AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ISRO Apprentice Recruitment 2021: ಇಸ್ರೋದಲ್ಲಿ ಅಪ್ರೆಂಟಿಸ್​ಷಿಪ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ಇಸ್ರೋದಿಂದ ಗ್ರಾಜುಯೆಟ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಷಿಪ್ಸ್​ಗಳಿಗೆ ಬೆಂಗಳೂರಿನ ಮುಖ್ಯ ಕಚೇರಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳಿಗೆ ಇಸ್ರೋದ ಅಧಿಕೃತ ವೆಬ್​ಸೈಟ್​ ಆದ isro.gov.inನಲ್ಲಿ ಅರ್ಜಿ ದೊರೆಯುತ್ತದೆ.

ISRO Apprentice Recruitment 2021: ಇಸ್ರೋದಲ್ಲಿ ಅಪ್ರೆಂಟಿಸ್​ಷಿಪ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
ಇಸ್ರೊ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Jul 13, 2021 | 8:25 PM

Share

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation- ಇಸ್ರೋ) ಗ್ರಾಜುಯೆಟ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಷಿಪ್ಸ್​ಗಳಿಗೆ ಬೆಂಗಳೂರಿನ ಮುಖ್ಯ ಕಚೇರಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳಿಗೆ ಇಸ್ರೋದ ಅಧಿಕೃತ ವೆಬ್​ಸೈಟ್​ ಆದ isro.gov.inನಲ್ಲಿ ಅರ್ಜಿ ದೊರೆಯುತ್ತದೆ. ಅರ್ಜಿ ಸಲ್ಲಿಸುವುದಕ್ಕೆ ಜುಲೈ 22, 2021 ಕೊನೆ ದಿನವಾಗಿದೆ. ಅಪ್ಲೈ ಮಾಡುವುದಕ್ಕೆ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ, ಪಿಡಿಎಫ್ ವರ್ಷನ್​ನಲ್ಲಿ ಅದನ್ನು hqapprentice@isro.gov.inಗೆ ಇಮೇಲ್ ಮಾಡಬೇಕು. ಅರ್ಜಿಯ ಜತೆಗೆ ಎಸ್ಸೆಸ್ಸೆಲ್ಸಿ/ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್/ಪ್ರಮಾಣಪತ್ರ, ಪಿಯುಸಿ/ಹನ್ನೆರಡನೇ ತರಗತಿ ಮಾರ್ಕ್ಸ್ ಕಾರ್ಡ್/ಪ್ರಮಾಣಪತ್ರ, ಪದವಿ/ಡಿಪ್ಲೊಮಾ ಮಾರ್ಕ್ಸ್ ಕಾರ್ಡ್ ಎಲ್ಲ ಸೆಮಿಸ್ಟರ್​ಗಳು/ವರ್ಷದ್ದು, ಡಿಗ್ರಿ/ಡಿಪ್ಲೊಮಾ ಪ್ರಮಾಣಪತ್ರ, ಪ್ರಾವಿಷನಲ್ ಪ್ರಮಾಣಪತ್ರ, NATS ಎನ್​ರೋಲ್​ಮೆಂಟ್ ಸಂಖ್ಯೆಯ ಪಿಡಿಎಫ್​ ಸಲ್ಲಿಸಬೇಕು. ಇಮೇಲ್ ಕಳಿಸುವಾಗ ಸಬ್ಜೆಕ್ಟ್​ ಲೈನ್​ನಲ್ಲಿ ಅಪ್ರೆಂಟಿಷಿಪ್ ಕ್ಯಾಟಗರಿಯನ್ನು ಹಾಕಬೇಕು.

ಇಸ್ರೋ ಅಪ್ರೆಂಟಿಸ್​ಷಿಪ್​ 2021: ಹುದ್ದೆಗಳು ಒಟ್ಟು: 43 ಎಂಜಿನಿಯರಿಂಗ್ ಗ್ರಾಜುಯೆಟ್ಸ್: 13 ಡಿಪ್ಲೊಮಾ ಇನ್ ಎಂಜಿನಿಯರಿಂಗ್: 10 ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸಸ್: 20

ಇಸ್ರೋ ಅಪ್ರೆಂಟಿಸ್​ಷಿಪ್ 2021: ಅರ್ಹತೆ ಗ್ರಾಜುಯೆಟ್ ಅಪ್ರೆಂಟಿಸ್​ಷಿಪ್ ಅರ್ಜಿ ಸಲ್ಲಿಸುವಂಥ ಅಭ್ಯರ್ಥಿಗಳು ಭಾರತದ ಅಂಗೀಕೃತ ವಿಶ್ವವಿದ್ಯಾಲಯದಿಂದ ಫಸ್ಟ್ ಕ್ಲಾಸ್ ಎಂಜಿನಿಯರಿಂಗ್ ಡಿಗ್ರಿ ಮಾಡಿರಬೇಕು. ಸರಾಸರಿ ಅಂಕ ಕನಿಷ್ಠ ಶೇ 60ರಷ್ಟಿರಬೇಕು. ಟೆಕ್ನಿಷಿಯನ್ ಅಪ್ರೆಂಟಿಸ್​ಷಿಪ್​ಗೆ ಅಂಗೀಕೃತ ರಾಜ್ಯ ಮಂಡಳಿಯಿಂದ ಡಿಪ್ಲೊಮಾ ಇನ್​ ಎಂಜಿನಿಯರಿಂಗ್​ನಲ್ಲಿ ಆಯಾ ಕ್ಷೇತ್ರದಲ್ಲಿ ಫಸ್ಟ್ ಕ್ಲಾಸ್ ಅಂಕ ಪಡೆದಿರಬೇಕು. ಸರಾಸರಿ ಅಂಕ ಕನಿಷ್ಠ ಶೇ 60ರಷ್ಟು ಪಡೆದಿರಬೇಕು.

