CPRI Recruitment 2023: ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
CPRI Recruitment 2023: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಅಧಿಕೃತ ವೆಬ್ಸೈಟ್ cpri.res.in ಗೆ ಭೇಟಿ ನೀಡುವ ಮೂಲಕ ಅರ್ಜಿ ಹಾಕಬಹುದಾಗಿದೆ.
CPRI Recruitment 2023: ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಹೊಸ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಇಂಜಿನಿಯರಿಂಗ್ ಆಫೀಸರ್, ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 14 ರೊಳಗೆ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಅಧಿಕೃತ ವೆಬ್ಸೈಟ್ cpri.res.in ಗೆ ಭೇಟಿ ನೀಡುವ ಮೂಲಕ ಅರ್ಜಿ ಹಾಕಬಹುದಾಗಿದೆ. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಆಯ್ಕೆಯಾದರೆ ಸಿಗುವ ವೇತನ ಎಷ್ಟು? ಈ ಕುರಿತಾದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಇನ್‌ಸ್ಟಿಟ್ಯೂಟ್ ಹೆಸರು : ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್
- ಹುದ್ದೆಗಳ ಸಂಖ್ಯೆ: 99
- ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
- ಹುದ್ದ್ದೆಗಳ ಹೆಸರು: ಇಂಜಿನಿಯರಿಂಗ್ ಅಧಿಕಾರಿ, ತಂತ್ರಜ್ಞ
ಹುದ್ದೆಗಳ ವಿಭಾಗವಾರು ವಿವರಗಳು:
- ಇಂಜಿನಿಯರಿಂಗ್ ಅಧಿಕಾರಿ- 40 ಹುದ್ದೆಗಳು
- ವೈಜ್ಞಾನಿಕ ಸಹಾಯಕ- 4 ಹುದ್ದೆಗಳು
- ಇಂಜಿನಿಯರಿಂಗ್ ಸಹಾಯಕ- 13 ಹುದ್ದೆಗಳು
- ತಂತ್ರಜ್ಞ- 24 ಹುದ್ದೆಗಳು
- ಸಹಾಯಕ- 18 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಈ ಹುದ್ದೆಗಳಿಗೆ ವಿಭಿನ್ನ ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದ್ದು. ಆಯಾ ವಿಭಾಗದ ಹುದ್ದೆಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ:
- ಇಂಜಿನಿಯರಿಂಗ್ ಅಧಿಕಾರಿ- ರೂ.44900/-
- ವೈಜ್ಞಾನಿಕ ಸಹಾಯಕ- ರೂ.35400/-
- ಇಂಜಿನಿಯರಿಂಗ್ ಸಹಾಯಕ- ರೂ.35400/-
- ತಂತ್ರಜ್ಞ- ರೂ.19900/-
- ಸಹಾಯಕ- ರೂ.25500/-
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಏಪ್ರಿಲ್ 14, 2023
ಇದನ್ನೂ ಓದಿ: Karnataka High Court Recruitment 2023: ಕರ್ನಾಟಕ ಹೈಕೋರ್ಟ್ನಲ್ಲಿನ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 2:38 pm, Sun, 26 March 23