KPSC 2021 FDA Admit Card: ಎಫ್ಡಿಎ ಹಾಲ್ ಟಿಕೆಟ್ ಬಿಡುಗಡೆ; ಆನ್ಲೈನ್ನಲ್ಲಿ ಡೌನ್ ಮಾಡೋದು ಹೇಗೆ? ಇಲ್ಲಿದೆ ವಿವರ
Karnataka Public Service Commission: ಇದೇ ಫೆಬ್ರವರಿ 28ರಂದು ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆಗೆ ಒಂದು ವಾರ ಇರುವಾಗ ಹಾಲ್ ಟಿಕೆಟ್ ರಿಲೀಸ್ ಮಾಡಲಾಗಿದೆ.
ಕರ್ನಾಟಕ ಲೋಕ ಸೇವಾ ಆಯೋಗ (Karnataka Public Service Commission – KPSC) ಪ್ರಥಮ ದರ್ಜೆ ಸಹಾಯಕರ (First Division Assistant – FDA) ಹುದ್ದೆಯ ಪರೀಕ್ಷೆಗೆ ಹಾಲ್ ಟಿಕೆಟ್ (ಪ್ರವೇಶ ಪತ್ರ) ಬಿಡುಗಡೆ ಆಗಿದೆ. ಹಾಲ್ ಟಿಕೆಟ್ ಅಭ್ಯರ್ಥಿಗಳು kpscrcruitment.in ವೆಬ್ಸೈಟ್ ಮೂಲಕ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಮೇ 2020ರಂದು ‘ಕೆಪಿಎಸ್ಸಿ ಎಫ್ಡಿಎ ಪರೀಕ್ಷೆ 2021’ ನಡೆಯಬೇಕಿತ್ತು. ಆದರೆ, ಕೊರೊನಾ ಸೋಂಕು ಹೆಚ್ಚಿದ್ದ ಕಾರಣ ಪರೀಕ್ಷೆಯನ್ನು 2021ರ ಜನವರಿ 23, 24ಕ್ಕೆ ಮುಂದೂಡಲಾಗಿತ್ತು. ನಂತರ ಮತ್ತೆ ಪರೀಕ್ಷಾ ದಿನಾಂಕ ಬದಲಾಗಿತ್ತು. ಇದೇ ಫೆಬ್ರವರಿ 28ರಂದು ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆಗೆ ಒಂದು ವಾರ ಇರುವಾಗ ಹಾಲ್ ಟಿಕೆಟ್ ರಿಲೀಸ್ ಮಾಡಲಾಗಿದೆ. ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಸಮಯಕ್ಕೆ ಸಂಬಂಧಿಸಿದ ವಿವರಗಳನ್ನು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿರುತ್ತದೆ.
ಹಾಲ್ಟಿಕೆಟ್ ಡೌನ್ಲೋಡ್ ಮಾಡುವ ಹಂತಗಳ ಬಗ್ಗೆ ಇಲ್ಲಿದೆ ವಿವರ..
- ಮೊದಲು kpscrcruitment.in ವೆಬ್ಸೈಟ್ಗೆ ಭೇಟಿ ನೀಡಿ. ಇದು ಕೆಪಿಎಸ್ಸಿ ಅಧಿಕೃತ ವೆಬ್ಸೈಟ್ ಆಗಿದೆ.
- ನಂತರ ನಿಮ್ಮ ಖಾತೆಯ ಐಡಿ ಹಾಗೂ ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿ..
- ನಂತರ ನಿಮ್ಮ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ.
ಜನವರಿ 24 ರಂದು ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆಯ ಹಿಂದಿನ ದಿನ (ಜನವರಿ 23) ಪತ್ರಿಕೆ ಸೊರಿಕೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೆಪಿಎಸ್ಸಿ ಸಿಬ್ಬಂದಿ ಸೇರಿ ಹಲವು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಫೆ.28ರಂದು ಎಫ್ಡಿಎ ಪರೀಕ್ಷೆ ನಡೆಸಲು ಕೆಪಿಎಸ್ಸಿ ನಿರ್ಧರಿಸಿದ್ದು, ಕಳೆದ ಬಾರಿಯಾದ ಎಡವಟ್ಟು ಮರುಕಳುಹಿಸದಂತೆ ಮುತುವರ್ಜಿ ವಹಿಸಿ ಪರೀಕ್ಷೆ ಸುಸೂತ್ರವಾಗಿ ನಡೆಯುವಂತೆ ಸಿಸಿಬಿ ಪೊಲೀಸರು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: FDA ಪರೀಕ್ಷೆ ಮೇಲೆ ಸಿಸಿಬಿ ಅಧಿಕಾರಿಗಳ ಹದ್ದಿನ ಕಣ್ಣು; ಎಡವಟ್ಟು ಮರುಕಳುಹಿಸದಂತೆ ಮುತುವರ್ಜಿ
Published On - 4:48 pm, Mon, 22 February 21