42 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹಾಗೆಯೇ ಹಿರಿಯ ವೈದ್ಯಕೀಯ ಅಧಿಕಾರಿ ಮತ್ತು ವೈದ್ಯಕೀಯ ತಜ್ಞ ಹುದ್ದೆಗಳಿಗೆ 35 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 29, 2022
ಅರ್ಜಿ ಸಲ್ಲಿಸುವುದು ಹೇಗೆ: ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಅರ್ಜಿಯನ್ನು ಸಂಪೂರ್ಣ ಭರ್ತಿ ಮಾಡಿ, ನಿಮ್ಮ ಪ್ರಮಾಣ ಪತ್ರಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.
ಅರ್ಜಿ ಕಳುಹಿಸಬೇಕಾದ ವಿಳಾಸ: General Manager (Personnel/EE), Bharat Coking Coal Limited at Executive Establishment, Koyla Bhawan, Post: Koyla Nagar, BCCL Township, Dist Dhanbad, Jharkhand- 826005.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.