Army Recruitment 2022: SSLC ಪಾಸಾದವರಿಗೆ ಇಲ್ಲಿದೆ ಉದ್ಯೋಗಾವಕಾಶ: ವೇತನ 63 ಸಾವಿರ ರೂ.
Indian Army Recruitment 2022: ಈ ಹುದ್ದೆಗಳಿಗೆ 18 ರಿಂದ 25 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
Sarkari Naukri 2022: ಭಾರತೀಯ ಸೇನೆಯ ಗ್ರೂಪ್ C ವರ್ಗದ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಮೂಲಕ ದಕ್ಷಿಣ ಕಮಾಂಡ್‌ನಲ್ಲಿನ ಸ್ಟೆನೋ ಗ್ರೇಡ್-2, ಲೋವರ್ ಡಿವಿಷನ್ ಕ್ಲರ್ಕ್, ಕುಕ್, MTS (ದಫ್ತ್ರಿ), MTS (ಮೆಸೆಂಜರ್), MTS (ಸಫಾಯಿವಾಲಾ) ಮತ್ತು MTS (ಚೌಕಿದಾರ್) ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ.ಈ ನೇಮಕಾತಿಗಾಗಿ, ಸದರ್ನ್ ಕಮಾಂಡ್ ಹೆಡ್ಕ್ವಾರ್ಟರ್ಸ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಫಾರ್ಮ್‌ನ ಸ್ವರೂಪದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಯ ವಿವರಗಳು:
- ಸ್ಟೆನೋ ಗ್ರೇಡ್ II – 1 ಹುದ್ದೆ
- ಲೋವರ್ ಡಿವಿಷನ್ ಕ್ಲರ್ಕ್ – 8 ಹುದ್ದೆಗಳು
- ಕುಕ್ – 1 ಹುದ್ದೆ
- MTS – 22 ಹುದ್ದೆಗಳು
ವಿದ್ಯಾರ್ಹತೆ:
- ಸ್ಟೆನೋ ಗ್ರೇಡ್ II – 12ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಇಂಗ್ಲಿಷ್/ಹಿಂದಿಯಲ್ಲಿ ಕಂಪ್ಯೂಟರ್ ಸ್ಟೆನೋಗ್ರಫಿ ಕೌಶಲ್ಯ ಹೊಂದಿರಬೇಕು.
- ಲೋವರ್ ಡಿವಿಷನ್ ಕ್ಲರ್ಕ್ – 12ನೇ ತರಗತಿ ಪಾಸ್ ಆಗಿರಬೇಕು. ಇದರ ಜೊತೆ ಇಂಗ್ಲಿಷ್ ಮತ್ತು ಹಿಂದಿ ಟೈಪಿಂಗ್ ಕೌಶಲ್ಯ ಹೊಂದಿರಬೇಕು.
- ಕುಕ್ – 10ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಭಾರತೀಯ ಅಡುಗೆಯ ಜ್ಞಾನವನ್ನು ಹೊಂದಿರಬೇಕಾಗುತ್ತದೆ.
- MTS – 10ನೇ ತರಗತಿ ಪಾಸ್ ಆಗಿರಬೇಕು.
ವೇತನ:
- ಸ್ಟೆನೋ ಗ್ರೇಡ್: 25500 ರಿಂದ 81100 ರೂ.
- ಲೋವರ್ ಡಿವಿಷನ್ ಕ್ಲರ್ಕ್ ಮತ್ತು ಕುಕ್ : 19900 ರಿಂದ 63200 ರೂ.
- MTS: 18000 ರಿಂದ 56900 ರೂ.
ವಯೋಮಿತಿ: ಈ ಹುದ್ದೆಗಳಿಗೆ 18 ರಿಂದ 25 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜುಲೈ 19, 2022
ಅರ್ಜಿ ಸಲ್ಲಿಸುವುದು ಹೇಗೆ? ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 2:52 pm, Mon, 18 July 22