Army Jobs 2022: ಭಾರತೀಯ ಸೇನೆಯಲ್ಲಿ SSLC ಪಾಸಾದವರಿಗೆ ಉದ್ಯೋಗಾವಕಾಶ: ತಿಂಗಳ ವೇತನ 63 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: Feb 03, 2022 | 7:25 PM

Indian Army Recruitment: ಈ ಹುದ್ದೆಗಳಿಗೆ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸಾಮಾನ್ಯ ಪೋಸ್ಟ್, ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.

Army Jobs 2022: ಭಾರತೀಯ ಸೇನೆಯಲ್ಲಿ SSLC ಪಾಸಾದವರಿಗೆ ಉದ್ಯೋಗಾವಕಾಶ: ತಿಂಗಳ ವೇತನ 63 ಸಾವಿರ ರೂ.
Army Jobs 2022
Follow us on

Army Jobs 2022 : ಭಾರತೀಯ ಸೇನೆಯ ಉತ್ತರ ಕಮಾಂಡ್‌ನಲ್ಲಿ 10ನೇ ಮತ್ತು 12ನೇ ಉತ್ತೀರ್ಣರಿಗೆ ಉದ್ಯೋಗಾವಕಾಶವಿದೆ. ಸೇನೆಯ ಉತ್ತರ ಕಮಾಂಡ್‌ನ 71 ಸಬ್ ಏರಿಯಾದ ಆರ್ಮಿ ಸಪ್ಲೈ ಕಾರ್ಪ್ಸ್ ಘಟಕದಲ್ಲಿ ಮೆಸೆಂಜರ್, ಸಫೈವಾಲಾ, ಕುಕ್ ಮತ್ತು ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಸಿ ವರ್ಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಜಾಹೀರಾತು ನೀಡಿದ ದಿನಾಂಕದಿಂದ 21 ದಿನಗಳು ಮಾತ್ರ. ಅಂದರೆ ಜನವರಿ 22 ರಂದು ಈ ಸೇನಾ ನೇಮಕಾತಿಯ ಜಾಹೀರಾತನ್ನು ನೀಡಲಾಗಿದ್ದು, ಈ ನೇಮಕಾತಿಗಾಗಿ ಅರ್ಜಿಯನ್ನು ಆಫ್‌ಲೈನ್‌ನಲ್ಲಿ ಸಲ್ಲಿಸಬೇಕಿದೆ.

ಹುದ್ದೆಯ ವಿವರಗಳು:
ಮೆಸೆಂಜರ್ – 5 ಹುದ್ದೆಗಳು
ಸಫಾಯಿ ವಾಲಾ – 2 ಹುದ್ದೆಗಳು
ಅಡುಗೆಯವರು- 1 ಹುದ್ದೆ
ಲೋವರ್ ಡಿವಿಷನ್ ಕ್ಲರ್ಕ್ – 3 ಹುದ್ದೆಗಳು

ವಯೋಮಿತಿ:
ಮೆಸೆಂಜರ್, ಸಫಾಯಿವಾಲಾ ಮತ್ತು ಕುಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 25 ವರ್ಷಗಳ ಒಳಗಿರಬೇಕು. ಇನ್ನು ಒಬಿಸಿ ಅಭ್ಯರ್ಥಿಗಳು 28 ​​ವರ್ಷಗಳು ಮತ್ತು ಎಸ್‌ಎಸ್‌ಸಿ, ಎಸ್‌ಟಿಗೆ 30 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.

ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳ ವಯಸ್ಸು 18 ರಿಂದ 27 ವರ್ಷಗಳ ಒಳಗಿರಬೇಕು. ಇನ್ನು ಒಬಿಸಿ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್‌ಸಿ, ಎಸ್‌ಟಿಗೆ 32 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ:
ಮೆಸೆಂಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,000 ರಿಂದ 56,900 ರೂ. ವೇತನ ಸಿಗಲಿದೆ.
ಸಫಾಯಿವಾಲಾ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,000 ರಿಂದ 56, 900 ರೂ. ವೇತನ ಸಿಗಲಿದೆ.
ಅಡುಗೆ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 19,900 ರಿಂದ 63, 200 ರೂ. ವೇತನ ಸಿಗಲಿದೆ.
ಗುಮಾಸ್ತ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 19, 900 ರಿಂದ 63, 200 ರೂ. ವೇತನ ಸಿಗಲಿದೆ.

ವಿದ್ಯಾರ್ಹತೆ:
ಸಫಾಯಿವಾಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪಾಸಾಗಿರಬೇಕು.

ಅಡುಗೆ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12 ನೇ ತರಗತಿ ಪಾಸಾಗಿರಬೇಕು. ಜೊತೆಗೆ ಎರಡು ವರ್ಷಗಳ ಅಡುಗೆ ಅನುಭವ ಹೊಂದಿರಬೇಕು. ಇದಲ್ಲದೆ ಅಡುಗೆ ಜ್ಞಾನದಲ್ಲಿ ITI ಪ್ರಮಾಣಪತ್ರವನ್ನು ಹೊಂದಿರಬೇಕು.

ಕ್ಲರ್ಕ್ ಹುದ್ದೆಗಳಿಗೆ ಕಂಪ್ಯೂಟರ್‌ನಲ್ಲಿ ಟೈಪಿಂಗ್ ವೇಗ ಹೊಂದಿರಬೇಕು. ಜೊತೆಗೆ 12 ನೇ ಉತ್ತೀರ್ಣರಾಗಿದ್ದು, ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ ಕನಿಷ್ಠ 35 ಪದಗಳು ಮತ್ತು ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳನ್ನು ಟೈಪ್ ಮಾಡುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ದಾಖಲೆ ಪರಿಶೀಲಿರಿಸಿ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸಾಮಾನ್ಯ ಪೋಸ್ಟ್, ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.

ಅರ್ಜಿ ನಮೂನೆಯನ್ನು ಕಳುಹಿಸಬೇಕಾದ ವಿಳಾಸ-
‘ದಿ ಪ್ರಿಸೈಡಿಂಗ್ ಆಫೀಸರ್,
5071ಆರ್ಮಿ ಸರ್ವೀಸ್ ಕಾರ್ಪ್ಸ್ ಬೆಟಾಲಿಯನ್ (ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್)’,
ಪಿನ್- 905071,
ಸಿ/ಒ 56 ಆರ್ಮಿ ಪೋಸ್ಟಲ್ ಆಫೀಸ್ (ಎಪಿಒ)’.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್

(Indian Army 71 Sub Area, Cook & Others Post Recruitment)

Published On - 7:22 pm, Thu, 3 February 22