CSL Recruitment 2022: 8ನೇ ಕ್ಲಾಸ್ ಪಾಸಾದವರಿಗೆ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ಉದ್ಯೋಗಾವಕಾಶ
Cochin Shipyard Ltd Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊಚ್ಚಿನ್ ಶಿಪ್ಯಾರ್ಡ್ನ ಅಧಿಕೃತ ವೆಬ್‌ಸೈಟ್ cochinshipyard.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
Cochin Shipyard Recruitment 2022: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL)ನಲ್ಲಿ 8ನೇ ಮತ್ತು 12ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶವಿದೆ. ವಿವಿಧ ಹುದ್ದೆಗಳ ನೇಮಕಾತಿ ಪ್ರಕಟಣೆಯನ್ನು ಕೊಚ್ಚಿನ್ ಶಿಪ್‌ಯಾರ್ಡ್ ಪ್ರಕಟಿಸಿದ್ದು, ಈ ಮೂಲಕ ಸೆಮಿ ಸ್ಕಿಲ್ಡ್ ರಿಗ್ಗರ್, ಸ್ಕ್ಯಾಫೋಲ್ಡರ್, ಸೇಫ್ಟಿ ಅಸಿಸ್ಟೆಂಟ್, ಫೈರ್‌ಮ್ಯಾನ್ ಮತ್ತು ಕುಕ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊಚ್ಚಿನ್ ಶಿಪ್ಯಾರ್ಡ್ನ ಅಧಿಕೃತ ವೆಬ್‌ಸೈಟ್ cochinshipyard.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಯ ವಿವರಗಳು:
- ಸೆಮಿ ಸ್ಕಿಲ್ಡ್ ರಿಗ್ಗರ್ – 53 ಹುದ್ದೆಗಳು
- ಸ್ಕ್ಯಾಫೋಲ್ಡರ್ – 5 ಹುದ್ದೆಗಳು
- ಸುರಕ್ಷತಾ ಸಹಾಯಕ ಸಿಬ್ಬಂದಿ – 18 ಹುದ್ದೆಗಳು
- ಅಗ್ನಿಶಾಮಕ ಸಿಬ್ಬಂದಿ – 29 ಹುದ್ದೆಗಳು
- ಕುಕ್ – 1 ಹುದ್ದೆ
- ಒಟ್ಟು ಹುದ್ದೆಗಳ ಸಂಖ್ಯೆ – 106
ಶೈಕ್ಷಣಿಕ ಅರ್ಹತೆ:
- ಸೆಮಿ ಸ್ಕಿಲ್ಡ್ ರಿಗ್ಗರ್ – ಈ ಹುದ್ದೆಗಳಿಗೆ 8ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅಲ್ಲದೆ ಅರ್ಜಿದಾರನು ಕನಿಷ್ಠ ಮೂರು ವರ್ಷಗಳ ರಿಗ್ಗಿಂಗ್ ಅನುಭವ ಹೊಂದಿರಬೇಕು. ಈ ಪೈಕಿ ಹೆವಿ ಡ್ಯೂಟಿ ಯಂತ್ರದ ಬಿಡಿಭಾಗಗಳ ರಿಗ್ಗಿಂಗ್‌ನಲ್ಲಿ ಎರಡು ವರ್ಷಗಳ ಅನುಭವ ಇರಬೇಕು.
- ಸ್ಕ್ಯಾಫೋಲ್ಡರ್ – ಈ ಹುದ್ದೆಗಳಿಗೆ 12 ತರಗತಿ ಪಾಸಾದ, ಶೀಟ್ ಮೆಟಲ್ ವರ್ಕರ್ / ಪ್ಲಂಬರ್‌ನಲ್ಲಿ ITI ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಹಾಗೆಯೇ ಸ್ಕ್ಯಾಫೋಲ್ಡಿಂಗ್ / ರಿಗ್ಗಿಂಗ್‌ನಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು.
- ಸುರಕ್ಷತಾ ಸಹಾಯಕ – 12ನೇ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ಒಂದು ವರ್ಷದ ಡಿಪ್ಲೊಮಾ ಇನ್ ಸೇಫ್ಟಿ/ಫೈರ್ ಪ್ರಮಾಣ ಪತ್ರ ಹೊಂದಿರಬೇಕು. ಹಾಗೆಯೇ ಕನಿಷ್ಠ ಒಂದು ವರ್ಷದ ಅನುಭವ ಕೂಡ ಅಗತ್ಯವಿದೆ.
- ಅಗ್ನಿಶಾಮಕ ಸಿಬ್ಬಂದಿ-12ನೇ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ನಾಲ್ಕರಿಂದ ಆರು ತಿಂಗಳ ಕಾಲ ಅಗ್ನಿಶಾಮಕ ತರಬೇತಿಯನ್ನು ರಾಜ್ಯ ಅಗ್ನಿಶಾಮಕ ಪಡೆ ಅಥವಾ ಯಾವುದೇ ಸಾರ್ವಜನಿಕ ವಲಯದ ಉದ್ಯಮದಲ್ಲಿ ಅಥವಾ ಯಾವುದೇ ಸರ್ಕಾರಿ ಕೋರ್ಸ್ ಮೂಲಕ ಪಡೆದಿರಬೇಕು. ಅಥವಾ ನ್ಯೂಕ್ಲಿಯರ್ ಬಯೋಲಾಜಿಕಲ್ ಕೆಮಿಕಲ್ ಡಿಫೆನ್ಸ್ ಮತ್ತು ಡ್ಯಾಮೇಜ್ ಕಂಟ್ರೋಲ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡಿರಬೇಕು.
- ಕುಕ್ – 8ನೇ ಪಾಸಾದ, ಐದು ವರ್ಷಗಳ ಅಡುಗೆ ಅನುಭವವನ್ನು ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ: 30 ವರ್ಷಗಳವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ ಮೀಸಲಾತಿ ವಿಭಾಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದ್ದು, ಅಧಿಸೂಚನೆಯಲ್ಲಿ ಪರಿಶೀಲಿಸಬಹುದು. ಇನ್ನು ಕುಕ್ ಹುದ್ದೆಗಳಿಗೆ 53 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿ ಎಂದು ತಿಳಿಸಲಾಗಿದೆ.
ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-ಜುಲೈ 24, 2022.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 4:41 pm, Thu, 30 June 22