NID faculty Recruitment 2022: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್​ನಲ್ಲಿ ಉದ್ಯೋಗಾವಕಾಶ

| Updated By: ಝಾಹಿರ್ ಯೂಸುಫ್

Updated on: Feb 21, 2022 | 6:57 PM

NID recruitment 2022: ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಮುಂದೆ ಓದಿ...

NID faculty Recruitment 2022: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್​ನಲ್ಲಿ ಉದ್ಯೋಗಾವಕಾಶ
NID recruitment 2022
Follow us on

NID faculty Recruitment 2022: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (NID) ಸಂಸ್ಥೆಯು 23 ಫ್ಯಾಕಲ್ಟಿ ಹುದ್ದೆಗಳಿಗೆ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ. NID ನೇಮಕಾತಿ 2022 ರ ಅಡಿಯಲ್ಲಿ, ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಫ್ಯಾಕಲ್ಟಿ, ಪ್ರಿನ್ಸಿಪಾಲ್ ಟೆಕ್ನಿಕಲ್ ಇನ್‌ಸ್ಟ್ರಕ್ಟರ್, ಸೀನಿಯರ್ ಟೆಕ್ನಿಕಲ್ ಇನ್‌ಸ್ಟ್ರಕ್ಟರ್, ಸೀನಿಯರ್ ಡಿಸೈನ್ ಬೋಧಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗಾಗಿ ಅಧಿಕೃತ ವೆಬ್‌ಸೈಟ್ nidmp.ac.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

NID faculty Recruitment 2022 : ಹುದ್ದೆಯ ವಿವರಗಳು:
ಪ್ರಿನ್ಸಿಪಾಲ್ ಡಿಸೈನರ್ (ಪ್ರೊಫೆಸರ್) – 3 ಹುದ್ದೆಗಳು
ಸೀನಿಯರ್ ಫ್ಯಾಕಲ್ಟಿ / ಡಿಸೈನರ್ (ಸಹ ಪ್ರಾಧ್ಯಾಪಕರು) – 3 ಹುದ್ದೆಗಳು
ಅಸೋಸಿಯೇಟ್ ಸೀನಿಯರ್ ಫ್ಯಾಕಲ್ಟಿ / ಡಿಸೈನರ್ (ಸಹಾಯಕ ಪ್ರಾಧ್ಯಾಪಕರು) – 5 ಹುದ್ದೆಗಳು
ಡಿಸೈನರ್ / ಫ್ಯಾಕಲ್ಟಿ – 7 ಹುದ್ದೆಗಳು
ಪ್ರಿನ್ಸಿಪಾಲ್ ಪೋಸ್ಟ್ ಟೆಕ್ನಿಕಲ್ ಇನ್‌ಸ್ಟ್ರಕ್ಟರ್ – 2 ಹುದ್ದೆಗಳು
ಟೆಕ್ನಿಕಲ್ ಇನ್‌ಸ್ಟ್ರಕ್ಟರ್ – 2 ಹುದ್ದೆಗಳು
ಸೀನಿಯರ್ ವಿನ್ಯಾಸ ಬೋಧಕ – 1 ಹುದ್ದೆ

NID faculty Recruitment 2022: ಅಗತ್ಯವಿರುವ ಶೈಕ್ಷಣಿಕ ಅರ್ಹತೆಗಳು:
ಅರ್ಜಿದಾರನು ಇಂಡಸ್ಟ್ರಿಯಲ್ ಡಿಸೈನ್, ಕಮ್ಯುನಿಕೇಷನ್ ಡಿಸೈನ್, ಟೆಕ್ಸ್‌ಟೈಲ್ ಮತ್ತು ಅಪ್ಯಾರಲ್ ಡಿಸೈನ್‌ನಲ್ಲಿ ವಿಶೇಷತೆಯೊಂದಿಗೆ ವಿನ್ಯಾಸದಲ್ಲಿ ಪಿಜಿ ಪದವಿ/ಡಿಪ್ಲೊಮಾ ಪದವಿ ಪಡೆದಿರಬೇಕು.

NID faculty Recruitment 2022: ಅರ್ಜಿ ಶುಲ್ಕ:
ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ – 1000 ರೂ.
SC, ST, EWS, ದಿವ್ಯಾಂಗ, ಮಾಜಿ ಸೈನಿಕ, ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

NID faculty Recruitment 2022: ಅರ್ಜಿ ಸಲ್ಲಿಸುವುದು ಹೇಗೆ?
– ಮೊದಲಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ nidmp.ac.in ವೆಬ್‌ಸೈಟ್‌ಗೆ ಹೋಗಿ
– ಮುಖಪುಟದಲ್ಲಿ ವೃತ್ತಿಗಳ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
– ಆಗ ಕಾಣಿಸುವ ಲಿಂಕ್ ಅನ್ನು ಕ್ಲಿಕ್ ಮಾಡಿ ವಿವಿಧ ಫ್ಯಾಕಲ್ಟಿ ಪೋಸ್ಟ್‌ಗಳಿಗೆ ನೇಮಕಾತಿ ಆಯ್ಕೆ ಇರುತ್ತೆ.
– ಬಳಿಕ ನೋಂದಾಯಿಸಿ ಮತ್ತು ಲಾಗ್ ಇನ್ ಮಾಡಿ
– ಇದಾದ ನಂತರ ಅರ್ಜಿ ಶುಲ್ಕವನ್ನು ಪಾವತಿಸಿ
– ಅರ್ಜಿ ಸಲ್ಲಿಸಿದ ಬಳಿಕ, ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(NID recruitment 2022: Apply for 23 faculty positions)