INDBank Recruitment 2022: ಇಂಡಿಬ್ಯಾಂಕ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Apr 18, 2022 | 7:10 PM

INDBank Recruitment 2022: ಈ ನೇಮಕಾತಿಯಲ್ಲಿ ಯಾವ ವಿಭಾಗಗಳಲ್ಲಿ ಎಷ್ಟು ಖಾಲಿ ಹುದ್ದೆಗಳಿವೆ? ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ...

INDBank Recruitment 2022: ಇಂಡಿಬ್ಯಾಂಕ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
INDBank Recruitment
Follow us on

INDBank Recruitment 2022: ಇಂಡಿಯನ್ ಬ್ಯಾಂಕ್​ನ ಅಂಗಸಂಸ್ಥೆ ಇಂಡಿಬ್ಯಾಂಕ್ ಮರ್ಚೆಂಟ್ ಬ್ಯಾಂಕಿಂಗ್ ಸರ್ವಿಸಸ್ ಲಿಮಿಟೆಡ್‌ನ ಹಲವಾರು ಹುದ್ದೆಗಳ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಭಾರತ ಸರ್ಕಾರದ ಒಡೆತನದ ಈ ಸಂಸ್ಥೆಯು ಒಟ್ಟು 73 ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ನೇಮಕಾತಿಯಲ್ಲಿ ಯಾವ ವಿಭಾಗಗಳಲ್ಲಿ ಖಾಲಿ ಹುದ್ದೆಗಳಿವೆ? ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ…

* ಅಧಿಸೂಚನೆಯ ಪ್ರಕಾರ ಒಟ್ಟು 73 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

* ಅಕೌಂಟ್ ಓಪನಿಂಗ್ ಸ್ಟಾಫ್, ಹೆಲ್ಪ್ ಡೆಸ್ಕ್ ಸಿಬ್ಬಂದಿ, ಸಂಶೋಧನಾ ವಿಶ್ಲೇಷಕರು, ಸಿಸ್ಟಮ್ಸ್ ಮತ್ತು ನೆಟ್‌ವರ್ಕ್ ಎಂಜಿನಿಯರ್, ಉಪಾಧ್ಯಕ್ಷರು, ಶಾಖಾ ಮುಖ್ಯಸ್ಥರು ಮತ್ತು ಕ್ಷೇತ್ರ ಸಿಬ್ಬಂದಿಯಂತಹ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

* ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ವಯಸ್ಸು 21 ರಿಂದ 65 ವರ್ಷಗಳ ನಡುವೆ ಇರಬೇಕು.

ಪ್ರಮುಖ ಸೂಚನೆಗಳು..
* ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

* ಅರ್ಜಿಗಳನ್ನು Head administration, Khivraj Complex, No 1, Anna Salai, Nandanam, Chennai ಈ ವಿಳಾಸಕ್ಕೆ ಕಳುಹಿಸಬೇಕು.

* ಕೆಲಸದ ಅನುಭವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೊದಲು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಅಂತಿಮ ಆಯ್ಕೆಯನ್ನು ಸಂದರ್ಶನದ ಮೂಲಕ ಮಾಡಲಾಗುತ್ತದೆ.

* ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 1.50 ರಿಂದ ರೂ. 10 ಲಕ್ಷದವರೆಗೆ ವೇತನ ಸಿಗಲಿದೆ.

* ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 26-04-2022.

* ಅರ್ಜಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ

* ಈ ನೇಮಕಾತಿಯ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