AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KLA Recruitment 2024: ಕರ್ನಾಟಕ ವಿಧಾನ ಪರಿಷತ್​​ ಸಚಿವಾಲಯದಲ್ಲಿ ಡ್ರೈವರ್ ಮತ್ತು ವಿವಿಧ ಗ್ರೂಪ್‌ ಡಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

Karnataka Legislative Council Recruitment Drive 2024: ಕರ್ನಾಟಕ ವಿಧಾನ ಮಂಡಲದ ಮೇಲ್ಮನೆ ಸಚಿವಾಲಯದಲ್ಲಿ ವಾಹನ ಚಾಲಕರು ಮತ್ತು ಡಿ ಗುಂಪು ಹುದ್ದೆಗಳ ನೇಮಕಾತಿಗಾಗಿ ನೋಟಿಫಿಕೇಶನ್‌ ಬಿಡುಗಡೆಯಾಗಿದೆ. ನೇರ ನೇಮಕಾತಿ ಮೂಲಕ ಹುದ್ದೆಗಳಿಗೆ ಭರ್ತಿ ಆಗಲಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅದರ ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್​ 05

KLA Recruitment 2024: ಕರ್ನಾಟಕ ವಿಧಾನ ಪರಿಷತ್​​ ಸಚಿವಾಲಯದಲ್ಲಿ ಡ್ರೈವರ್ ಮತ್ತು ವಿವಿಧ ಗ್ರೂಪ್‌ ಡಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ವಿಧಾನ ಪರಿಷತ್​​: ಡ್ರೈವರ್, ವಿವಿಧ ಗ್ರೂಪ್‌ ಡಿ ಹುದ್ದೆಗೆ ಅರ್ಜಿ
ಸಾಧು ಶ್ರೀನಾಥ್​
|

Updated on:Mar 05, 2024 | 1:07 PM

Share

ಕರ್ನಾಟಕ ವಿಧಾನ ಮಂಡಲದ ಮೇಲ್ಮನೆ ಸಚಿವಾಲಯದಲ್ಲಿ ವಾಹನ ಚಾಲಕರು ಮತ್ತು ಡಿ ಗುಂಪು ಹುದ್ದೆಗಳ ನೇಮಕಾತಿಗಾಗಿ (Karnataka Legislative Council Recruitment Drive 2024) ನೋಟಿಫಿಕೇಶನ್‌ ಬಿಡುಗಡೆಯಾಗಿದೆ. ನೇರ ನೇಮಕಾತಿ ಮೂಲಕ ಹುದ್ದೆಗಳಿಗೆ ಭರ್ತಿ ಆಗಲಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅದರ ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್​ 05, 2024. ಕರ್ನಾಟಕ ವಿಧಾನ ಪರಿಷತ್ತಿನ ಅಧಿಕೃತ ವೆಬ್‌ಸೈಟ್‌ ವಿಳಾಸ https://www.kla.kar.nic.in/council/career.htm

ಹುದ್ದೆಗಳ ವಿವರ ವಾಹನ ಚಾಲಕರು : 03 ಗ್ರೂಪ್ ಡಿ ಹುದ್ದೆಗಳು (ದಲಾಯತ್ / ಕಾವಲುಗಾರರು / ಸ್ವೀಪರ್ ಕಮ್ ಸ್ಕ್ಯಾವೆಂಜರ್ / ಸೆಕ್ಯೂರಿಟಿ ಗಾರ್ಡ್‌) : 29

ವೇತನ ಶ್ರೇಣಿ ವಿವರ ವಾಹನ ಚಾಲಕರು : 21,400-42,000. ಗ್ರೂಪ್ ಡಿ ಹುದ್ದೆಗಳು (ದಲಾಯತ್ / ಕಾವಲುಗಾರರು / ಸ್ವೀಪರ್ ಕಮ್ ಸ್ಕ್ಯಾವೆಂಜರ್ / ಸೆಕ್ಯೂರಿಟಿ ಗಾರ್ಡ್‌) : Rs.17,000-28950.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 05-04-2024

ಅರ್ಜಿ ಸಲ್ಲಿಸಬೇಕಾದ ವಿಳಾಸ ಅರ್ಜಿಗಳನ್ನು ಸಚಿವಾಲಯದ ವೆಬ್‌ಸೈಟ್‌ ನಲ್ಲಿ (https://kla.kar.nic.in/council/notification04032024.PDF) ನೀಡಿದ್ದು ನಮೂನೆ-1 ರ ದ್ವಿಪ್ರತಿಯಲ್ಲಿ ಅಗತ್ಯವುಳ್ಳ ದಾಖಲೆಗಳನ್ನು ಲಗತ್ತಿಸಿ, ಕೊನೆಯ ದಿನಾಂಕ 05-04-2024 ರಂದು ಸಂಜೆ 05-00 ಗಂಟೆಯೊಳಗಾಗಿ ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ – 5079, ಮೊದಲನೇ ಮಹಡಿ, ವಿಧಾನಸೌಧ, ಬೆಂಗಳೂರು – 560 001 ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆಯ ಮೂಲಕ ವಿಧಾನ ಸೌಧದ 2ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 216 ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಗೆ ತಲುಪಿಸತಕ್ಕದ್ದು.

ಅರ್ಜಿ ಶುಲ್ಕ ವಿವರ ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50. ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿಯಿದೆ.

ಅರ್ಹತೆಗಳು ವಾಹನ ಚಾಲಕರು ಹುದ್ದೆಗೆ – ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್‌. ಜತೆಗೆ ಮೋಟಾರು ಕಾರು / ಭಾರಿ ವಾಹನಗಳ ಚಾಲನೆಯ ಅಧಿಕೃತ ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಪ್ರಥಮ ಚಿಕಿತ್ಸೆಯ ಪ್ರಮಾಣ ಪತ್ರವನ್ನು ಹೊಂದಿರಬೇಕು. ಮೋಟಾರು ಕಾರುಗಳ ಚಾಲನೆಯಲ್ಲಿ ಕನಿಷ್ಠ ಮೂರು ವರ್ಷಗಳ ಪ್ರಾಯೋಗಿಕ ಅನುಭವ ಹೊಂದಿರಬೇಕು. ಗ್ರೂಪ್ ಡಿ ಹುದ್ದೆಗಳಿಗೆ – ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿಬೇಕು.

ಕರ್ನಾಟಕ ವಿಧಾನ ಪರಿಷತ್ತಿನ ವೆಬ್‌ಸೈಟ್‌ ವಿಳಾಸ https://kla.kar.nic.in/council/notification04032024.PDF

ವಯಸ್ಸಿನ ಅರ್ಹತೆಗಳು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ ಮೀರಿರಬಾರದು, ಇತರೆ ಹಿಂದುಳಿದ ವರ್ಗದವರಿಗೆ ಗರಿಷ್ಠ 38 ವರ್ಷ ಮೀರಿರಬಾರದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.

Published On - 12:59 pm, Tue, 5 March 24