KSPCB Recruitment 2024: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 152 ಹುದ್ದೆಗಳಿಗೆ ನೇರ ನೇಮಕಾತಿ

|

Updated on: Mar 14, 2024 | 2:04 PM

Karnataka State Pollution Control Board recruitment 2024: ರಾಜ್ಯವ್ಯಾಪಿ ಉಳಿಕೆ ವೃಂದದ 146 ಮತ್ತು ರಾಜ್ಯ ವ್ಯಾಪಿ ಸ್ಥಳೀಯ ವೃಂದದ 6 ಸೇರಿ 152 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಸರ್ಕಾರ ಈಗಾಗಲೇ ಅನುಮತಿ ನೀಡಿದೆ

KSPCB Recruitment 2024: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 152 ಹುದ್ದೆಗಳಿಗೆ ನೇರ ನೇಮಕಾತಿ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 152 ಹುದ್ದೆಗಳಿಗೆ ನೇರ ನೇಮಕಾತಿ
Follow us on

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾನವ ಶಕ್ತಿ ತುಂಬಲು ನಿರ್ಧರಿಸಲಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 152 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಇತ್ತೀಚೆಗೆ ತಿಳಿಸಿದ್ದಾರೆ. KSPCB ಮಂಡಳಿಗೆ ಮಂಜೂರಾಗಿರುವ 253 ಹುದ್ದೆಗಳ ಪೈಕಿ 152 ಹುದ್ದೆಗಳು ತಾಂತ್ರಿಕ, ಪ್ರಯೋಗಶಾಲೆ ಮತ್ತು ಆಡಳಿತ ವಿಭಾಗಗಳಲ್ಲಿ ಖಾಲಿ ಇದ್ದು, 152 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ (Karnataka State Pollution Control Board recruitment 2024) ಭರ್ತಿ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಮಂಡಳಿಯಲ್ಲಿ 153 ಖಾಲಿ ಹುದ್ದೆಗಳ ಭರ್ತಿಗೆ 2010ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಕಾರಣಾಂತರದಿಂದ ಹಲವು ಹುದ್ದೆಗಳು ಭರ್ತಿ ಆಗದೆ ಹಾಗೆ ಉಳಿದಿವೆ. ಈ ಹುದ್ದೆಗಳೂ ಸೇರಿದಂತೆ ಪ್ರಸ್ತುತ, ಮಂಡಳಿಯಲ್ಲಿ ರಾಜ್ಯವ್ಯಾಪಿ ಉಳಿಕೆ ವೃಂದ ಹಾಗೂ ರಾಜ್ಯವ್ಯಾಪಿ ಸ್ಥಳೀಯ ವೃಂದದಡಿ ಖಾಲಿಯಿರುವ ಹುದ್ದೆಗಳ ಪೈಕಿ ಬಹುತೇಕ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Also Read: ನರ್ಸಿಂಗ್ ಅಧಿಕಾರಿಯಾಗಲು ಉತ್ತಮ ಅವಕಾಶ! ನೌಕರರ ರಾಜ್ಯ ವಿಮಾ ನಿಗಮದಲ್ಲಿ ಖಾಯಂ ಹುದ್ದೆಗಳಿಗೆ UPSC ಅಧಿಸೂಚನೆ ಬಿಡುಗಡೆ

ರಾಜ್ಯವ್ಯಾಪಿ ಉಳಿಕೆ ವೃಂದದ 146 ಮತ್ತು ರಾಜ್ಯ ವ್ಯಾಪಿ ಸ್ಥಳೀಯ ವೃಂದದ 6 ಸೇರಿ 152 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಸರ್ಕಾರ ಈಗಾಗಲೇ ಅನುಮತಿ ನೀಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಹುದ್ದೆಗಳ ವಿವರ ಕೆಳಕಂಡಂತಿದೆ:

ಪ್ರಸ್ತುತ, ಮಂಡಳಿಯಲ್ಲಿ ಒಟ್ಟಾರೆ ಖಾಲಿಯಿರುವ ಒಟ್ಟು 253 ಹುದ್ದೆಗಳ ಪೈಕಿ ಸರ್ಕಾರದಿಂದ ಅನುಮತಿಸಿರುವ ಒಟ್ಟು 152 ಹುದ್ದೆಗಳನ್ನು ಭರ್ತಿ ಮಾಡಿದ್ದಲ್ಲಿ, ಶೇಕಡಾ 6೦ ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದಂತಾಗುತ್ತದೆ. ಇದರೊಂದಿಗೆ, ಉಳಿದ 23 ಹುದ್ದೆಗಳನ್ನು ಬ್ಯಾಕ್‌ ಲಾಗ್ ಎಂದು ಪರಿಗಣಿಸಿದ್ದಲ್ಲಿ, ಸದರಿ 152 ಹುದ್ದೆಗಳೊಂದಿಗೆ 23 ಹುದ್ದೆಗಳು ಸಹ ಸೇರಿಸಿ ಒಟ್ಟು 175 ಹುದ್ದೆಗಳನ್ನು ಭರ್ತಿ ಮಾಡಿದಾಗ, ಶೇಕಡ 69 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದಂತಾಗುತ್ತದೆ ಎಂದೂ ಸಚಿವರು ವಿವರಿಸಿದ್ದಾರೆ.

Also Read: KLA Recruitment 2024: ಕರ್ನಾಟಕ ವಿಧಾನ ಪರಿಷತ್​​ ಸಚಿವಾಲಯದಲ್ಲಿ ಡ್ರೈವರ್ ಮತ್ತು ವಿವಿಧ ಗ್ರೂಪ್‌ ಡಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

 

Published On - 2:02 pm, Thu, 14 March 24