KPTCL Recruitment 2022: ಕರ್ನಾಟಕ ವಿದ್ಯುತ್ ನಿಗಮದಲ್ಲಿ ಉದ್ಯೋಗಾವಕಾಶ: 72 ಸಾವಿರ ರೂ. ವೇತನ

| Updated By: ಝಾಹಿರ್ ಯೂಸುಫ್

Updated on: Feb 09, 2022 | 9:00 AM

KPTCL Recruitment 2022: ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ವರ್ಷದಿಂದ 35 ವರ್ಷಗಳ ನಡುವೆ ಇರಬೇಕು. ಅದೇ ಸಮಯದಲ್ಲಿ, ಗರಿಷ್ಠ ವಯಸ್ಸಿನ ಮಿತಿಯಲ್ಲಿ, OBC ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು SC ಮತ್ತು ST ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.

KPTCL Recruitment 2022: ಕರ್ನಾಟಕ ವಿದ್ಯುತ್ ನಿಗಮದಲ್ಲಿ ಉದ್ಯೋಗಾವಕಾಶ: 72 ಸಾವಿರ ರೂ. ವೇತನ
KPTCL Recruitment 2022
Follow us on

KPTCL Recruitment 2022: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ( KPTCL) ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ 1492 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು 7ನೇ ಫೆಬ್ರವರಿ 2022 ರಿಂದ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ kptcl.karnataka.gov.in ಮೂಲಕ ಫೆಬ್ರವರಿ 28 ರ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ನೇಮಕಾತಿಯ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.

KPTCL Recruitment 2022: ಖಾಲಿ ಹುದ್ದೆಗಳ ಸಂಖ್ಯೆ
ಜೂನಿಯರ್ ಇಂಜಿನಿಯರ್ – 599
ಜೂನಿಯರ್ ಅಸಿಸ್ಟೆಂಟ್ – 360
ಸಹಾಯಕ ಇಂಜಿನಿಯರ್ – 533

KPTCL Recruitment 2022: ಶೈಕ್ಷಣಿಕ ಅರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ಸ್ಟ್ರೀಮ್‌ನಲ್ಲಿ ಡಿಪ್ಲೊಮಾ ಅಥವಾ ಪದವಿಯನ್ನು ಹೊಂದಿರಬೇಕು. ಹೆಚ್ಚಿನ ಶೈಕ್ಷಣಿಕ ಅರ್ಹತೆ ಮತ್ತು ಈ ನೇಮಕಾತಿಗೆ ಸಂಬಂಧಿಸಿದ ಇತರ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲಿಸಬಹುದು.

KPTCL Recruitment 2022: ವಯೋಮಿತಿ:
ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ವರ್ಷದಿಂದ 35 ವರ್ಷಗಳ ನಡುವೆ ಇರಬೇಕು. ಅದೇ ಸಮಯದಲ್ಲಿ, ಗರಿಷ್ಠ ವಯಸ್ಸಿನ ಮಿತಿಯಲ್ಲಿ, OBC ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು SC ಮತ್ತು ST ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.

KPTCL Recruitment 2022: ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

KPTCL Recruitment 2022: ವೇತನ:
ಜೂನಿಯರ್ ಇಂಜಿನಿಯರ್ – 41 ಸಾವಿರದಿಂದ 72 ಸಾವಿರದೊಳಗೆ ವೇತನ ನೀಡಲಾಗುತ್ತದೆ.
ಜೂನಿಯರ್ ಅಸಿಸ್ಟೆಂಟ್ – 26 ಸಾವಿರದಿಂದ 65 ಸಾವಿರದೊಳಗೆ ವೇತನ ನೀಡಲಾಗುತ್ತದೆ.
ಸಹಾಯಕ ಇಂಜಿನಿಯರ್ – 20 ಸಾವಿರದಿಂದ 51 ಸಾವಿರದೊಳಗೆ ವೇತನ ನೀಡಲಾಗುತ್ತದೆ.

KPTCL Recruitment 2022: ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 7 ಫೆಬ್ರವರಿ 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 28 ಫೆಬ್ರವರಿ 2022

ಈ ನೇಮಕಾತಿಯ ಕುರಿತಾದ ಸಂಪೂರ್ಣ ಮಾಹಿತಿಯ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!