KVS Recruitment 2022: ಕೇಂದ್ರೀಯ ವಿದ್ಯಾಲಯಗಳಲ್ಲಿ ಶಿಕ್ಷಕರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ದೇಶಾದ್ಯಂತ ವಿವಿಧ ಶಾಲೆಗಳಲ್ಲಿ ಟಿಜಿಟಿ, ಪಿಜಿಟಿ, ಪಿಆರ್‌ಟಿ ಸೇರಿದಂತೆ ಒಟ್ಟು 13404 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗಾಗಿ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಅರ್ಹತಾ ಮಾನದಂಡಗಳೇನು ಎಂಬಿತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗಗೆ ನೀಡಲಾಗಿದೆ.
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸ್ನಾತಕೋತ್ತರ ಪದವಿಯೊಂದಿಗೆ B.Ed ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು. ಇದರೊಂದಿಗೆ ಸಹಾಯಕ ಆಯುಕ್ತರಾಗಿ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸಿನ ಮಿತಿ 50 ವರ್ಷಗಳು. ಆದರೆ, ಕೇಂದ್ರೀಯ ವಿದ್ಯಾಲಯ ಸಂಘಟನೆಯ ನೌಕರರಿಗೆ ಯಾವುದೇ ವಯೋಮಿತಿ ಇರುವುದಿಲ್ಲ. ಹಾಗೆಯೇ OBC, SC, ST ಮತ್ತು ಮಾಜಿ ಉದ್ಯೋಗಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಗಾಗಿ ಸ್ವೀಕರಿಸಿದ ಅರ್ಜಿಗಳ ಪರಿಶೀಲನೆಯ ನಂತರ, ಅರ್ಹ ಅಭ್ಯರ್ಥಿಗಳನ್ನು ದೆಹಲಿಯಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಏಳನೇ ವೇತನ ಶ್ರೇಣಿ ಆಯೋಗದ ಅಡಿಯಲ್ಲಿ ₹ 78800 ರಿಂದ ₹ 209202 ರವರೆಗಿನ ವೇತನವನ್ನು ನೀಡಲಾಗುತ್ತದೆ.
ಇದನ್ನೂ ಓದಿ: Job News: ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ ಈ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕ ಅರ್ಜಿ ನಮೂನೆಯನ್ನು ಕಳುಹಿಸಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ:
Joint Commissioner (Admn.-I), Kendriya Vidyalaya Sangathan, 18, Institutional Area, Shaheed Jeet Singh Marg, New Delhi-110016
ಪ್ರಮುಖ ದಿನಾಂಕ:
ಅರ್ಜಿ ನಮೂನೆಯು ಜನವರಿ 31, 2023 ರೊಳಗೆ ತಲುಪಬೇಕು.
ಇದನ್ನೂ ಓದಿ: Central Railway Recruitment 2022: 2422 ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ಕ್ಲಾಸ್ ಪಾಸ್ ಆದವರಿಗೆ ಉದ್ಯೋಗಾವಕಾಶ
ಅರ್ಜಿ ಸಿಗೋದು ಎಲ್ಲಿ?
ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.