KMF Recruitment 2023: ಕೆಎಂಎಫ್ ನೇಮಕಾತಿ: ತಿಂಗಳ ವೇತನ 97 ಸಾವಿರ ರೂ.
KMF TUMUL Recruitment 2023: ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧಿಕೃತ ವೆಬ್ಸೈಟ್ tumul.coop ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
KMF TUMUL Recruitment 2023: ಕರ್ನಾಟಕ ಹಾಲು ಒಕ್ಕೂಟದ ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿನ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು 219 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 17 ರೊಳಗೆ ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧಿಕೃತ ವೆಬ್ಸೈಟ್ tumul.coop ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನು? ವೇತನ ಎಷ್ಟಿರಲಿದೆ ಎಂಬಿತ್ಯಾದಿ ಮಾಹಿತಿಗಳ ಸಂಪೂರ್ಣ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರಗಳು:
- ಸಂಸ್ಥೆಯ ಹೆಸರು : KMF ತುಮಕೂರು ಕೋ-ಆಪರೇಟಿವ್ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ( KMF TUMUL)
- ಹುದ್ದೆಗಳು ಸಂಖ್ಯೆ: 219
- ಉದ್ಯೋಗ ಸ್ಥಳ: ತುಮಕೂರು – ಕರ್ನಾಟಕ
- ಹುದ್ದೆಯ ಹೆಸರು: ಸಹಾಯಕ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್
ಹುದ್ದೆಗಳ ವಿವರ ಮತ್ತು ಸಂಖ್ಯೆ:
- ಸಹಾಯಕ ವ್ಯವಸ್ಥಾಪಕ – 28 ಹುದ್ದೆಗಳು
- ವೈದ್ಯಕೀಯ ಅಧಿಕಾರಿ- 1 ಹುದ್ದೆ
- ಆಡಳಿತ ಅಧಿಕಾರಿ- 1 ಹುದ್ದೆ
- ಖರೀದಿ/ಸ್ಟೋರ್ಕೀಪರ್- 3 ಹುದ್ದೆಗಳು
- MIS/ಸಿಸ್ಟಮ್ ಅಧಿಕಾರಿ- 1 ಹುದ್ದೆ
- ಲೆಕ್ಕಪತ್ರ ಅಧಿಕಾರಿ- 2 ಹುದ್ದೆಗಳು
- ಮಾರ್ಕೆಟಿಂಗ್ ಅಧಿಕಾರಿ- 3 ಹುದ್ದೆಗಳು
- ತಾಂತ್ರಿಕ ಅಧಿಕಾರಿ- 14 ಹುದ್ದೆಗಳು
- ತಂತ್ರಜ್ಞ- 1 ಹುದ್ದೆ
- ವಿಸ್ತರಣಾಧಿಕಾರಿ- 22 ಹುದ್ದೆ
- MIS ಸಹಾಯಕ ಗ್ರೇಡ್I- 2 ಹುದ್ದೆಗಳು
- ಆಡಳಿತ ಸಹಾಯಕ ಗ್ರೇಡ್ 2- 13 ಹುದ್ದೆಗಳು
- ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್2- 12 ಹುದ್ದೆಗಳು
- ಮಾರ್ಕೆಟಿಂಗ್ ಸಹಾಯಕ ಗ್ರೇಡ್2- 18 ಹುದ್ದೆಗಳು
- ಖರೀದಿ ಸಹಾಯಕ ಗ್ರೇಡ್2 – 6 ಹುದ್ದೆಗಳು
- ರಸಾಯನಶಾಸ್ತ್ರಜ್ಞ ಗ್ರೇಡ್2- 4 ಹುದ್ದೆಗಳು
- ಜೂನಿಯರ್ ಸಿಸ್ಟಮ್ ಆಪರೇಟರ್- 10 ಹುದ್ದೆಗಳು
- ಕೋ-ಆರ್ಡಿನೇಟರ್ (ರಕ್ಷಣೆ)- 2 ಹುದ್ದೆಗಳು
- ದೂರವಾಣಿ ನಿರ್ವಾಹಕ- 2 ಹುದ್ದೆಗಳು
- ಜೂನಿಯರ್ ತಂತ್ರಜ್ಞ- 64 ಹುದ್ದೆಗಳು
- ಚಾಲಕರು- 8 ಹುದ್ದೆಗಳು
- ಲ್ಯಾಬ್ ಸಹಾಯಕ- 2 ಹುದ್ದೆಗಳು
ಅರ್ಹತಾ ಮಾನದಂಡಗಳು:
- ಸಹಾಯಕ ವ್ಯವಸ್ಥಾಪಕ: BVSc & AH, ಎಂಜಿನಿಯರಿಂಗ್‌ನಲ್ಲಿ ಪದವಿ, M.Sc, ಸ್ನಾತಕೋತ್ತರ ಪದವಿ ಮಾಡಿರಬೇಕು.
- ವೈದ್ಯಕೀಯ ಅಧಿಕಾರಿ: ಎಂಬಿಬಿಎಸ್ ಮಾಡಿರಬೇಕು.
- ಆಡಳಿತಾಧಿಕಾರಿ: LLB, BAL, MBA, MSW ಪದವಿ ಮಾಡಿರಬೇಕು.
- ಖರೀದಿ/ಸ್ಟೋರ್ಕೀಪರ್ : BBM, BBA, M.Com, MBA, ಸ್ನಾತಕೋತ್ತರ ಮಾಡಿರಬೇಕು.
