IISc Recruitment 2023: ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ಸಂಪಾದಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ

IISc Recruitment 2023: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್​ನ ಅಧಿಕೃತ ವೆಬ್​ಸೈಟ್​ iisc.ac.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

IISc Recruitment 2023: ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ಸಂಪಾದಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ
IISc Recruitment 2023
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jan 08, 2023 | 3:00 PM

IISc Recruitment 2023: ಭಾರತೀಯ ವಿಜ್ಞಾನ ಸಂಸ್ಥೆಯು (IISc)  ಹಿರಿಯ ಸಂಪಾದಕೀಯ ವ್ಯವಸ್ಥಾಪಕ ಮತ್ತು ಹಿರಿಯ ಸಂಪಾದಕೀಯ ಸಹಾಯಕ (OoC) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ  ಒಟ್ಟು 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್​ನ ಅಧಿಕೃತ ವೆಬ್​ಸೈಟ್​ iisc.ac.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು: ಹಿರಿಯ ಸಂಪಾದಕೀಯ ವ್ಯವಸ್ಥಾಪಕರು- 2 ಹುದ್ದೆಗಳು ಹಿರಿಯ ಸಂಪಾದಕೀಯ ಸಹಾಯಕ- 2 ಹುದ್ದೆಗಳು ಒಟ್ಟು ಹುದ್ದೆಗಳ ಸಂಖ್ಯೆ- 4

ಉದ್ಯೋಗದ ಸ್ಥಳ:

ಇದನ್ನೂ ಓದಿ
Image
HAL Recruitment 2023: 10ನೇ ತರಗತಿ ಪಾಸಾದವರಿಗೆ HAL ನಲ್ಲಿದೆ ಉದ್ಯೋಗಾವಕಾಶ
Image
BSNL Recruitment 2023: 11,705 ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 40 ಸಾವಿರ ರೂ.
Image
NHAI Recruitment 2023: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ: 56 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
Image
UPSC Recruitment 2023: ಕೇಂದ್ರ ಗುಪ್ತಚರ ಇಲಾಖೆಯಲ್ಲಿದೆ ಉದ್ಯೋಗಾವಕಾಶ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)- ಬೆಂಗಳೂರು

ಅರ್ಹತಾ ಮಾನದಂಡಗಳು:

  • ಸಂಪಾದಕೀಯ ವ್ಯವಸ್ಥಾಪಕ ಹುದ್ದೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ/ಸ್ನಾತಕೋತ್ತರ ಪದವಿ ಅಥವಾ ಸಂಬಂಧಿತ ವಿಷಯದಲ್ಲಿ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಇದರ ಜೊತೆಗೆ ಪತ್ರಿಕೋದ್ಯಮ, ಬರವಣಿಗೆ/ವಿಜ್ಞಾನ ಬರವಣಿಗೆ, ಎಡಿಟಿಂಗ್ ಮತ್ತು ಕಾಪಿ ಎಡಿಟಿಂಗ್​ನಲ್ಲಿ ಕನಿಷ್ಠ 06 ವರ್ಷಗಳ ಅನುಭವವನ್ನು ಹೊಂದಿರಬೇಕಾಗುತ್ತದೆ. ಹಾಗೆಯೇ ಸಾಮಾನ್ಯ ಜನರಿಗೆ ಸಂಬಂಧ ಪಟ್ಟಂತೆ ಕೆಲಗಳನ್ನು ಲೇಖನಗಳ ಬರೆದಿರಬೇಕು.
  • ಹಾಗೆಯೇ ಅತ್ಯುತ್ತಮ ಯೋಜನಾ ನಿರ್ವಹಣೆ, ಸಂವಹನ ಮತ್ತು ಸಂಘಟನಾ ಕೌಶಲ್ಯಗಳು, ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಪರಿಕರಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕಾಗುತ್ತದೆ.
  • ಮಾಸ್ಟರ್ ಆಫ್ ಸೈನ್ಸ್/ಫಿಲಾಸಫಿಯಾ ಡಾಕ್ಟರ್ (MS/Ph.D.) ಪದವಿಯನ್ನು ಮಾಡಿದವರೂ ಕೂಡ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Karnataka Bank Recruitment 2023: ಪದವೀಧರರಿಗೆ ಕರ್ನಾಟಕ ಬ್ಯಾಂಕ್​ನಲ್ಲಿದೆ ಉದ್ಯೋಗಾವಕಾಶ

