HAL Recruitment 2022: HAL ನಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
HAL Recruitment 2022: ಈ ಹುದ್ದೆಗಳಿಗೆ ಆನ್‌ಲೈನ್ ಆಯ್ಕೆ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
HAL Recruitment 2022: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿನ (ಎಚ್‌ಎಎಲ್) ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿ ಮೂಲಕಮ್ಯಾನೇಜ್‌ಮೆಂಟ್ ಟ್ರೈನಿ (ಎಂಟಿ) / ಡಿಸೈನ್ ಟ್ರೈನಿ (ಡಿಟಿ) ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು HAL ನ ಅಧಿಕೃತ ವೆಬ್‌ಸೈಟ್ hal-india.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
HAL Recruitment 2022 ಹುದ್ದೆಗಳ ವಿವರಗಳು: ಡಿಸೈನ್ ಟ್ರೈನಿ ಏರೋನಾಟಿಕಲ್ – 2 ಹುದ್ದೆಗಳು ಡಿಸೈನ್ ಟ್ರೈನಿ ಮೆಕ್ಯಾನಿಕಲ್ – 15 ಹುದ್ದೆಗಳು ಡಿಸೈನ್ ಟ್ರೈನಿ ಎಲೆಕ್ಟ್ರಾನಿಕ್ಸ್ – 21 ಹುದ್ದೆಗಳು MT (ತಾಂತ್ರಿಕ) ಕಂಪ್ಯೂಟರ್ ಸೈನ್ಸ್ – 4 ಹುದ್ದೆಗಳು MT (ತಾಂತ್ರಿಕ) ಮೆಕ್ಯಾನಿಕಲ್ – 4 ಹುದ್ದೆಗಳು MT (ತಾಂತ್ರಿಕ) ಎಲೆಕ್ಟ್ರಿಕಲ್ – 4 ಹುದ್ದೆಗಳು MT (ತಾಂತ್ರಿಕ) ಎಲೆಕ್ಟ್ರಾನಿಕ್ಸ್ – 8 ಹುದ್ದೆಗಳು MT (ತಾಂತ್ರಿಕ) 2 ಹುದ್ದೆಗಳು MT (IMM) ಮೆಕ್ಯಾನಿಕಲ್-ಎಲೆಕ್ಟ್ರಿಕಲ್ – 5 ಹುದ್ದೆಗಳು MT ನಾಗರಿಕ – 5 ಹುದ್ದೆಗಳು MT HR – 5 ಹುದ್ದೆಗಳು MT ಕಾನೂನು – 5 ಹುದ್ದೆಗಳು MT ಫೈನಾನ್ಸ್ – 5 ಹುದ್ದೆಗಳು
HAL Recruitment 2022 ಗಾಗಿ ಅರ್ಹತಾ ಮಾನದಂಡಗಳು:
DT, MT ಟೆಕ್ನಿಕಲ್ ಮತ್ತು MT IMM ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಮಾನ್ಯತೆ ಪಡೆದ ಸಂಸ್ಥೆಯಿಂದ ಇಂಜಿನಿಯರಿಂಗ್ / ತಂತ್ರಜ್ಞಾನದಲ್ಲಿ ಸಂಬಂಧಿತ ವಿಷಯದಲ್ಲಿ ಪದವೀಧರರಾಗಿರಬೇಕು. HR ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2 ವರ್ಷಗಳ ನಿಯಮಿತ / ಪೂರ್ಣ ಸಮಯದ PG ಪದವಿ ಪಡೆದಿರಬೇಕು. ಕಾನೂನು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ನಿಯಮಿತ / ಪೂರ್ಣ ಸಮಯದ ಬ್ಯಾಚುಲರ್ ಆಫ್ ಲಾ (10+2 ನಂತರ 5 ವರ್ಷಗಳ ಸಮಗ್ರ ಕೋರ್ಸ್) ಪದವಿಯನ್ನು ಹೊಂದಿರಬೇಕು. ಫೈನಾನ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ/ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಪದವಿ ಮತ್ತು CA/ ICWA ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
HAL Recruitment 2022 ವಯೋಮಿತಿ: ಈ ಹುದ್ದೆಗಳಿಗೆ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ.
HAL Recruitment 2022 ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕಾಗುತ್ತದೆ. ಇನ್ನು ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
HAL Recruitment 2022 ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಆನ್‌ಲೈನ್ ಆಯ್ಕೆ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
HAL Recruitment 2022 ರ ಪ್ರಮುಖ ದಿನಾಂಕಗಳು: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 02 ಮಾರ್ಚ್ 2022
HAL Recruitment 2022 ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: IPL 2022 format explained: 2 ಗುಂಪು, 70 ಪಂದ್ಯಗಳು: ಹೇಗಿರಲಿದೆ IPL 2022 ಟೂರ್ನಿ
ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ
ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!
(HAL Recruitment 2022 For 85 Posts)