CISF Recruitment 2023: ಕೈಗಾರಿಕಾ ಭದ್ರತಾ ಪಡೆ ನೇಮಕಾತಿ: SSLC ಪಾಸಾದವರು ಅರ್ಜಿ ಸಲ್ಲಿಸಿ

CISF Recruitment 2023: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CISF ಅಧಿಕೃತ ವೆಬ್​ಸೈಟ್​ cisfrectt.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು.

CISF Recruitment 2023: ಕೈಗಾರಿಕಾ ಭದ್ರತಾ ಪಡೆ ನೇಮಕಾತಿ: SSLC ಪಾಸಾದವರು ಅರ್ಜಿ ಸಲ್ಲಿಸಿ
CISF Recruitment 2023
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 20, 2023 | 2:19 PM

CISF Recruitment 2023: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಕಾನ್ಸ್‌ಟೇಬಲ್/ಡ್ರೈವರ್ ಮತ್ತು ಕಾನ್ಸ್‌ಟೇಬಲ್/ಡ್ರೈವರ್ ಕಮ್ ಪಂಪ್ ಆಪರೇಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CISF ಅಧಿಕೃತ ವೆಬ್​ಸೈಟ್​ cisfrectt.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಕಾನ್ಸ್‌ಟೇಬಲ್/ಡ್ರೈವರ್- 183 ಹುದ್ದೆಗಳು
  • ಕಾನ್ಸ್‌ಟೇಬಲ್/ಡ್ರೈವರ್-ಕಮ್-ಪಂಪ್-ಆಪರೇಟರ್- 268 ಹುದ್ದೆಗಳು
  • ಒಟ್ಟು ಹುದ್ದೆಗಳ – 451

ಅರ್ಹತಾ ಮಾನದಂಡಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ ಭಾರೀ ಮೋಟಾರು ವಾಹನ ಅಥವಾ ಸಾರಿಗೆ ವಾಹನ ಅಥವಾ ಲಘು ಮೋಟಾರು ವಾಹನ ಮತ್ತು ಮೋಟಾರ್ ಸೈಕಲ್ ಚಾಲನೆಯಲ್ಲಿ 3 ವರ್ಷಗಳ ಅನುಭವವನ್ನು ಹೊಂದಿರಬೇಕಾಗುತ್ತದೆ.

ವಯೋಮಿತಿ:

ಈ ಹುದ್ದೆಗಳಿಗೆ 21 ವರ್ಷದಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಮಾಸಿಕ ವೇತನ:

ಈ ನೇಮಕಾತಿಯ ಅಡಿಯಲ್ಲಿ ಆಯ್ಕೆಯಾದ ಮಾಸಿಕ ವೇತನವಾಗಿ 21,700 ರಿಂದ 69,100/- ವರೆಗೆ ಸಂಬಳ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 22, 2023

ಇದನ್ನೂ ಓದಿ: HMT Recruitment 2023: HMT ನೇಮಕಾತಿ: ಬೆಂಗಳೂರಿನಲ್ಲಿದೆ ಉದ್ಯೋಗಾವಕಾಶ

ಆಯ್ಕೆ ಪ್ರಕ್ರಿಯೆ:

  • ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ (PST)
  • ದೈಹಿಕ ದಕ್ಷತೆ ಪರೀಕ್ಷೆ (PET)
  • ಡಾಕ್ಯುಮೆಂಟೇಶನ್ ಟ್ರೇಡ್ ಟೆಸ್ಟ್
  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಮೆಡಿಕಲ್ ಟೆಸ್ಟ್​ ಮೂಲಕ ಅರ್ಜಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.