Indian Coast Guard Jobs: ಕರಾವಳಿ ಭದ್ರತಾ ಪಡೆಯಲ್ಲಿ ಉದ್ಯೋಗಾವಾಕಾಶ: ವೇತನ 1.12 ಲಕ್ಷ ರೂ.

Indian Coast Guard Jobs: ಕರಾವಳಿ ಭದ್ರತಾ ಪಡೆಯಲ್ಲಿ ಉದ್ಯೋಗಾವಾಕಾಶ: ವೇತನ 1.12 ಲಕ್ಷ ರೂ.
Indian Coast Guard Recruitment 2022

Indian Coast Guard Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳುಭಾರತೀಯ ಕೋಸ್ಟ್ ಗಾರ್ಡ್‌ನ ಅಧಿಕೃತ ವೆಬ್‌ಸೈಟ್ joinindiancoastguard.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

TV9kannada Web Team

| Edited By: Zahir PY

Mar 03, 2022 | 7:46 PM

Indian Coast Guard Recruitment 2022: ಭಾರತೀಯ ಕರಾವಳಿ ಭದ್ರತಾ ಪಡೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಇಲ್ಲಿದೆ ಸುವರ್ಣಾವಕಾಶ. ಇದಕ್ಕಾಗಿ ಕೋಸ್ಟ್​ ಗಾರ್ಡ್​ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದ್ದು, ಅದರಂತೆ ಕೋಸ್ಟ್ ಗಾರ್ಡ್ ಸ್ಟೋರ್ಸ್ ಫೋರ್‌ಮ್ಯಾನ್, ಜನರಲ್ ಸೆಂಟ್ರಲ್ ಸರ್ವಿಸ್, ಗ್ರೂಪ್ ‘ಬಿ’ ಹುದ್ದೆಗಳಿಗೆ ಅರ್ಜಿಗಳನ್ನು ಕೋರಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳುಭಾರತೀಯ ಕೋಸ್ಟ್ ಗಾರ್ಡ್‌ನ ಅಧಿಕೃತ ವೆಬ್‌ಸೈಟ್ joinindiancoastguard.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Indian Coast Guard Recruitment 2022: ಹುದ್ದೆಗಳ ವಿವರಗಳು: ಒಟ್ಟು ಹುದ್ದೆಗಳು – 11 UR – 3 EWS – 1 OBC – 3 SC – 3 ST – 1

Indian Coast Guard Recruitment 2022 ಗಾಗಿ ಅರ್ಹತಾ ಮಾನದಂಡಗಳು: ಅರ್ಥಶಾಸ್ತ್ರ, ವಾಣಿಜ್ಯ, ವೃತ್ತಿಪರ ಅಧ್ಯಯನಗಳು, ಸಾರ್ವಜನಿಕ ಆಡಳಿತದಲ್ಲಿ 1 ವರ್ಷದ ಅನುಭವದೊಂದಿಗೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಅರ್ಥಶಾಸ್ತ್ರ, ವಾಣಿಜ್ಯ, ವೃತ್ತಿಪರ ಅಧ್ಯಯನಗಳು, ಸಾರ್ವಜನಿಕ ಆಡಳಿತ ವಿಷಯ ಅಥವಾ ಮಾನ್ಯತೆ ಪಡೆದ ಡಿಪ್ಲೊಮಾ ಇನ್ ಮೆಟೀರಿಯಲ್ ಮ್ಯಾನೇಜ್ಮೆಂಟ್ , 2 ವರ್ಷಗಳ ಅನುಭವದೊಂದಿಗೆ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

Indian Coast Guard Recruitment 2022ರ ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 30 ವರ್ಷಗಳನ್ನು ಮೀರಿರಬಾರದು.

Indian Coast Guard Recruitment 2022 ರ ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವಾಗಿ 35400 ರೂ. ನಿಂದ 112400/-ರೂ.ವರೆಗೆ ವೇತನ ನೀಡಲಾಗುತ್ತದೆ.

Indian Coast Guard Recruitment 2022 ಗಾಗಿ ಆಯ್ಕೆ ಪ್ರಕ್ರಿಯೆ: ಅರ್ಜಿ ಪರಿಶೀಲನೆ ಮತ್ತು ಪ್ರಮಾಣ ಪತ್ರಗಳ ದಾಖಲೆ ಪರಿಶೀಲನೆಯ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

Indian Coast Guard Recruitment 2022 ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 14 ಮಾರ್ಚ್ 2022

Indian Coast Guard Recruitment 2022 ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ  ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಈ ಲಿಂಕ್​ ಅನ್ನು ಕ್ಲಿನ್ ಮಾಡಿ.

(Indian Coast Guard Recruitment 2022 For 11 Posts)

Follow us on

Related Stories

Most Read Stories

Click on your DTH Provider to Add TV9 Kannada