HGML Recruitment 2022: ರಾಯಚೂರಿನ ಹಟ್ಟಿ ಚಿನ್ನದ ಗಣಿಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Hutti Gold Mines Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹಟ್ಟಿಗೋಲ್ಡ್ ಮೈನ್ಸ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್ huttigold.karnataka.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
Hutti Gold Mines Recruitment 2022: ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿರುವ ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್ನಲ್ಲಿನ ಸೆಕ್ಯುರಿಟಿ ಗಾರ್ಡ್ ಮತ್ತು ಮ್ಯಾನೇಜ್‌ಮೆಂಟ್ ಟ್ರೈನಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಧಿಸೂಚನೆಯ ಪ್ರಕಾರ ಹಟ್ಟಿ ಚಿನ್ನದ ಗಣಿಯಲ್ಲಿ ಒಟ್ಟು 216 ಹುದ್ದೆಗಳು ಖಾಲಿಯಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹಟ್ಟಿಗೋಲ್ಡ್ ಮೈನ್ಸ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್ huttigold.karnataka.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಯ ವಿವರಗಳು:
- ಮ್ಯಾನೇಜ್‌ಮೆಂಟ್ ಟ್ರೈನಿ- 29 ಹುದ್ದೆಗಳು
- ಅಸಿಸ್ಟೆಂಟ್ ಫೋರ್‌ಮನ್- 43 ಹುದ್ದೆಗಳು
- ಸೆಕ್ಯುರಿಟಿ ಆಫೀಸರ್- 6 ಹುದ್ದೆಗಳು
- ಫಿಸಿಯೋಥೆರಪಿಸ್ಟ್- 1 ಹುದ್ದೆ
- ಫಾರ್ಮಾಸಿಸ್ಟ್- 1 ಹುದ್ದೆ
- ಫಿಟ್ಟರ್ ಗ್ರೇಡ್ II, ಎಲೆಕ್ಟ್ರಿಷಿಯನ್ ಗ್ರೇಡ್ II- 81 ಹುದ್ದೆಗಳು
- ಎಲೆಕ್ಟ್ರಿಕಲ್ ಗ್ರೇಡ್ II- 11 ಹುದ್ದೆಗಳು
- ಸೆಕ್ಯುರಿಟಿ ಗಾರ್ಡ್- 42 ಹುದ್ದೆಗಳು
- ಲ್ಯಾಬ್ ಟೆಕ್ನಿಷಿಯನ್ ಗ್ರೇಡ್ IV- 1 ಹುದ್ದೆ
- ನರ್ಸಿಂಗ್ – 1 ಹುದ್ದೆ
ಅರ್ಜಿ ಶುಲ್ಕ:
- ಸಾಮಾನ್ಯ ಅಭ್ಯರ್ಥಿಗಳಿಗೆ – ರೂ. 600
- OBC – ರೂ. 300
- SC, ST, ಮಾಜಿ ಸೈನಿಕರು ಮತ್ತು ದಿವ್ಯಾಂಗ – ರೂ. 100
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜುಲೈ 9, 2022
ಶೈಕ್ಷಣಿಕ ಅರ್ಹತೆ:
- ಮ್ಯಾನೇಜ್‌ಮೆಂಟ್ ಟ್ರೈನಿ – ಸಂಬಂಧಪಟ್ಟ ವಿಭಾಗದಲ್ಲಿ ಪಿಜಿ ಪದವಿ ಮಾಡಿರಬೇಕು.
- ಸಹಾಯಕ ಫೋರ್‌ಮನ್- BE/B.Tech/MCA/ME/MTech/Ph.D..ಇದರಲ್ಲಿ ಯಾವುದಾದರು ಒಂದು ಪದವಿ ಹೊಂದಿರಬೇಕು.
- ಸೆಕ್ಯುರಿಟಿ ಆಫೀಸರ್-ಡಿಪ್ಲೋಮಾ ಅಥವಾ ಡಿಗ್ರಿ ಮಾಡಿರಬೇಕು.
- ಫಿಸಿಯೋಥೆರಪಿಸ್ಟ್- ಬಿ.ಎಸ್ಸಿ ಫಿಸಿಯೋಥೆರಪಿ ಮಾಡಿರಬೇಕು.
- ಫಾರ್ಮಾಸಿಸ್ಟ್- ಫಾರ್ಮಸಿಯಲ್ಲಿ ಡಿಪ್ಲೋಮಾ ಅಥವಾ ಬಿ. ಫಾರ್ಮಾ ಮಾಡಿರಬೇಕು.
- ಫಿಟ್ಟರ್ ಗ್ರೇಡ್ II, ಎಲೆಕ್ಟ್ರಿಷಿಯನ್ ಗ್ರೇಡ್ II- ಐಟಿಐ ಮಾಡಿರಬೇಕು.
- ಎಲೆಕ್ಟ್ರಿಕಲ್ ಗ್ರೇಡ್ II ಸಂಬಂಧಿತ ವ್ಯಾಪಾರದಲ್ಲಿ- ಐಟಿಐ ಮಾಡಿರಬೇಕು.
- ಸೆಕ್ಯುರಿಟಿ ಗಾರ್ಡ್- ಪಿಯುಸಿ ಅಥವಾ ಐಟಿಐ ಮಾಡಿರಬೇಕು.
- ಲ್ಯಾಬ್ IV-ಟೆಕ್ನಿಷಿಯನ್ ಗ್ರೇಡ್ ಲ್ಯಾಬ್ ಟೆಕ್ನಿಷಿಯನ್ ಮಾಡಿರಬೇಕು
- ನರ್ಸಿಂಗ್-ಎಎನ್‌ಎಂ ಕೋರ್ಸ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು.
ವೇತನ:
ಆಯಾ ಹುದ್ದೆಗಳಿಗೆ ವೇತನ ಬದಲಾಗಲಿದ್ದು, ಅದರಂತೆ 20 ಸಾವಿರದಿಂದ 81 ಸಾವಿರದೊಳಗೆ ತಿಂಗಳ ವೇತನ ಸಿಗಲಿದೆ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.