AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IIT Tirupati Recruitment 2022: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್! ತಿರುಪತಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಉದ್ಯೋಗ ಲಭ್ಯ

IIT ತಿರುಪತಿ ನೇಮಕಾತಿ 2022: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ತಿರುಪತಿ, ಆಂಧ್ರ ಪ್ರದೇಶ ರಾಜ್ಯ, ಭಾರತ ಸರ್ಕಾರ, ಶಿಕ್ಷಣ ಸಚಿವಾಲಯ ಇಲ್ಲಿ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕೋರಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

IIT Tirupati Recruitment 2022: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್! ತಿರುಪತಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಉದ್ಯೋಗ ಲಭ್ಯ
ಬಿ.ಟೆಕ್ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್! ತಿರುಪತಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಉದ್ಯೋಗ ಲಭ್ಯ
TV9 Web
| Updated By: ಸಾಧು ಶ್ರೀನಾಥ್​|

Updated on: Oct 11, 2022 | 6:37 PM

Share

IIT Tirupati Recruitment 2022: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತಿರುಪತಿ, ಆಂಧ್ರ ಪ್ರದೇಶ ರಾಜ್ಯ, ಭಾರತ ಸರ್ಕಾರ, ಶಿಕ್ಷಣ ಸಚಿವಾಲಯ – ಈ ಸಂಸ್ಥೆಯಲ್ಲಿ 39 ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕೋರಿ ಅಧಿಸೂಚನೆ ಹೊರಡಿಸಲಾಗಿದೆ. ಸಹಾಯಕ ರಿಜಿಸ್ಟ್ರಾರ್, ಜೂನಿಯರ್ ಅಸಿಸ್ಟೆಂಟ್, ಟೆಕ್ನಿಕಲ್ ಆಫೀಸರ್, ಜೂನಿಯರ್ ಲೈಬ್ರರಿಯನ್, ಸೂಪರಿಂಟೆಂಡೆಂಟ್ ಇನ್ ಅಡ್ಮಿನಿಸ್ಟ್ರೇಷನ್, ಕಂಪ್ಯೂಟರ್ ಸೈನ್ಸ್, ಲೈಬ್ರರಿ, ಸಿವಿಲ್ ಇಂಜಿನಿಯರಿಂಗ್, ಫಿಸಿಕ್ಸ್, ಕಂಪ್ಯೂಟರ್ ಸೆಂಟರ್ ನೆಟ್‌ವರ್ಕ್, ಕಂಪ್ಯೂಟರ್ ಸೆಂಟರ್ ಸಿಸ್ಟಮ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಸಿವಿಲ್, ಮೆಕ್ಯಾನಿಕಲ್, ಕೆಮಿಸ್ಟ್ರಿ, ಕೆಮಿಕಲ್ ಇಂಜಿನಿಯರಿಂಗ್, ವರ್ಕ್‌ಶಾಪ್ ಮುಂತಾದ ವಿಭಾಗಗಳಲ್ಲಿ ಈ ಅಧಿಸೂಚನೆಯ ಮೂಲಕ ನೇಮಕಾತಿ ಮಾಡಲಾಗುತ್ತದೆ.

ಪದವಿ, ಸ್ನಾತಕೋತ್ತರ ಪದವಿ, BE/BTech, MCC/MCA/Master of Library Science/MLAIS/BCA/Diploma ಅಥವಾ ತತ್ಸಮಾನ ಕೋರ್ಸ್ ಸಂಬಂಧಿತ ವಿಶೇಷತೆಯಲ್ಲಿ ಕನಿಷ್ಠ 55% ಅಂಕಗಳೊಂದಿಗೆ, ಜೊತೆಗೆ ಸಂಬಂಧಿತ ಕೆಲಸದಲ್ಲಿ ಅನುಭವ ಹೊಂದಿರಬೇಕು. ಅಲ್ಲದೆ ಅರ್ಜಿದಾರರ ವಯಸ್ಸು ನವೆಂಬರ್ 10, 2022 ರಂತೆ 27 ರಿಂದ 45 ವರ್ಷಗಳ ನಡುವೆ ಇರಬೇಕು.

ಅರ್ಹ ಅಭ್ಯರ್ಥಿಗಳು ನವೆಂಬರ್ 10, 2022 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳು ಗ್ರೂಪ್ ಎ- ರೂ. 500, ಗ್ರೂಪ್ ಬಿ -ರೂ. 300, ಗ್ರೂಪ್ ಸಿ -ರೂ. 200 ಅರ್ಜಿ ಶುಲ್ಕವನ್ನು ಪಾವತಿಸಬೇಕು. SC/ST/PWD, ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಅನ್ವಯಿಸುತ್ತದೆ.

ಆಯಾ ಹುದ್ದೆಗಳಿಗೆ ಅನುಗುಣವಾಗಿ ಸ್ಕ್ರೀನಿಂಗ್ ಟೆಸ್ಟ್/ಲಿಖಿತ ಪರೀಕ್ಷೆ/ನೈಪುಣ್ಯ ಪರೀಕ್ಷೆ- ಟ್ರೇಡ್ ಟೆಸ್ಟ್/ಇಂಟರ್‌ವ್ಯೂ ಆಧರಿಸಿ ಅಂತಿಮ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಸೂಚನೆಯಲ್ಲಿ ತಿಳಿಸಿರುವಂತೆ ವೇತನವನ್ನು ನೀಡಲಾಗುವುದು. ಇನ್ನಿತರ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