- MIS/ಸಿಸ್ಟಮ್ ಆಫೀಸರ್: BE (CS/IS/E&C), MCA ಪದವಿ ಮಾಡಿರಬೇಕು.
- ಅಕೌಂಟ್ಸ್ ಆಫೀಸರ್: M.Com, MBA (ಫೈನಾನ್ಸ್) ಮಾಡಿರಬೇಕು.
- ಮಾರ್ಕೆಟಿಂಗ್ ಅಧಿಕಾರಿ: B.Sc, MBA (ಮಾರ್ಕೆಟಿಂಗ್) ಮಾಡಿರಬೇಕು.
- ತಾಂತ್ರಿಕ ಅಧಿಕಾರಿ: ಬಿ.ಟೆಕ್ (ಡಿಟಿ) ಮಾಡಿರಬೇಕು.
- ತಂತ್ರಜ್ಞ: ಮೆಕ್ಯಾನಿಕಲ್‌ನಲ್ಲಿ ಬಿಇ, ಸಿವಿಲ್, ಎಂಎಸ್ಸಿ ಪದವಿ ಮಾಡಿರಬೇಕು.
- ವಿಸ್ತರಣಾ ಅಧಿಕಾರಿ: ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು.
- MIS ಸಹಾಯಕ ಗ್ರೇಡ್-I: B.Sc, BCA, BE (CS) ಮಾಡಿರಬೇಕು.
- ಆಡಳಿತ ಸಹಾಯಕ ಗ್ರೇಡ್-2: ಯಾವುದಾದರು ಪದವಿ ಹೊಂದಿರಬೇಕು.
- ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2: ಬಿ.ಕಾಂ ಪದವಿ ಮಾಡಿರಬೇಕು.
- ಮಾರ್ಕೆಟಿಂಗ್ ಅಸಿಸ್ಟೆಂಟ್ ಗ್ರೇಡ್-2: ಬಿಬಿಎ, ಬಿಬಿಎಂ ಮಾಡಿರಬೇಕು.
- ಖರೀದಿ ಸಹಾಯಕ ಗ್ರೇಡ್-2: ಯಾವುದಾದರು ಪದವಿ ಹೊಂದಿರಬೇಕು.
- ರಸಾಯನಶಾಸ್ತ್ರಜ್ಞ ಗ್ರೇಡ್-2: ವಿಜ್ಞಾನದಲ್ಲಿ ಪದವಿ ಮಾಡಿರಬೇಕು.
- ಜೂನಿಯರ್ ಸಿಸ್ಟಮ್ ಆಪರೇಟರ್: B.Sc, BCA, BE (CS/IS) ಮಾಡಿರಬೇಕು.
- ಕೋ-ಆರ್ಡಿನೇಟರ್ (ಪ್ರೊಟೆಕ್ಷನ್): ಎಸ್.ಎಸ್.ಎಲ್.ಸಿ ಪಾಸ್ ಆಗಿರಬೇಕು.
- ಟೆಲಿಫೋನ್ ಆಪರೇಟರ್: ಯಾವುದೇ ಪದವಿ ಹೊಂದಿರಬೇಕು.
- ಜೂನಿಯರ್ ಟೆಕ್ನಿಷಿಯನ್: SSLC, ಮೆಕ್ಯಾನಿಕಲ್/ಎಲೆಕ್ಟ್ರಿಕಲ್/E&C ನಲ್ಲಿ ಡಿಪ್ಲೊಮಾ, ITI ಮಾಡಿರಬೇಕು.
- ಚಾಲಕರು: SSLC ಪಾಸ್ ಆಗಿರಬೇಕು. ಜೊತೆ LMV/HMV ಚಾಲನಾ ಪರವಾನಗಿ ಹೊಂದಿರಬೇಕು.
- ಲ್ಯಾಬ್ ಅಸಿಸ್ಟೆಂಟ್: ಪಿಯುಸಿ ಪಾಸ್ ಆಗಿರಬೇಕು.
ವಯೋಮಿತಿ:
KMF ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು. ಇನ್ನು ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ವೇತನ ನಿಗದಿ ಮಾಡಲಾಗುತ್ತದೆ. ಅಂದರಂತೆ ಕನಿಷ್ಠ 21 ಸಾವಿರದಿಂದ ಗರಿಷ್ಠ 97 ಸಾವಿರದವರೆಗೆ ವೇತನ ಸಿಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಪರಿಶೀಲಿಸಬಹುದು.
ಅರ್ಜಿ ಶುಲ್ಕ:
- SC/ST/Cat-I ಅಭ್ಯರ್ಥಿಗಳಿಗೆ: ರೂ.500/-
- ಇತರ ಎಲ್ಲಾ ಅಭ್ಯರ್ಥಿಗಳಿಗೆ: ರೂ.1000/-
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: Karnataka High Court Recruitment 2023: ಕರ್ನಾಟಕ ಹೈಕೋರ್ಟ್ನಲ್ಲಿನ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಏಪ್ರಿಲ್ 17, 2023
ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್‌ಗಳು:
- ಅಧಿಕೃತ ಅಧಿಸೂಚನೆ ಓದಲು: ಇಲ್ಲಿ ಕ್ಲಿಕ್ ಮಾಡಿ
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್: tumul.coop
Published On - 3:14 pm, Sat, 18 March 23