ಯಾರು ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್​ಗೆ ಅಪ್ಲೈ ಮಾಡಬೇಕು ಅಂತಿರುತ್ತಾರೋ ಅವರು ಅಂಗೀಕೃತ ರಾಜ್ಯ ಮಂಡಳಿಯಿಂದ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಅನ್ನು ಪ್ರಥಮ ದರ್ಜೆಯಲ್ಲಿ ಪೂರೈಸಿರಬೇಕು. ಕನಿಷ್ಠ ಸರಾಸರಿ ಶೇ 60ರಷ್ಟು ಅಂಕ ಗಳಿಸಿರಬೇಕು. ಒಂದು ವೇಳೆ ಅಭ್ಯರ್ಥಿಗಳು ಆಯ್ಕೆಯಾದಲ್ಲಿ ಪ್ರತಿ ತಿಂಗಳು ಸ್ಟೈಪೆಂಡ್​ ಆಗಿ ರೂ. 8000ದಿಂದ ರೂ. 9000 ನೀಡಲಾಗುತ್ತದೆ. ಅದು ಯಾವ ರೀತಿಯ ಅಪ್ರೆಂಟಿಸ್​ಷಿಪ್ ಎಂಬುದರ ಮೇಲೆ ಅವಲಂಬಿತವಾಗಿದೆ.

ಇದನ್ನೂ ಓದಿ: IBPS RRB 2021: 10 ಸಾವಿರಕ್ಕೂ ಹೆಚ್ಚು ಕಚೇರಿ ಸಹಾಯಕ ಹಾಗೂ ಬ್ಯಾಂಕ್ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ವಿವರ

(ISRO call for 43 jobs of apprenticeship. July 22, 2021 last date to apply. Here is the details)

ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್
ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್
ಜಮ್ಮು ಕಾಶ್ಮೀರದಲ್ಲಿ ಜೆಸಿಬಿ ಮೂಲಕ ಹಿಮಪಾತದ ತೆರವು
ಜಮ್ಮು ಕಾಶ್ಮೀರದಲ್ಲಿ ಜೆಸಿಬಿ ಮೂಲಕ ಹಿಮಪಾತದ ತೆರವು
15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶಿವಂ ದುಬೆ
15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶಿವಂ ದುಬೆ
ಪತಿ, ಸಹೋದರ ಮಾವ ಆತ್ಮಹತ್ಯೆ: ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಅರೆಸ್ಟ್
ಪತಿ, ಸಹೋದರ ಮಾವ ಆತ್ಮಹತ್ಯೆ: ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಅರೆಸ್ಟ್
ಅಜಿತ್ ಪವಾರ್​ ಸಾವಿಗೂ ಮುಂಚಿನ ಕೊನೆಯ ವಿಡಿಯೋ ಇಲ್ಲಿದೆ
ಅಜಿತ್ ಪವಾರ್​ ಸಾವಿಗೂ ಮುಂಚಿನ ಕೊನೆಯ ವಿಡಿಯೋ ಇಲ್ಲಿದೆ
ರಾಜಕೀಯಕ್ಕೆ ಬರಲು ಜೈ ಭೀಮ್ ಎನ್ನುತ್ತೀರಾ? ಉತ್ತರಿಸಿದ ದುನಿಯಾ ವಿಜಯ್
ರಾಜಕೀಯಕ್ಕೆ ಬರಲು ಜೈ ಭೀಮ್ ಎನ್ನುತ್ತೀರಾ? ಉತ್ತರಿಸಿದ ದುನಿಯಾ ವಿಜಯ್
ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣ ಬಿಚ್ಚಿಟ್ಟ ತಾಯಿ
ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣ ಬಿಚ್ಚಿಟ್ಟ ತಾಯಿ
ಉಡುಪಿ: ಅವಮಾನವಾದ ನಿವೃತ್ತ ಯೋಧನಿಗೆ ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ
ಉಡುಪಿ: ಅವಮಾನವಾದ ನಿವೃತ್ತ ಯೋಧನಿಗೆ ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ
ಬಾಲ್ಯದಲ್ಲಿ ಪಟ್ಟ ಕಷ್ಟಗಳ ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ
ಬಾಲ್ಯದಲ್ಲಿ ಪಟ್ಟ ಕಷ್ಟಗಳ ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ
ನನ್ನ 32 ವರ್ಷದ ಗಳಿಕೆಯನ್ನೆಲ್ಲ ದೋಚಿಬಿಟ್ಟರು ಸರ್​​, ಮನೆ ಮಾಲೀಕ ಭಾವುಕ
ನನ್ನ 32 ವರ್ಷದ ಗಳಿಕೆಯನ್ನೆಲ್ಲ ದೋಚಿಬಿಟ್ಟರು ಸರ್​​, ಮನೆ ಮಾಲೀಕ ಭಾವುಕ