  • ಹಿರಿಯ ಸಂಪಾದಕೀಯ ಸಹಾಯಕ ಹುದ್ದೆ: ಈ ಹುದ್ದೆಗಳಿಗೆ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಇದರ ಜೊತೆಗೆ ವೆಬ್ ಮತ್ತು ಪ್ರಿಂಟ್ ಪತ್ರಿಕೋದ್ಯಮದಲ್ಲಿ ವಿಜ್ಞಾನ ಬರವಣಿಗೆ ಅಥವಾ ಜರ್ನಲಿಸಂ, ಎಡಿಟಿಂಗ್ ಮತ್ತು ಕಾಪಿಡಿಟಿಂಗ್ ವಿಷಯಗಳಲ್ಲಿ ಕನಿಷ್ಠ 05 ವರ್ಷಗಳ ಅನುಭವವನ್ನು ಹೊಂದಿರಬೇಕಾಗುತ್ತದೆ.
  • ಅತ್ಯುತ್ತಮ ಲಿಖಿತ ಮತ್ತು ಮೌಖಿಕ ಸಂವಹನ ಕೌಶಲ್ಯಗಳು ಮತ್ತು ಸಂಘಟಣಾ ಕೌಶಲ್ಯಗಳನ್ನು ಹೊಂದಿರಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
  • ಇನ್ನು ಮಾಸ್ಟರ್ ಆಫ್ ಸೈನ್ಸ್/ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್/ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್/ಫಿಲಾಸಫಿಯಾ ಡಾಕ್ಟರ್ (MS/MBA/PGDM/Ph.D.) ಪದವಿ ಜೊತೆಗೆ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ವಿಜ್ಞಾನ ಬರವಣಿಗೆ, ಎಡಿಟಿಂಗ್ ಮತ್ತು ಪಬ್ಲಿಷಿಂಗ್​ನಲ್ಲಿ ಅನುಭವ ಹೊಂದಿರುವವರು ಕೂಡ ಅರ್ಜಿ ಸಲ್ಲಿಸಬಹುದು.

ಮಾಸಿಕ ವೇತನ:

  • ಸಂಪಾದಕೀಯ ವ್ಯವಸ್ಥಾಪಕ ಹುದ್ದೆ: ರೂ.70000 ರಿಂದ ರೂ.75000
  • ಹಿರಿಯ ಸಂಪಾದಕೀಯ ಸಹಾಯಕ: ರೂ.40000 ರಿಂದ ರೂ.45000

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿಲ್ಲ. ಹೀಗಾಗಿ ಹಿರಿಯ ಮತ್ತು ಅನುಭವಿ ಅಭ್ಯರ್ಥಿಗಳೂ ಕೂಡ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್​ಲೀಸ್ಟ್ ಮಾಡಲಾಗುತ್ತದೆ. ಇದಾದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.

ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜನವರಿ 19, 2023. ಇನ್ನು 10.01.2023 ರವರೆಗೆ ಈ ಮೇಲ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆ:

ಹಿರಿಯ ಸಂಪಾದಕೀಯ ವ್ಯವಸ್ಥಾಪಕರು ಮತ್ತು ಹಿರಿಯ ಸಂಪಾದಕೀಯ ಸಹಾಯಕ ಹುದ್ದೆಗಳಿಗೆ ಒಪ್ಪಂದದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಒಂದು ವರ್ಷದ ಒಪ್ಪಂದ ಇರಲಿದ್ದು, ಇದಾದ ಬಳಿಕ ತೃಪ್ತಿದಾಯಕ ಕಾರ್ಯಕ್ಷಮತೆಯನ್ನು 04 ವರ್ಷಗಳವರೆಗೆ ಒಪ್ಪಂದವನ್ನು ವಿಸ್ತರಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

Published On - 2:57 pm, Sun, 8 January 23

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