ONGC Recruitment 2022: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಹುದ್ದೆಗಳಿಗೆ ಅರ್ಜಿ ಆಹ್ವಾನ
ONGC Recruitment 2022: ಜನರಲ್ ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಪದವಿಯನ್ನು ಪೂರ್ಣಗೊಳಿಸಿರಬೇಕು.
ONGC Recruitment 2022: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಪೆಟ್ರೋ ಅಡಿಶನ್ಸ್ ಲಿಮಿಟೆಡ್ (OPAL) ನ ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ONGC ಯ ಅಧಿಕೃತ ವೆಬ್ಸೈಟ್ ongcindia.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಫೆಬ್ರವರಿ 24 ರಿಂದ ಪ್ರಾರಂಭವಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ONGC Recruitment 2022 ಹುದ್ದೆಗಳ ವಿವರಗಳು: ಜನರಲ್ ಮ್ಯಾನೇಜರ್ (HSE & ಫೈರ್)- 1 ಜನರಲ್ ಮ್ಯಾನೇಜರ್ (ಮಾಹಿತಿ ತಂತ್ರಜ್ಞಾನ)-1
ಎಕ್ಸಿಕ್ಯೂಟಿವ್ ಲೆವೆಲ್ ಪೋಸ್ಟ್ ಕ್ರ್ಯಾಕರ್ – 1 ಪಾಲಿಮರ್ – 1 ಆಫ್ಸೈಟ್ – 2 ಮೆಕ್ಯಾನಿಕಲ್ – 1 ಇನ್ಸ್ಟ್ರುಮೆಂಟೇಶನ್ – 02 ಎಲೆಕ್ಟ್ರಿಕಲ್ – 03 ಫೈರ್ – 1 ಎಸ್ಎಪಿ -1 ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್ – 6 ಹಣಕಾಸು – 02 ಎಚ್ಆರ್- 02
ONGC Recruitment 2022 ಅರ್ಹತಾ ಮಾನದಂಡಗಳು: ಜನರಲ್ ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಪದವಿಯನ್ನು ಪೂರ್ಣಗೊಳಿಸಿರಬೇಕು.
ONGC Recruitment 2022 ವಯೋಮಿತಿ: ಜನರಲ್ ಮ್ಯಾನೇಜರ್ ಹುದ್ದೆಗಳಿಗೆ 21 ರಿಂದ 52 ವರ್ಷದೊಳಗಿರನವರು ಅರ್ಜಿ ಸಲ್ಲಿಸಬಹುದು. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 18 ರಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ONGC Recruitment 2022 ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ONGC Recruitment 2022 ಪ್ರಮುಖ ದಿನಾಂಕ: ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 18 ಮಾರ್ಚ್ 2022
ONGC Recruitment 2022 ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಊ ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: IPL 2022 format explained: 2 ಗುಂಪು, 70 ಪಂದ್ಯಗಳು: ಹೇಗಿರಲಿದೆ IPL 2022 ಟೂರ್ನಿ
ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ
ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!
(ONGC Recruitment 2022: Vacancies For 24 Posts)
Published On - 7:37 pm, Sat, 26 February 22