India Post Recruitment 2022: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ: ವೇತನ 56 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: Oct 26, 2022 | 4:09 PM

India Post Recruitment 2022: ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ dopsportsrecruitment.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್​ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

India Post Recruitment 2022: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ: ವೇತನ 56 ಸಾವಿರ ರೂ.
india post recruitment
Follow us on

India Post Recruitment 2022: ಭಾರತೀಯ ಅಂಚೆ ಇಲಾಖೆಯು ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS), ಪೋಸ್ಟ್‌ಮ್ಯಾನ್, ಪೋಸ್ಟಲ್ ಅಸಿಸ್ಟೆಂಟ್ ಮತ್ತು ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 22 ರೊಳಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ dopsportsrecruitment.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್​ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಅಂಚೆ ಸಹಾಯಕ/ವಿಂಗಡಣೆ ಸಹಾಯಕ- 71 ಹುದ್ದೆಗಳು
  • ಪೋಸ್ಟ್‌ಮ್ಯಾನ್- 56 ಹುದ್ದೆಗಳು
  • MTS- 61 ಹುದ್ದೆಗಳು

ವೇತನ:

ಇದನ್ನೂ ಓದಿ
BECIL Recruitment 2022: ಬಿಇಸಿಐಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
SSC Recruitment 2022: ಎಸ್​​ಎಸ್​ಸಿ ಜೆಇ ಹುದ್ದೆಗಳ ನೇಮಕಾತಿ: ವೇತನ 1 ಲಕ್ಷ ರೂ.
NHAI Recruitment 2022: ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ: ವೇತನ 60 ಸಾವಿರ ರೂ.
BSNL Recruitment 2022: BSNL ಕರ್ನಾಟಕದಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕ ಹುದ್ದೆಗಳಿಗೆ – ರೂ.25,500/- ರಿಂದ 81100 ರೂ.
  • ಪೋಸ್ಟ್‌ಮ್ಯಾನ್/ಮೇಲ್ ಗಾರ್ಡ್ ಹುದ್ದೆಗಳಿಗೆ- ರೂ.21700 ರಿಂದ 69100 ರೂ.
  • MTS ಹುದ್ದೆಗಳಿಗೆ- ರೂ.18000 ರಿಂದ 56900 ರೂ.

ಶೈಕ್ಷಣಿಕ ಅರ್ಹತೆ:

  • ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕ – 12ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಕಂಪ್ಯೂಟರ್ ಕಲಿತಿರುವ ಪ್ರಮಾಣಪತ್ರ ಹೊಂದಿರಬೇಕು.
  • ಪೋಸ್ಟ್‌ಮ್ಯಾನ್/ಮೇಲ್ ಗಾರ್ಡ್ – ಸ್ಥಳೀಯ ಭಾಷೆಯ ಜ್ಞಾನದೊಂದಿಗೆ 12ನೇ ತರಗತಿ ಉತ್ತೀರ್ಣರಾಗಿಬೇಕು. ಹಾಗೆಯೇ ಕಂಪ್ಯೂಟರ್ ಕಲಿತಿರುವ ಪ್ರಮಾಣಪತ್ರ ಹೊಂದಿರಬೇಕು.
  • ಎಂಟಿಎಸ್ – 10ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಸ್ಥಳೀಯ ಭಾಷೆಯ ಜ್ಞಾನ ಹೊಂದಿರಬೇಕು.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 100 ರೂ. ಪಾವತಿಸಬೇಕಾಗುತ್ತದೆ.

ವಯೋಮಿತಿ:

  • ಅಂಚೆ ಸಹಾಯಕ/ವಿಂಗಡಣೆ ಸಹಾಯಕ: 18 ರಿಂದ 27 ವರ್ಷ
  • ಪೋಸ್ಟ್‌ಮ್ಯಾನ್/ಮೇಲ್ ಗಾರ್ಡ್: 18 ರಿಂದ 27 ವರ್ಷ
  • ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ: 18 ರಿಂದ 25 ವರ್ಷ

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 22, 2022

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ dopsportsrecruitment.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್​ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

 

 

Published On - 4:09 pm, Wed, 26 October 22